ಕೆ.ಸಿ.ದೇವಕಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

blank

ವಿರಾಜಪೇಟೆ: ಮೂಲತಃ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ತೋರ ಗ್ರಾಮದವರಾದ ಕೆ.ಸಿ.ದೇವಕಿ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯ 2023ನೇ ಸಾಲಿನ ಪ್ರಶಸ್ತಿ ಲಭಿಸಿದೆ.

ಮಲೆಕುಡಿಯ ಸಮುದಾಯಕ್ಕೆ ಸೇರಿದ ಉರ್ಟಿಕೊಟ್ಟು ಎಂಬ ಸಾಂಪ್ರದಾಯಿಕ ನೃತ್ಯದಲ್ಲಿ ಇವರು ಮಾಡಿದ ಸಾಧನೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸುಮಾರು 25 ವರ್ಷಗಳಿಂದ ದೇವಕಿ ಅವರನ್ನು ಒಳಗೊಂಡ ತೋರ ಗ್ರಾಮದ ಮಲೆ ಕುಡಿಯ ಸಮುದಾಯದ ಹೆಂಗಸರ ಗುಂಪು ಕರ್ನಾಟಕದ ವಿವಿಧಡೆ ಈ ಉರ್ಟಿಕೊಟ್ಟು ನೃತ್ಯವನ್ನು ಪ್ರದರ್ಶಿಸುತ್ತಿದ್ದಾರೆ.

ಉರ್ಟಿ ಕೊಟ್ಟು ಎಂಬುವುದು ಮಲೆ ಕುಡಿಯರ ಸಮುದಾಯಕ್ಕೆ ಸೇರಿದ ಒಂದು ಸಾಂಪ್ರದಾಯಿಕ ಜಾನಪದ ನೃತ್ಯ. ಇದರಲ್ಲಿ ಹೆಂಗಸರ ಗುಂಪು ದುಡಿಯನ್ನು ಬಾರಿಸುತ್ತಾ ಪದಗಳನ್ನು ಹಾಡುತ್ತಾ ಸುತ್ತಲೂ ಕುಣಿಯುತ್ತಾರೆ. ಉರ್ಟಿಕೊಟ್ಟು ಜಾನಪದ ನೃತ್ಯದಲ್ಲಿ ದೇವಕಿ ಅವರ ಸಾಧನೆಯನ್ನು ಗಮನಿಸಿದ ಕೊಡವ ಸಾಹಿತ್ಯ ಅಕಾಡೆಮಿ ಈ ಹಿಂದೆ ಇವರನ್ನು ಗೌರವಿಸಿತ್ತು. ಅದೇ ರೀತಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣನವರು ಕಳೆದ ವರ್ಷದ ಹುತ್ತರಿ ಹಬ್ಬದ ಸಂದರ್ಭ ಇವರನ್ನು ಗೌರವಿಸಿ ಸನ್ಮಾನಿಸಿದ್ದರು. ದೇವಕಿ ಅವರು ದಿವಂಗತ ಚಂಗಪ್ಪ ಅವರ ಪತ್ನಿ. ಇವರಿಗೆ ಮೂವರು ಪುತ್ರರು ಇದ್ದಾರೆ.

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…