More

  ಕೇಂಬ್ರಿಡ್ಜ್ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ

  ಬೀದರ್: ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ಕೇಂಬ್ರಿಡ್ಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
  ಸೈಯದಾ ತಹಾ ಫಾತಿಮಾ ಸೈಯದ್ ಅಬ್ದುಲ್ ರಹಮಾನ್ ಶೇ 97.44 ರಷ್ಟು ಅಂಕ ಗಳಿಸಿ ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
  ಮಹಮ್ಮದ್ ನಿಸಾರ್ ಶೇಖ್ ನಜ್ರುಲ್ ಇಸ್ಲಾಂ ಶೇ 94.88 ಹಾಗೂ ವಿದ್ಯಾ ರಾಣಿ ಶೇ 94.08 ರಷ್ಟು ಅಂಕ ಗಳಿಸಿ ಗಮನ ಸೆಳೆದಿದ್ದಾರೆ.
  22 ಅಗ್ರಶ್ರೇಣಿ, 69 ಪ್ರಥಮ ದರ್ಜೆ ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಎಂದು ಕೇಂಬ್ರಿಡ್ಜ್ ಶಾಲೆ ಅಧ್ಯಕ್ಷ ಎಂ.ಎ. ಜಬ್ಬಾರ್ ತಿಳಿಸಿದ್ದಾರೆ.
  ಗುಣಮಟ್ಟದ ಶಿಕ್ಷಣದ ಫಲವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಶಾಲೆಗೆ ಅತ್ಯುತ್ತಮ ಫಲಿತಾಂಶ ದೊರಕಿದೆ ಎಂದು ಹೇಳಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts