20.8 C
Bangalore
Sunday, December 8, 2019

ಕೇಸರಿ ಜೋಶ್​ನಲ್ಲಿ ಪ್ರಲ್ಹಾದ್ ಜೋಶಿ

Latest News

ಪತಿಯನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದ ಪತ್ನಿಯ ಸೆರೆ

ಕೆಜಿಎಫ್: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನೇ ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕೊಲೆಗೈದ ಪತ್ನಿ ಮತ್ತು ಪ್ರಿಯಕರನನ್ನು ಉರಿಗಾಂ...

ಅರಣ್ಯ ಸರ್ವೆಗೆ ಡ್ರೋನ್: ರಾಜ್ಯದಲ್ಲೇ ಮೊದಲ ಬಾರಿಗೆ ಹೊಸನಗರದಲ್ಲಿ ಪ್ರಾಯೋಗಿಕವಾಗಿ ಜಾರಿ

ರಾಜ್ಯದಲ್ಲಿ ಮೊದಲ ಬಾರಿಗೆ ಅರಣ್ಯ ಪ್ರದೇಶ ಗುರುತಿಸಲು ಪ್ರಾಯೋಗಿಕವಾಗಿ ಹೊಸನಗರ ತಾಲೂಕಿನಲ್ಲಿ ಅರಣ್ಯ ಇಲಾಖೆ ಡ್ರೋನ್ (ಏರಿಯಲ್) ಸರ್ವೆ ನಡೆಸಿದ್ದು, ಯಶಸ್ವಿಯಾದರೆ ಇಲಾಖೆಯ...

ಭಗವದ್ಗೀತೆ ಅಭಿಯಾನದ ಮಹಾಸಮರ್ಪಣೆ

ಚಿತ್ರದುರ್ಗ: ಸಾಮಾಜಿಕ ಸಾಮರಸ್ಯ,ರಾಷ್ಟ್ರೀಯ ಏಕತೆಗೆ ತಿಂಗಳಿಗೂ ಹೆಚ್ಚು ಕಾಲ ಜಿಲ್ಲಾದ್ಯಂತ ನಡೆದ ಭಗವದ್ಗೀತೆ ಅಭಿಯಾನದ ರಾಜ್ಯಮಟ್ಟದ ಮಹಾ ಸಮರ್ಪಣೆಗೆ ಶನಿವಾರ ಚಿತ್ರದುರ್ಗದ ಹಳೇ...

ಭಗವದ್ಗೀತೆ ಪಠಣದಿಂದ ಅಜ್ಞಾನ ದೂರ

ಚಿಕ್ಕಬಳ್ಳಾಪುರ: ಚಿಕ್ಕ ವಯಸ್ಸಿನಿಂದಲೇ ಮಕ್ಕಳನ್ನು ಒಳ್ಳೆಯ ವಾತಾವರಣದಲ್ಲಿ ಬೆಳೆಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮಹಾತ್ಮಗಾಂಧಿ ಸೇವಾಟ್ರಸ್ಟ್ ಸಂಸ್ಥಾಪಕ ಶ್ರೀ ವಿನಯ್ ಗುರೂಜಿ ಅಭಿಪ್ರಾಯಪಟ್ಟರು. ತಾಲೂಕಿನ...

ನಾಯಿಂದ್ರಹಳ್ಳಿ ವಿವಾದಿತ ರಸ್ತೆ ಸರ್ವೇ

ಚಿಂತಾಮಣಿ: ತಾಲೂಕಿನ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಯಿಂದ್ರಹಳ್ಳಿ ರಸ್ತೆ ವಿವಾದ ರಾಜಕೀಯ ತಿರುವು ಪಡೆದುಕೊಂಡ ಹಿನ್ನೆಲೆಯಲ್ಲಿ ಶನಿವಾರ ಅಧಿಕಾರಿಗಳು ಸರ್ವೇ ನಂ.2 ವ್ಯಾಪ್ತಿಯ 5.04...

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪ್ರಲ್ಹಾದ ಜೋಶಿ ನಾಲ್ಕನೇ ಬಾರಿ ಆಯ್ಕೆ ಬಯಸಿ ನಗರದಲ್ಲಿ ಬುಧವಾರ ಬೃಹತ್ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು.

ನಗರದ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಶಿವಾಜಿ ವೃತ್ತಕ್ಕೆ ಆಗಮಿಸಿ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಮೆರವಣಿಗೆಗೆ ಚಾಲನೆ ನೀಡಿದರು. ಪಕ್ಷದ ಮುಖಂಡರು, ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಜಾಂಜ್ ಮೇಳ, ಜಗ್ಗಲಗಿ ಮೇಳದೊಂದಿಗೆ ಮೆರವಣಿಗೆ ಸಾಗಿತು. ಅಭಿಮಾನಿಗಳು, ಬೆಂಬಲಿಗರು ಜೋಶಿ ಅವರಿಗೆ ಶುಭ ಕೋರಿದರು. ಇನ್ನು ಜೋಶಿ ಅವರು ಜನರತ್ತ ಕೈ ಬೀಸಿ ವಿಜಯದ ಸಂಕೇತ ಪ್ರದರ್ಶನ ಮಾಡುತ್ತ ಸಾಗಿದರು. ಕಾರ್ಯಕರ್ತರು ಮೋದಿ…ಮೋದಿ.. ಘೊಷಣೆ ಕೂಗಿ ಸಂಭ್ರಮಿಸಿದ್ದಲ್ಲದೆ, ಸಂಸದ ಜೋಶಿ ಅವರಿಗೆ ಜಯಕಾರ ಮೊಳಗಿಸಿದರು. ಮೆರವಣಿಗೆಯುದ್ದಕ್ಕೂ ಬಿಜೆಪಿ ಹಾಗೂ ಕೇಸರಿ ಬಾವುಟಗಳನ್ನು ಪ್ರದರ್ಶಿಸಿದರು. ಇಡೀ ಧಾರವಾಡ ನಗರ ಕೇಸರಿಮಯವಾಗಿತ್ತು.

ಬೆಳಗ್ಗೆ 11.30ಕ್ಕೆ ಪ್ರಾರಂಭವಾದ ಮೆರವಣಿಗೆ ಮಾರುಕಟ್ಟೆ, ಸುಭಾಷ್ ರಸ್ತೆ, ವಿವೇಕಾನಂದ ವೃತ್ತ, ಅಂಜುಮನ್ ವೃತ್ತ ಮೂಲಕ ಕಲಾಭವನಕ್ಕೆ ಆಗಮಿಸಿತು. ಬಸವೇಶ್ವರ ಪುತ್ಥಳಿ, ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಕೋರ್ಟ್ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಸಮೀಪ ಆಗಮಿಸಿದರು.

ಜಿಲ್ಲಾಧಿಕಾರಿ ಕಚೇರಿ ಸುತ್ತ 200 ಮೀ. ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಅಭ್ಯರ್ಥಿ ಪ್ರಲ್ಹಾದ ಜೋಶಿ, ಪತ್ನಿ ಜ್ಯೋತಿ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಶಾಸಕರಾದ ಬಸವರಾಜ ಬೊಮ್ಮಾಯಿ, ಶಂಕರ ಪಾಟೀಲ ಮುನೇನಕೊಪ್ಪ, ಅರವಿಂದ ಬೆಲ್ಲದ, ಅಮೃತ ದೇಸಾಯಿ, ಗೋವಿಂದ ಕಾರಜೋಳ ಹಾಗೂ ಸೂಚಕರೊಂದಿಗೆ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಒಟ್ಟು ನಾಲ್ಕು ಪ್ರತಿಗಳಲ್ಲಿ ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ಅವರಿಗೆ ನಾಮಪತ್ರ ಸಲ್ಲಿಸಿದರು.

ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ಮುಖಂಡರಾದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಸೀಮಾ ಮಸೂತಿ, ವೀರಭದ್ರಪ್ಪ ಹಾಲಹರವಿ, ಎಸ್.ಐ. ಚಿಕ್ಕನಗೌಡ್ರ, ಮೋಹನ ಲಿಂಬಿಕಾಯಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಡಾ. ಮಹೇಶ ನಾಲವಾಡ, ದತ್ತಾ ಡೋರ್ಲೆ, ನಾಗೇಶ ಕಲಬುರ್ಗಿ, ಮಹೇಶ ಟೆಂಗಿನಕಾಯಿ, ಈರಣ್ಣ ಹಪ್ಪಳಿ, ಸುಖದ ಜೋಶಿ, ಲಲಿತ ಭಂಡಾರಿ, ಪ್ರಕಾಶ ಗೋಡಬೋಲೆ, ಈರಣ್ಣ ಜಡಿ, ಸವಿತಾ ಅಮರಶೆಟ್ಟಿ, ಮೋಹನ ರಾಮದುರ್ಗ, ಸಾವಿರಾರು ಕಾರ್ಯಕರ್ತರು, ಇತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಜೋಶಿ ಟೆಂಪಲ್ ರನ್: ನಾಮಪತ್ರ ಸಲ್ಲಿಕೆ ಮೆರವಣಿಗೆ ಪೂರ್ವದಲ್ಲಿ ಪ್ರಲ್ಹಾದ ಜೋಶಿ ಹುಬ್ಬಳ್ಳಿಯಲ್ಲಿ ಶ್ರೀ ಸಿದ್ಧಾರೂಢ ಮಠಕ್ಕೆ ತೆರಳಿ ಉಭಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಧಾರವಾಡದಲ್ಲಿ ಕೆಸಿಡಿ ವೃತ್ತದ ಗಣೇಶ ದೇವಸ್ಥಾನ, ಮರಾಠಾ ಕಾಲನಿ ದುರ್ಗಾ ದೇವಿ ದೇವಸ್ಥಾನ, ಗಾಂಧಿ ಚೌಕ್ ಲಕ್ಷ್ಮೀ ನರಸಿಂಹ ದೇವಸ್ಥಾನ ಹಾಗೂ ಮುರುಘಾಮಠಕ್ಕೆ ಭೇಟಿ ನೀಡಿದರು. ಮುರುಘಾಮಠದಲ್ಲಿ ಶ್ರೀ ಮೃತ್ಯುಂಜಯ ಅಪ್ಪಗಳು ಮತ್ತು ಶ್ರೀ ಮಹಾಂತಪ್ಪನವರ ಮೂಲ ಗದ್ದುಗೆ ದರ್ಶನ ಪಡೆದ ಜೋಶಿ, ಗದ್ದುಗೆ ಮೇಲೆ ನಾಮಪತ್ರ ಇಟ್ಟು ವಿಶೇಷ ಪೂಜೆ ಸಲ್ಲಿಸಿದರಲ್ಲದೆ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.

ಜೋಶಿ ಆಸ್ತಿ 10.34 ಕೋಟಿ ರೂ.: ಧಾರವಾಡ: ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು 10,34,49,157 ರೂ. ಆಸ್ತಿ ಹೊಂದಿರುವುದಾಗಿ ಘೊಷಿಸಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿಗೆ ಸಲ್ಲಿಸಿರುವ ನಾಮಪತ್ರದ ಜೊತೆಗೆ ಅಫಿಡವಿಟ್​ನಲ್ಲಿ ಅವರು ಆಸ್ತಿ ಘೊಷಿಸಿದ್ದಾರೆ.

ಪ್ರಸ್ತುತ ಅವರು 8,09,58,935 ರೂ. ಮೌಲ್ಯದ ಸ್ಥಿರಾಸ್ತಿ, 2,27,90,222 ರೂ. ಮೌಲ್ಯದ ಚರಾಸ್ತಿ ಸೇರಿ ಒಟ್ಟು 10,34,49,157 ರೂ. ಆಸ್ತಿ ಹೊಂದಿದ್ದಾರೆ. 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದಾಗ 2,79,87,600 ರೂ. ಮೌಲ್ಯದ ಸ್ಥಿರಾಸ್ತಿ, 83,95,998 ರೂ. ಮೌಲ್ಯದ ಚರಾಸ್ತಿ ಸೇರಿ 3,63,83,598 ರೂ. ಆಸ್ತಿ ಘೊಷಿಸಿದ್ದರು.

