ಪೊನ್ನಂಪೇಟೆ ಬಳಿ ಕಾರು ಅಪಘಾತ: ಯುವಕ ಸಾವು

ಮಡಿಕೇರಿ: ಇಲ್ಲಿನ  ಪೊನ್ನಂಪೇಟೆಯ ಜನತಾ ಕಾಲನಿ ಸಮೀಪದ ಬಾಳೆಲೆ ಮುಖ್ಯರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿ ನಿಲ್ಲಿಸಿದ ಹಿಟಾಚಿಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಕಿರುಗೂರು ಗ್ರಾಮದ ಸುಬ್ರಮಣಿ ಎಂಬುವವರ ಪುತ್ರ ಕಾವೇರಪ್ಪ (27) ಮೃತ ದುರ್ದೈವಿ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕಾವೇರಪ್ಪ ತನ್ನ ಸಂಬಂಧಿಕರ ಮದುವೆಗೆಂದು ತನ್ನ ಸ್ವಗ್ರಾಮಕ್ಕೆ ಆಗಮಿಸಿ ಹಿಂತಿರುಗುವ ವೇಳೆ ಈ ಅವಘಡ ಸಂಭವಿಸಿದೆ.

ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *