ಕೇಂದ್ರದಿಂದ ರೈತ ವಿರೋಧ ಆಡಳಿತ

ವಿಜಯವಾಣಿ ಸುದ್ದಿಜಾಲ ಚಿತ್ತಾಪುರ
ಪ್ರತಿ ಪ್ರಜೆಯೂ ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಸಮಾಜ ಕಲ್ಯಾಣವಾಗಲಿದೆ ಎಂದು ಸಮಾಜ ಕಲ್ಯಾಣ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಅಂಬಿಗರ ಚೌಡಯ್ಯ ಭವನ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, 2 ಕೋಟಿ ವೆಚ್ಚದಲ್ಲಿ ಅಂಬಿಗರ ಚೌಡಯ್ಯ ಭವನ ನಿರ್ಮಾಣ ಮಾಡಲಾಗುತ್ತಿದೆ. ಸಮಾಜದ ಅಭಿವೃದ್ದಿಗೆ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 3,200 ವಸತಿ ನಿಲಯ, 820 ಆಂಗ್ಲ ಮಾಧ್ಯಮ ಶಾಲೆ ನಡೆಸಲಾಗುತ್ತದೆ. ಇದರಿಂದ 10 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ರಾಜ್ಯ ಬರದಿಂದ ತತ್ತರಿಸುತ್ತಿದ್ದು, ಬೆಳೆ ಹಾನಿ ಸಂಭವಿಸಿದ ರೈತರಿಗೆ ಪರಿಹಾರ ವಿತರಿಸಲು ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೇವಲ 800 ಕೋಟಿ ರೂ. ಬಿಡುಗಡೆಗೊಳಿಸಿದೆ ಎಂದು ದೂರಿದರು.

ತೊನಸನಳ್ಳಿಯ ಅಲ್ಲಮಪ್ರಭು ಪೀಠದ ಶ್ರೀ ಮಲ್ಲಣ್ಣಪ್ಪ ಅಪ್ಪ ಆಶೀರ್ವಚನ ನೀಡಿದರು. ಬಿಸಿಸಿ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಮಾತನಾಡಿದರು.

ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು, ಶ್ರೀ ಶಾಂತಮುನಿ ಶಿವಾಚಾರ್ಯರು, ತಾಪಂ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಉಪಾಧ್ಯಕ್ಷ ಹರಿನಾಥ ಚವ್ಹಾಣ್, ಎಪಿಎಂಸಿ ಅಧ್ಯಕ್ಷ ಶಿವುರೆಡ್ಡಿಗೌಡ ನಾಲವಾರ, ಜಿಪಂ ಸದಸ್ಯರಾದ ಶಿವಾನಂದ ಪಾಟೀಲ್, ಶಿವರುದ್ರ ಭೀಣಿ, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ್, ಪ್ರಮುಖರಾದ ಹಣಮಂತ ಸಂಕನೂರ, ರಮೇಶ ಮರಗೋಳ, ವೀರಣ್ಣಗೌಡ ಪರಸರೆಡ್ಡಿ, ಮಾಪಣ್ಣ ಗಂಜಗೇರಿ, ಶಂಬುಲಿಂಗ ಗುಂಡಗುರ್ತಿ, ರಾಜಶೇಖರ ತಿಮ್ಮನಾಯಕ, ಡಾ.ಪ್ರಭರಾಜ ಕಾಂತಾ, ಸಿದ್ದು ಸಂಗಾವಿ, ಶಾಂತಪ್ಪ ಚಾಳಿಕಾರ, ಶರಣು ಡೊಣಗಾಂವ, ಶಿವುಕುಮಾರ ನಾಟೀಕಾರ, ಮನ್ಸೂರ್ ಪಟೇಲ್, ಮುಕ್ತಾರ್ ಪಟೇಲ್, ರಾಜಗೋಪಾಲ ರೆಡ್ಡಿ, ಭೀಮಣ್ಣ ಹೋತಿನಮಡಿ ಇದ್ದರು.

ಕಲಾವಿದ ಜ್ಯೂ.ರಾಜಕುಮಾರ್ ಅಶೋಕ ಬಸ್ತಿ ಚೌಡಯ್ಯ ಕುರಿತು ಹಾಡು ಹಾಡಿದರು. ಜಯಪ್ರಕಾಶ ಕಮಕನೂರ ಸ್ವಾಗತಿಸಿದರು. ಬಸವರಾಜ ಚಿಮ್ಮನಳ್ಳಿ ನಿರೂಪಣೆ ಮಾಡಿದರು.