16 C
Bangalore
Thursday, December 12, 2019

ಕೆ.ಟಿ.ಎಸ್.ನಿವಾಸದ ಬಳಿ ಪ್ರತಿಭಟನೆ

Latest News

ಮಣ್ಣು ಮಾಲಿನ್ಯದಿಂದ ಜೀವಸಂಕುಲಕ್ಕೆ ಸಂಕಟ

ಮಣ್ಣಿನ ಮಾಲಿನ್ಯವನ್ನು ನಿರ್ಲಕ್ಷಿಸುತ್ತಿದ್ದೇವೆ. ಲಕ್ಷಾಂತರ ವರ್ಷಗಳ ನೈಸರ್ಗಿಕ ಪ್ರಕ್ರಿಯೆಯಿಂದ ಮಣ್ಣು ರೂಪುಗೊಳ್ಳುತ್ತದೆ. ಆದರೆ, ಅದಕ್ಕೆ ಹೇಗೆ ಹಾನಿ ಮಾಡುತ್ತಿದ್ದೇವೆ ಎಂದರೆ ಮುಂದಿನ ದಿನಗಳಲ್ಲಿ ದೊಡ್ಡ ಗಂಡಾಂತರ...

ರೌಡಿ ಕಾಲಿಗೆ ಗುಂಡೇಟು

ಬೆಂಗಳೂರು: ಆರು ತಿಂಗಳ ಹಿಂದೆ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ತಲೆಮರೆಸಿಕೊಂಡು ತಿರುಗುತ್ತಿದ್ದ ಶಾರ್ಪ್​ಶೂಟರ್ ರೌಡಿಶೀಟರ್ ಕಾಲಿಗೆ ಕೆ.ಜಿ. ಹಳ್ಳಿ ಪೊಲೀಸರು...

ಸುಗಮ ಸಾರಿಗೆಗೆ ಬೇಕು 2 ಲಕ್ಷ ಕೋಟಿ ರೂಪಾಯಿ

ಬೆಂಗಳೂರು: ನಗರದ ಸಂಚಾರದಟ್ಟಣೆ ನಿವಾರಿಸುವ ಜತೆಗೆ ವಾಯುಮಾಲಿನ್ಯ ಸಮಸ್ಯೆ ಉಲ್ಬಣಿಸದಂತೆ ತಡೆಯಲು ಅಗತ್ಯ ಸೌಲಭ್ಯ ಕಲ್ಪಿಸಲು 2.30 ಲಕ್ಷ ಕೋಟಿ ರೂ. ಬೇಕಿದೆ. ಮುಂದಿನ 20...

ವಿಕ್ಟೋರಿಯಾದಲ್ಲಿ 68 ಕೋಟಿ ರೂ ವೆಚ್ಚದ ಕಟ್ಟಡ

ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್​ಐ) ಆಸ್ಪತ್ರೆಗಳಲ್ಲಿ ಒಳರೋಗಿಗಳ ಸೇವೆಗಾಗಿ 68.50 ಕೋಟಿ ರೂ. ವೆಚ್ಚದಲ್ಲಿ ಸಾವಿರ ಒಳರೋಗಿಗಳ ದಾಖಲು...

ಪೊಲೀಸರ ಹಸ್ತಕ್ಷೇಪಕ್ಕೆ ಕೋರ್ಟ್ ಕಿಡಿ

ಬೆಂಗಳೂರು: ಸ್ಥಿರಾಸ್ತಿ ವ್ಯಾಜ್ಯವೊಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ಖುದ್ದು ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿ ವಕೀಲರೊಬ್ಬರಿಗೆ ನೋಟಿಸ್ ನೀಡಿದ ಪ್ರಕರಣದಲ್ಲಿ ವಿಜಯನಗರ ಠಾಣೆ ಇನ್​ಸ್ಪೆಕ್ಟರ್...

ಮಂಡ್ಯ: ಸುಮಲತಾ ಅಂಬರೀಷ್ ಮಂಡ್ಯದ ಗೌಡ್ತಿ ಅಲ್ಲ ಎಂದು ಹೇಳಿದ್ದ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ನಿವಾಸದ ಬಳಿ ಅಂಬರೀಷ್ ಅಭಿಮಾನಿಗಳು ಮಂಗಳವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸುಭಾಷ್ ನಗರದಲ್ಲಿರುವ ಕೆ.ಟಿ.ಶ್ರೀಕಂಠೇಗೌಡ ಅವರ ಮನೆ ಸಮೀಪದ ಅಂಬೇಡ್ಕರ್ ಭವನದ ಬಳಿ ಜಮಾಯಿಸಿದ ಅಭಿಮಾನಿಗಳು ಕೆಟಿಎಸ್ ಭಾವಚಿತ್ರ ಫ್ಲೆಕ್ಸ್‌ಗೆ ಚಪ್ಪಲಿಯಿಂದ ಹೊಡೆದು ಅದಕ್ಕೆ ಬೆಂಕಿ ಹಚ್ಚಿ ಅಣಕು ಶ್ರದ್ಧಾಂಜಲಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.