ಚರಾಸ್ತಿ ವಿವರ: ಪ್ರಲ್ಹಾದ ಜೋಶಿ ಅವರಲ್ಲಿ 3.10 ಲಕ್ಷ ರೂ. ನಗದು ಇದೆ. ನವದೆಹಲಿಯ ಎಸ್​ಬಿಐ ಖಾತೆಯಲ್ಲಿ 2,43,775 ರೂ., ಹುಬ್ಬಳ್ಳಿಯ ಕ್ಲಬ್ ರಸ್ತೆಯ ಎಸ್​ಬಿಐ ಖಾತೆಯಲ್ಲಿ 5,89,033 ರೂ., ಕ್ಲಬ್ ರಸ್ತೆಯ ಆಂಧ್ರ ಬ್ಯಾಂಕ್​ನಲ್ಲಿ 92,496 ರೂ., ಹುಬ್ಬಳ್ಳಿಯ ಅಕ್ಷಯ ಕಾಲನಿಯ ಕೆನರಾ ಬ್ಯಾಂಕ್​ನಲ್ಲಿ 2,27,280 ರೂ., ಕೇಶ್ವಾಪುರದ ಬ್ಯಾಂಕ್ ಆಫ್ ಬರೋಡಾದಲ್ಲಿ 37,137 ರೂ., ಕೆನರಾ ಬ್ಯಾಂಕ್ ಕರೆಂಟ್ ಖಾತೆಯಲ್ಲಿ 10,000 ರೂ., ಎಸ್​ಬಿಐ ಆರ್​ಡಿ ಡಿಪಾಸಿಟ್ 1,91,000 ರೂ. ಹೊಂದಿದ್ದಾರೆ.

ಬಾಂಡ್ಸ್, ಡಿಬೆಂಚರ್ಸ್, ಷೇರು: ಜೋಶಿ ಅವರು ಇನ್ನೊ ನು. ಕೆಮ್ಲ್ಲಿ 11,45,087 ರೂ. ಮೌಲ್ಯದ ಷೇರು, ಎಸ್​ಬಿಐ ವಿವಿಧ ಮ್ಯುಚುವಲ್ ಫಂಡ್​ಗಳಲ್ಲಿ 14,96,833 ರೂ., 1,61,673, 1,58,683, 1,56,013, 1,41,997 ರೂ. ಹೂಡಿಕೆ ಮಾಡಿದ್ದಾರೆ.

ವಿಭವ ಕೆಮಿಕಲ್ಸ್​ನಲ್ಲಿ ಶೇ. 20 ಪಾಲದಾರನಾಗಿದ್ದು, 1,11,79,278 ರೂ. ಹೂಡಿಕೆ ಇದೆ. ವಿಭವ ಮಾರ್ಕೆಟಿಂಗ್​ನಲ್ಲಿ 15,35,999 ರೂ. ಹೂಡಿಕೆ ಇದೆ.

ಪಿಪಿಎಫ್​ನಲ್ಲಿ 5,66,961 ರೂ., 18,99,918 ರೂ.ಗಳ ಎಲ್​ಐಸಿ ಪಾಲಿಸಿ, ಎಪಿಎಫ್ 3,19,299 ರೂ. ಹೂಡಿಕೆ ಮಾಡಿದ್ದಾರೆ. 2.65 ಲಕ್ಷ ರೂ. ಮೌಲ್ಯದ ಮಹೀಂದ್ರಾ ಸ್ಕಾರ್ಪಿಯೋ, 3.12 ಲಕ್ಷ ರೂ. ಮೌಲ್ಯದ ಚಿನ್ನ, 1.92 ಲಕ್ಷ ರೂ. ಮೌಲ್ಯದ ಬೆಳ್ಳಿಯ ಆಭರಣ ಹೊಂದಿದ್ದಾರೆ.

ಸ್ಥಿರಾಸ್ತಿ ವಿವರ: ಜೋಶಿ ಅವರು ಕೃಷಿ ಭೂಮಿ, ವಾಣಿಜ್ಯ ಕಟ್ಟಡ ಹೊಂದಿಲ್ಲ. ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಕೃಷಿಯೇತರ ಭೂಮಿ ಹೊಂದಿದ್ದು, ಅದರ ಪ್ರಸ್ತುತ ಮೌಲ್ಯ 1,94,68,050 ರೂ.ಗಳು. ಬೆಂಗಳೂರಿನ ಸರ್ಜಾಪುರದಲ್ಲಿ 2,26,86,920 ರೂ. ಮೌಲ್ಯದ ಬಿಡಿಎ ನಿವೇಶನ ಹೊಂದಿದ್ದಾರೆ. ಹುಬ್ಬಳ್ಳಿಯ ಮಯೂರಿ ಎಸ್ಟೇಟ್​ನಲ್ಲಿ 1,87,77,720 ರೂ. ಮೌಲ್ಯದ ಮನೆ ಹೊಂದಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ 2,00,26,245 ರೂ. ಮೌಲ್ಯದ ಫ್ಲ್ಯಾಟ್ ಹೊಂದಿದ್ದಾರೆ.

