ಕೈಮಗ್ಗ ನೇಕಾರರಿಂದ ರಾಜ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಬೆಳಗಾವಿ: ಕೈಮಗ್ಗ ನೇಕಾರರ ಕೌಶಲ್ಯವನ್ನು ಗುರುತಿಸಿ ಕೈಮಗ್ಗ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಕೈಮಗ್ಗ ನೇಯ್ಗೆ ವೃತ್ತಿಯಲ್ಲಿ ನೈಪುಣೈತೆ, ಶ್ರೇಷ್ಠತೆ, ತಾಂತ್ರಿಕತೆ, ಉತ್ಕೃಷ್ಟತೆ ಹೊಂದಿರುವ ಕೈಮಗ್ಗ ನೇಕಾರರಿಗೆ 2023-24ನೇ ಸಾಲಿನ ರಾಜ್ಯ ಪ್ರಶಸ್ತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಉಪ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ, ಸಾಮರ್ಥ್ಯ ಸೌಧ ಕಟ್ಟಡ, ಹರಿಮಂದಿರ ರಸ್ತೆ, ಅನಗೋಳ, ಬೆಳಗಾವಿ ಕಚೇರಿಗೆ ಸಂಪರ್ಕಿಸಿ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಉತ್ಪನ್ನದ ಮಾದರಿ ಯೊಂದಿಗೆ ಮೇ.31, 2023ರ ಒಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ-0831-2950674ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತಿ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.