ಕೇಸರಿ ಪಡೆ ಸೇರಿದ ಪರಿಣೀತಿ!

ಅಕ್ಷಯ್ ಕುಮಾರ್ ‘ಕೇಸರಿ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಅಧಿಕೃತವಾಗುತ್ತಿದ್ದಂತೆ, ಸಿನಿರಸಿಕರ ಕುತೂಹಲ ಕೆರಳಿತ್ತು. ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ಫಸ್ಟ್ ಪೋಸ್ಟರ್​ನಲ್ಲಿ ಅಕ್ಷಯ್ ಸಿಖ್ ಯೋಧನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದರು. ಅಕ್ಕಿ ಲುಕ್ ಈ ಸಿನಿಮಾದ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡುವ ಕೆಲಸ ಮಾಡಿತ್ತು. ಈ ಎಲ್ಲ ಕುತೂಹಲಗಳ ನಡುವೆ, ಈಗ ಹೀರೋಯಿನ್ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಅಕ್ಷಯ್ಗೆ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇದು ವದಂತಿ ಎಂದು ಭಾವಿಸಬೇಡಿ.

ಚಿತ್ರದ ನಿರ್ವಪಕ ಕರಣ್ ಜೋಹರ್ ಖುದ್ದು ಈ ಬಗ್ಗೆ ಹೇಳಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಬಹುನಿರೀಕ್ಷಿತ ‘ಕೇಸರಿ’ ಚಿತ್ರಕ್ಕೆ ನಾಯಕಿ ಯಾರು ಎಂಬ ಪ್ರಶ್ನೆ ಎಲ್ಲ ಕಡೆಯಿಂದ ಬರುತ್ತಿತ್ತು. ಈಗ ಅದಕ್ಕೆ ಉತ್ತರ ಹೊತ್ತು ತಂದಿದ್ದೇವೆ. ಅಕ್ಷಯ್ಗೆ ಜತೆಯಾಗಿ ಪರಿಣೀತಿ ಕಾಣಿಸಿಕೊಳ್ಳುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ‘ಪ್ಯಾಡ್​ವುನ್’ ಚಿತ್ರ ಬಿಡುಗಡೆಗೂ ಮುನ್ನವೇ ಅಕ್ಷಯ್ಕುಮಾರ್ ‘ಕೇಸರಿ’ ಚಿತ್ರೀಕರಣ ಆರಂಭಿಸಿದ್ದರು. ಈ ಚಿತ್ರಕ್ಕೆ ಕರಣ್ ಜೋಹರ್ ಮತ್ತು ಅಕ್ಷಯ್ ಒಟ್ಟಾಗಿ ಬಂಡವಾಳ ಹೂಡುತ್ತಿ್ತ್ದಾರೆ. ಇದೇ ಮೊದಲ ಬಾರಿಗೆ ಅವರು ಅಕ್ಷಯ್ ಜತೆ ಕೈ ಜೋಡಿಸಿರುವುದು ವಿಶೇಷ. ಅನುರಾಗ್ ಸಿಂಗ್ ನಿರ್ದೇಶನದ ಈ ಚಿತ್ರ 2019ರ ಹೋಳಿ ಹಬ್ಬದಂದು ತೆರೆಕಾಣಲಿದೆ.

Leave a Reply

Your email address will not be published. Required fields are marked *