5 ಕೋಟಿ ಸಾಲ: ಪ್ರಲ್ಹಾದ ಜೋಶಿ ವಿವಿಧ ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ 5.15 ಕೋಟಿ ರೂ. ಸಾಲ ಮತ್ತು ಪತ್ನಿ 2 ಲಕ್ಷ ರೂ. ಸಾಲ ಪಡೆದಿದ್ದಾರೆ.

ಪತ್ನಿ, ಮಕ್ಕಳ ಆಸ್ತಿ ವಿವರ: ಪ್ರಲ್ಹಾದ ಜೋಶಿ ಪತ್ನಿ ಜ್ಯೋತಿ ಅವರು 27,11,343 ರೂ., ಚರಾಸ್ತಿ ಹೊಂದಿದ್ದಾರೆ. ಅವರ ಬಳಿ 50,000 ರೂ. ನಗದು ಇದೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿ 95,727 ರೂ., 2,20,827 ರೂ., ಹುಬ್ಬಳ್ಳಿಯ ಏಬಲ್ ಡಿಸೈನ್ ಇಂಜಿನಿಯರಿಂಗ್ ಸರ್ವೀಸ್​ನಲ್ಲಿ 8,59,300 ರೂ. ಮೌಲ್ಯದ ಷೇರು, ಎಲ್​ಐಸಿಯಲ್ಲಿ 3,21,870 ರೂ., ಇಪಿಎಫ್​ನಲ್ಲಿ 1,86,619 ರೂ., 9 ಲಕ್ಷ ಮೌಲ್ಯದ ಚಿನ್ನ, 77 ಸಾವಿರ ರೂ. ಮೌಲ್ಯದ ಬೆಳ್ಳಿಯ ಆಭರಣ ಹೊಂದಿದ್ದಾರೆ.

ಪುತ್ರಿ ಅರ್ಪಿತಾ ಬಳಿ 5 ಸಾವಿರ ರೂ. ನಗದು, ಬ್ಯಾಂಕ್ ಖಾತೆಯಲ್ಲಿ 64,604 ರೂ. ಪಿಪಿಎಫ್​ನಲ್ಲಿ 10,31,576 ರೂ., ಎಲ್​ಐಸಿಯಲ್ಲಿ 31,509 ರೂ., ಹೀರೋ ಪ್ಲೆಷರ್ ಬೈಕ್, 7.35 ಲಕ್ಷ ಮೌಲ್ಯದ 245 ಗ್ರಾಂ ಚಿನ್ನ ಸೇರಿ 18,91,690 ರೂ. ಆಸ್ತಿ ಹೊಂದಿದ್ದಾರೆ. ಪುತ್ರಿ ಅನುಷಾ ಬಳಿ 5 ಸಾವಿರ ರೂ. ನಗದು, ಪಿಪಿಎಫ್​ನಲ್ಲಿ 8.79 ಲಕ್ಷ ರೂ., ಎಲ್​ಐಸಿಯಲ್ಲಿ 31,509 ರೂ., 7.35 ಲಕ್ಷ ಮೌಲ್ಯದ 245 ಗ್ರಾಂ ಚಿನ್ನ ಸೇರಿ 16,51,148 ರೂ., ಆಸ್ತಿ ಹೊಂದಿದ್ದಾರೆ. ಪುತ್ರಿ ಅನನ್ಯಾ ಬಳಿ ನಗದು ಇಲ್ಲ. ಪಿಪಿಎಫ್​ನಲ್ಲಿ 7.48 ಲಕ್ಷ ರೂ., ಎಲ್​ಐಸಿಯಲ್ಲಿ 1.82 ಲಕ್ಷ ರೂ., 7.50 ಲಕ್ಷ ಮೌಲ್ಯದ 250 ಗ್ರಾಂ ಚಿನ್ನ ಸೇರಿ 16,81,107 ರೂ. ಆಸ್ತಿ ಹೊಂದಿದ್ದಾರೆ. ಪ್ರಲ್ಹಾದ ಜೋಶಿ ಅವರ ಪತ್ನಿ, ಮೂವರು ಪುತ್ರಿಯರ ಒಟ್ಟು ಆಸ್ತಿ ಮೌಲ್ಯ 79,35,288 ರೂ.ಗಳು.

Stay connected

278,744FansLike
581FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...