ಕೊಕಟನೂರ: ಬೈಕ್ ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

ಕೊಕಟನೂರ: ಸಂಕೋನಟ್ಟಿ ಗ್ರಾಮದ ಹೊರವಲಯದ ಚಿಕ್ಕಟ್ಟಿ ರಸ್ತೆಯ ತಿರುವಿನಲ್ಲಿ ಭಾನುವಾರ ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸವಾರರು ಗಂಭೀರ ಗಾಯಗೊಂಡಿದ್ದಾರೆ.
ಸಂಕೋನಟ್ಟಿ ಗ್ರಾಮದ ವಿಶ್ವನಾಥ ಬಾಬು ನಾಯಿಕ, ಚಿಕ್ಕಟ್ಟಿ ಗ್ರಾಮದ ಅಜಿತ ಕುದರಿ ಗಾಯಗೊಂಡವರು. ಗಾಯಗೊಂಡ ಅಜಿತ ಹಾಗೂ ವಿಶ್ವನಾಥನನ್ನು ಮೊದಲಿಗೆ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಳಿಕ ಅಜಿತ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಿರಜ್ ಆಸ್ಪತ್ರೆಗೆ ಸಾಗಿಸಲಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.