ಕೇಳಿ ಬಂದಿಲ್ಲಂತ ಡಿಡಿಪಿಐಗೆ ಹಾಜರಾಗಲು ಬಿಡಲಿಲ್ಲ !!

ಅಶೋಕ ಶೆಟ್ಟರ, ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಆಡಳಿತ ಯಂತ್ರ ಎತ್ತ ಸಾಗಿದೆ ಎನ್ನುವದು ಸದ್ಯ ಯಾರಿಗೂ ತಿಳಿಯದ ಗುಟ್ಟು! ಆರಂಭದಿಂದಲೂ ಅಽಕಾರಿಗಳ ವರ್ಗಾವಣೆ ಸದ್ದು ಮಾತ್ರ ಈ ವರೆಗೂ ನಿಲ್ಲುತ್ತಲೇ ಇಲ್ಲ. ಒಂದೇ ಹುದ್ದೆಗಾಗಿ ಇಬ್ಬಿಬ್ಬರು ಗುದ್ದಾಡುವುದು ಸರ್ವೆ ಸಾಮಾನ್ಯವಾಗಿದೆ.

ಬಾಗಲಕೋಟೆ ನಗರಸಭೆ ಪೌರಾಯುಕ್ತರ ಹುದ್ದೆ ಜಟಾಪಟಿ, ಆರೋಗ್ಯ ಇಲಾಖೆಯ ಡಿಎಚ್‌ಒ ಹುದ್ದೆಯ ಗುದ್ದಾಟ, ನಿರ್ಮಿತಿ ಕೇಂದ್ರದ ಯೋಜನಾಽಕಾರಿ ಹುದ್ದೆ ಬಡಿದಾಟ ಮುಗಿಯುವಷ್ಟರಲ್ಲಿ ಅಪರ ಜಿಲ್ಲಾಽಕಾರಿ ಹುದ್ದೆಗಾಗಿ ಜಿದ್ದು ಇನ್ನೂ ನಡೆದಿದೆ. ಇದೀಗ ಖುರ್ಚಿಗಾಗಿ ಪೈಪೋಟಿಯ ಹೊಸ ಸೇರ್ಪಡೆ ಡಿಡಿಪಿಐ ಹುದ್ದೆಗಾಗಿ ನಡೆದಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹುದ್ದೆ ಸದ್ಯ ಪ್ರಭಾರದಲ್ಲಿ ನಡೆಯುತ್ತಿದೆ. ಖಾಲಿ ಇದ್ದ ಹುದ್ದೆಗೆ ಮೈಸೂರ ಭಾಗದಿಂದ ಎಂ.ವಿವೇಕಾನಂದ ಎನ್ನುವವರನ್ನು ಬಾಗಲಕೋಟೆಗೆ ಡಿಡಿಪಿಐ ಎಂದು ನೇಮಕ ಮಾಡಿ ಸರ್ಕಾರ ವರ್ಗಾವಣೆ ಮಾಡಿತ್ತು. ಆದರೆ, ಬಾಗಲಕೋಟೆ ಜಿಲ್ಲಾಡಳಿತ ಮಾತ್ರ ಅವರನ್ನು ಹಾಜರು ಮಾಡಿಕೊಳ್ಳದೇ ವಾಪಸ್ಸು ಕಳಿಸಿರುವುದು ಇದೇಗ ಜಿಲ್ಲಾಡಳಿತ ಭವನದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಎಂ.ವಿವೇಕಾನಂದ ಅವರು ಸ್ವತ: ಸಿಎಂ ಜಿಲ್ಲೆಯಿಂದ ವರ್ಗಾವಣೆ ಆಗಿ ಬಂದಿದ್ದರೂ ಜಿಲ್ಲೆಯ ಕೆಲ ಪ್ರಭಾವಿ ಜನಪ್ರತಿನಿಽಗಳು ಸೇರಿಕೊಂಡು ನಮ್ಮ ಪರವಾಣಿಗೆ ಇಲ್ಲದೇ ಬಂದಿರುವ ಅವರಿಗೆ ಇಲ್ಲಿ ನೋ ಚಾನ್ಸ್ ಎನ್ನುವ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಬಂದ ದಾರಿಗೆ ಸುಂಕ ಇಲ್ಲದಂತೆ ಅದ್ದೂರಿ ಸ್ವಾಗತ ಬ್ಯಾನರೊಂದಿಗೆ ಬಂದಿದ್ದ ಡಿಡಿಪಿಐ ವಿವೇಕಾನಂದ ಅವರು ವಾಪಸ್ಸು ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ವಿವೇಕಾನಂದ ಅವರಿಗೆ ಬಾಗಲಕೋಟೆ ಡಿಡಿಪಿಐ ಆಗಿ ಬರಲು ಸಂಪೂರ್ಣ ಮನಸ್ಸು ಇರಲಿಲ್ಲವಂತೆ. ಆದರೆ, ಶಿಕ್ಷಕರ ಸಂಘದ ಕೆಲ ಪದಾಽಕಾರಿಗಳು ಹಾಗೂ ಪ್ರಭಾವಿಗಳು ಸೇರಿಕೊಂಡು ಅವರಿಗೆ ಬೆನ್ನಿಗೆ ಬಿದ್ದು ಬಾಗಲಕೋಟೆಗೆ ಬರಲು ಒಪ್ಪುವಂತೆ ಮಾಡಿದ್ದರಂತೆ. ಹೀಗಾಗಿ ಅವರು ಬಾಗಲಕೋಟೆಗೆ ಬರುತ್ತಿದ್ದಂತೆ ಶಿಕ್ಷಕರ ಸಂಘದ ಒಂದು ಗುಂಪು ಅದಾಗಲೇ ಸ್ವಾಗತ ಬ್ಯಾನರ್ ರೆಡಿ ಮಾಡಿಸಿ ನೂತನ ಡಿಡಿಪಿಐ ಅವರಿಗೆ ಸ್ವಾಗತ ಎಂದು ಬ್ಯಾನರ್ ಸಹ ಹಾಕಿದ್ದರು. ಈ ರೀತಿ ಹೊಸದಾಗಿ ಬರುವ ಅಽಕಾರಿ ಒಬ್ಬರಿಗೆ ಹೀಗೆ ಬ್ಯಾನರ್ ಮಾಡಿಸಿ ಹಾಕಿರುವುದು ಇದೇ ಮೊದಲ ಸಲ ಇರಬಹುದೇನೋ ಎಂದು ಹೇಳಲಾಗುತ್ತಿದೆ.

ಆದರೆ, ಸದ್ಯ ಬಾಗಲಕೋಟೆ ಡಿಡಿಪಿಐ ಹುದ್ದೆಯಲ್ಲಿ ಪ್ರಭಾರಿ ಆಗಿರುವ ಬಿ.ಕೆ.ನಂದನೂರ ಪರವಾಗಿ ಅವರ ಬೆಂಬಲಿಗರು ಹಾಗೂ ಸಮುದಾಯವರು ಯಾವುದೇ ಕಾರಣಕ್ಕೂ ಇವರನ್ನು ಬದಲಿಸಬಾರದು ಎನ್ನುವ ಒತ್ತಡ ಹಾಕಿದ್ದರಂತೆ. ಹೀಗಾಗಿ ಜನಪ್ರತಿನಿಽಗಳು ಮೌನಕ್ಕೆ ಶರಣಾಗಿದ್ದು, ವರ್ಗಾವಣೆ ಆಗಿ ಬಂದಿದ್ದ ನೂತನ ಡಿಡಿಪಿಐ ವಿವೇಕಾನಂದ ಇಡೀ ದಿನ ಕಾಯ್ದರು ಅವರನ್ನು ಹಾಜರುಪಡಿಸಿಕೊಳ್ಳಲಿಲ್ಲ. ಇದರಿಂದ ಬೇಸತ್ತು ವಾಪಸ್ಸು ಹೋಗಿದ್ದಾರೆ ಎಂದು ಜಿಲ್ಲಾಡಳಿತ ಭವನದ ಮೊಗಸಾಲೆಯಲ್ಲಿ ಪಿಸುಮಾತುಗಳು ಕೇಳಲಾರಂಭಿಸಿವೆ.

ಇನ್ನು ನೂತನ ಡಿಡಿಪಿಐ ಅವರನ್ನು ಹಾಜರು ಪಡಿಸಿಕೊಳ್ಳುತ್ತಿಲ್ಲ ಎಂದು ತಿಳಿಯುತ್ತಿದ್ದಂತೆ ಅವರಿಗೆ ನಾವಿದ್ದೇವೆ ಎಂದು ಹೇಳಿ ಕರೆದುಕೊಂಡು ಬಂದಿದ್ದವರಿಗೆ ತೀವ್ರ ಮುಜುಗರ ಆಗಿ, ತಕ್ಷಣವೇ ಜಿಲ್ಲೆಯ ಪ್ರಭಾವಿ ಶಾಸಕರ ಬಳಿ ಹೋಗಿದ್ದಾರೆ. ಅವರು ಸಹ ಹಾಲಿ ಪ್ರಭಾರಿ ಡಿಡಿಪಿಐ ಅವರನ್ನು ಬದಲಿಸಿದರೆ ಇದರಿಂದ ತಮಗೆಲ್ಲಿ ರಾಜಕೀಯ ಹಿನ್ನೆಡೆ ಆದೀತು ಎನ್ನುವ ಆಳುಕಿನಿಂದ ನೂತನ ಡಿಡಿಪಿಐ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ತಿಳಿದು ಬಂದಿದೆ.

ಆ ಬಳಿಕ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಜನಪ್ರತಿನಿಽ ಬಳಿ ಹೋದಾಗ ಅಲ್ಲಿ ಮತ್ತೊಬ್ಬ ಶಾಸಕರು ಇದ್ದರಂತೆ. ತಮ್ಮನ್ನು ಕೇಳದೇ ಮಾತುಕತೆ ನಡೆಸದೇ ಜಿಲ್ಲೆಗೆ ಡಿಡಿಪಿಐ ಆಗಿ ಬಂದಿರುವ ಬಗ್ಗೆ ಅಸಮಧಾನ ಇದ್ದಂತೆ ಇತ್ತಂತೆ. ಹೀಗಾಗಿ ಡಿಡಿಪಿಐ ಪರವಾಗಿ ಇದ್ದವರು ಹಾಜರು ಪಡಿಸಿಕೊಳ್ಳಲು ನಿರ್ದೇಶನ ನೀಡುವಂತೆ ಕೋರಿದಾಗ, ನೀವು ಯಾರನ್ನು ಕೇಳಿ ಇಲ್ಲಿಗೆ ಬಂದಿದ್ದೀರಿ? ಬರುವ ಮುಂಚೆ ನಮ್ಮ ಗಮನಕ್ಕೆ ತಂದಿದ್ದೀರಾ ಎಂದು ಖಡಕ್ಕಾಗಿ ಹೇಳಿದ್ದಲ್ಲದೇ ಹಾಜರುಪಡಿಸಿಕೊಳ್ಳದಂತೆ ಸಂಬಂಽಸಿದವರಿಗೆ ಮೌಖಿಕ ಸೂಚನೆ ನೀಡಿದರಂತೆ. ಹೀಗಾಗಿ ಇನ್ನೂ ಇಲ್ಲಿ ತಮಗೆ ಅವಕಾಶ ಇಲ್ಲವೆಂದು ಭಾವಿಸಿ, ಮೊದಲೇ ಒಲ್ಲದ ಮನಸ್ಸಿನಿಂದ ಬಂದಿದ್ದ ನೂತನ ಡಿಡಿಪಿಐ ಅವರು ವಾಪಸ್ಸು ತೆರಳಿದ್ದಾರೆಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಶಿಕ್ಷಕರೊಬ್ಬರು ಸೋಮವಾರ ನಡೆದ ಘಟನೆಯನ್ನು ವಿವರಿಸಿದರು.

ಮೌನಕ್ಕೆ ಶರಣು :
ಇನ್ನು ಡಿಡಿಪಿಐ ಹುದ್ದೆಗಾಗಿ ಸೋಮವಾರ ಇಡೀ ದಿನ ನಡೆದ ಹೈಡ್ರಾಮ ಬಗ್ಗೆ ಶಿಕ್ಷಣ ಇಲಾಖೆಗೆ ಕೆಲ ಅಽಕಾರಿಗಳನ್ನು ಕೇಳಿದರೆ ತಮಗೇನು ಗೊತ್ತಿಲ್ಲ ಎನ್ನುವ ದಾಟಿಯಲ್ಲಿ ಮಾತನಾಡುತ್ತಿದ್ದಾರೆ. ಒಬ್ಬರಂತೂ ತಮಗೇಕೆ ಸರ್ ಇದಲ್ಲ. ದೊಡ್ಡವರ ನಡುವಿನ ಕಾಳಗದಲ್ಲಿ ನಮ್ಮದೇನು ಕೆಲಸ ? ಏನಾಯಿತೋ ಗೊತ್ತಿಲ್ಲ. ಆದರೆ, ಹೊಸದಾಗಿ ಬಂದಿದ್ದ ಡಿಡಿಪಿಐ ಅವರನ್ನು ಹಾಜರುಪಡಿಸಿಕೊಂಡಿಲ್ಲ. ಯಾರು ಇದಕ್ಕೆ ಅಡ್ಡಗೋಡೆ ಅಂತ ನಮಗೆ ಗೊತ್ತಿಲ್ಲ ಎಂದು ನುಣಚಿಕೊಂಡರು. ಈ ಬಗ್ಗೆ ಯಾರೂ ಮಾಹಿತಿ ಕೊಡಲ್ಲ ಎನ್ನುವ ಮಾತನ್ನು ಸಹ ಸೇರಿಸಿದರು.

Share This Article

World Arthritis Day: ಸಂಧಿವಾತ ಕಾಯಿಲೆಗೆ ಚಿಕಿತ್ಸೆಯೇ ಮದ್ದು! ತಜ್ಞವೈದ್ಯೆ ಡಾ. ಅರ್ಚನಾ ಎಂ. ಉಪ್ಪಿನ ಅಭಿಮತ

ಪ್ರಸ್ತುತ ದಿನಗಳಲ್ಲಿ ಬಿಪಿ-ಶುಗರ್ ಸಮಸ್ಯೆಯಂತೆ ಅರ್ಥರೈಟಿಸ್ ( Arthritis ) , ರುಮಾಟಾಲಜಿ (ಸಂಧಿವಾತ/ ಕೀಲುವಾಯು)…

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…