ತೀರ್ಥಹಳ್ಳಿ: ದೇವಸ್ಥಾನಗಳ ಸಂರಕ್ಷಣೆ ಹಾಗೂ ಪೂಜಾ ವಿ„ ವಿಧಾನ ನಿರಂತರವಾಗಿ ನಡೆಯುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಭಗವಂತ ಪ್ರಸನ್ನವಾಗಿದ್ದರೆ ನಮ್ಮೆಲ್ಲರಿಗೆ ಶ್ರೇಯಸ್ಸು ಎಂದು ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ತಾಲೂಕಿನ ತೀರ್ಥಮತ್ತೂರು ಸಮೀಪದ ಕೊಡಿಗೆಬೈಲು ದೇವಾಲೆಕೊಪ್ಪದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯ ಮರು ಪ್ರತಿಷ್ಠಾಪನೆಎ ಮತ್ತು ಮಹಾಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಒಳ್ಳೆಯ ಕೆಲಸ ಮಾಡುವುದೇ ಧರ್ಮ, ಪಾಪದ ಕೆಲಸಗಳನ್ನು ಮಾಡಿದರೆ ಅಧರ್ಮ ಅನುಸರಿಸಿದಂತೆ ಆಗುತ್ತದೆ. ಧರ್ಮ, ಅಧರ್ಮದ -Àಲಗಳು ನಮ್ಮ ಬದುಕಿನಲ್ಲಿ ಎದುರಾಗುತ್ತವೆ. ನಾವು ಮಾಡಿದ ಒಳ್ಳೆಯ ಕೆಲಸಗಳೇ ನಮಗೆ ಉತ್ತಮ -Àಲವನ್ನು ಸಿಗುವಂತೆ ಮಾಡುತ್ತವೆ. ಜೀವನದಲ್ಲಿ ಕಷ್ಟಕರ ಸನ್ನಿವೇಶದಿಂದ ಪಾರಾದ ಸಂದರ್ಭದಲ್ಲಿ ಅನುಭವಿಸುವ ಆಶ್ಚರ್ಯಕರ ಸಂಗತಿಯೇ ನಾವು ಮಾಡಿದ ಧರ್ಮಕಾರ್ಯಗಳ -Àಲ ಎಂದು ತಿಳಿಸಿದರು.
ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಇಂದು ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿದ್ದು ಭಕ್ತರ -Àಲ ಸಿದ್ಧಿಸುವ ಧಾರ್ಮಿಕ ಕೇಂದ್ರವಾಗಿ ರೂಪುಗೊಂಡಿದೆ. ನಿರಂತರ ಪೂಜಾ ವಿ„ವಿಧಾನಗಳು ನಡೆಯುವಂತೆ ಆಗಬೇಕು ಎಂದು ಹೇಳಿದರು.
ಮಾ. 10ರ ಬೆಳಗ್ಗೆ 9.45ಕ್ಕೆ ನಾಗ ಪ್ರತಿಷ್ಠಾಪನೆ ಕಲಶಾಭಿಷೇಕ, ಮಲ್ಲಿಕಾರ್ಜುನ ದೇವರಿಗೆ ಶತರುದ್ರಾಭಿಷೇಕ, ಮಹಾಪೂಜೆ ಹಾಗೂ ಮಹಾಪ್ರಸಾದ ವಿನಿಯೋಗ ಇರಲಿದೆ. ಸಂಜೆ 7ಕ್ಕೆ ರೂಪಕಲಾ ಕುಂದಾಪುರ ಬಾಲಕೃಷ್ಣ ಪೈ ಅರ್ಪಿಸುವ ಮೂರು ಮುತ್ತು ಕಲಾವಿದರಿಂದ ಹಾಸ್ಯ ನಗೆ ನಾಟಕ ನಡೆಯಲಿದೆ.
ಕೊಡಿಗೆಬೈಲು ದೇವಾಲೆಕೊಪ್ಪದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಗರ್ಭಗುಡಿ ಮರು ಪ್ರತಿಷ್ಠಾಪನೆ
You Might Also Like
ಉಡುಗೆಗೆ ಮ್ಯಾಚ್ ಆಗುವ ಲಿಪ್ಸ್ಟಿಕ್ ಆಯ್ಕೆ ಮಾಡುವುದೇಗೆ?; ಇಲ್ಲಿದೆ ಸಿಂಪಲ್ ಟಿಪ್ಸ್ | Beauty Tips
ನಾವು ಮದುವೆಗೆ ಚೆಂದದ ಬಟ್ಟೆಗಳನ್ನು ಆಯ್ಕೆ ಮಾಡುತ್ತೇವೆ. ಆದ್ದರಿಂದ ಯಾರೂ ನಮಗಿಂತ ಹೆಚ್ಚು ಸುಂದರವಾಗಿ ಕಾಣುವುದಿಲ್ಲ.…
ಚಳಿಗಾಲದಲ್ಲಿ ವಿಟಮಿನ್ ಡಿ ಕೊರತೆಯೇ?; ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ | Health Tips
ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಆದರೆ ಈ ಪೋಷಕಾಂಶವು ಅನೇಕ…
Mushrooms for Cancer: ಅಣಬೆ ತಿಂದರೆ ಯಾವುದೇ ಕ್ಯಾನ್ಸರ್ ಇದ್ರು ಕಂಟ್ರೋಲ್…!
Mushrooms for Cancer : ಕ್ಯಾನ್ಸರ್ ರೋಗ ಅಪಾಯಕಾರಿ. ಕ್ಯಾನ್ಸರ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ. ಕ್ಯಾನ್ಸರ್ನಲ್ಲಿ…