ಶ್ರೀಕಂಠೇಗೌಡರು ತಕ್ಷಣವೇ ಬಹಿರಂಗವಾಗಿ ಸುಮಲತಾ ಅವರ ಕ್ಷಮೆ ಯಾಚಿಸಬೇಕು. ಅಲ್ಲಿವರೆಗೂ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದ ಪ್ರತಿಭಟನಾನಿರತರು, ಮಂಡ್ಯ ಜಿಲ್ಲೆಗೆ ಶ್ರೀಕಂಠೇಗೌಡರ ಕೊಡುಗೆ ಏನು, ನಿಖಿಲ್‌ಕುಮಾರಸ್ವಾಮಿ ಕೊಡುಗೆ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಬಿ ಮೃತಪಟ್ಟಾಗ ನಿಮ್ಮೊಡನೆ ನಾವಿದ್ದೇವೆ ಎಂದೇಳಿ ಈಗ ಅವರ ಕುಟುಂಬಕ್ಕೆ ಅವಮಾನಿಸುತ್ತಿದ್ದಾರೆ. ಅಂಬಿಯಿಂದ ತಮಗೆ ಯಾವುದೇ ಲಾಭವಾಗಿಲ್ಲ ಎಂದು ಜಿಲ್ಲೆಯ ಎಲ್ಲ ಶಾಸಕರು ತಮ್ಮ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳಲಿ ಎಂದು ಸವಾಲೆಸೆದರು.

ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲೇಬೇಕು. ಅಂಬಿ ಅಭಿಮಾನಿಗಳು ಅವರನ್ನು ಕೈ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು. ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ಸುನೀತಾ ರಾಜೇಶ್, ಜ್ಯೋತಿ, ಕನಕ, ನಾಗಮಣಿ, ಹನಿಯಂಬಾಡಿ ಸತೀಶ್, ಬುಲೆಟ್ ರಘು, ಚಿಕ್ಕಮಂಡ್ಯ ಪ್ರತಾಪ್ ಮೊದಲಾದವರು ಭಾಗಿಯಾಗಿದ್ದರು.

ಕೆ.ಟಿ.ಎಸ್. ಮನೆಗೆ ಬಿಗಿಭದ್ರತೆ: ಅಂಬಿ ಅಭಿಮಾನಿಗಳು ಕೆ.ಟಿ.ಶ್ರೀಕಂಠೇಗೌಡರ ಮನೆಗೆ ಮುತ್ತಿಗೆ ಹಾಕುತ್ತಾರೆಂಬ ಸುಳಿವಿನ ಹಿನ್ನೆಲೆಯಲ್ಲಿ ರಾತ್ರಿಯಿಂದಲೇ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿತ್ತು. ಬೆಳಗ್ಗೆ ಮನೆ ಸುತ್ತಲಿನ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ಹಲವು ಪೊಲೀಸರು ಜಮಾಯಿಸಿದ್ದರು. ಮನೆಗೆ ಬೀಗ ಜಡಿದಿದ್ದು, ಪತ್ನಿ ಪ್ರವಾಸದಲ್ಲಿದ್ದಾರೆ. ಪುತ್ರ ವಿದೇಶಕ್ಕೆ ತೆರಳಿದ್ದು, ಶ್ರೀಕಂಠೇಗೌಡರು ಮೈಸೂರಿನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಇನ್ನೂ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

ಸಿಎಂ ಎಚ್‌ಡಿಕೆ ವಿಡಿಯೋ ವೈರಲ್ : ಮತ್ತೊಂದೆಡೆ ಸಿಎಂ ಕುಮಾರಸ್ವಾಮಿ ತೆಲುಗು ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ವಿಡಿಯೋ ವೈರಲ್ ಆಗಿದ್ದು, ತೀವ್ರ ಚರ್ಚೆಗೊಳಪಟ್ಟಿದೆ. ಪುತ್ರ ನಿಖಿಲ್ ಅಭಿನಯದ ಜಾಗ್ವಾರ್ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ತೆಲುಗು ವಾಹಿನಿಯ ನಿರೂಪಕಿ ತೆಲುಗು ಇಂಡಸ್ಟ್ರಿ ಬಗ್ಗೆ ಆಸಕ್ತಿ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಿಎಂ, ತೆಲುಗು ಮತ್ತು ಕನ್ನಡ ಭಾಷೆ ನಡುವೆ ಸಾಮ್ಯತೆ ಇದೆ. ರಾಜ್ಯದ ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರಿನಲ್ಲಿ ಹೆಚ್ಚು ಜನ ತೆಲುಗು ಮಾತನಾಡುತ್ತಾರೆ. ನಾನು ಮದುವೆ ಆಗಿರುವುದು ಕೂಡ ತೆಲುಗು ಕುಟುಂಬದವರೇ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಅನಿತಾ ಕುಮಾರಸ್ವಾಮಿ ಯಾವೂರ ಗೌಡ್ತಿ ಎಂದು ಅಂಬಿ ಅಭಿಮಾನಿಗಳು ಕುಹಕವಾಡುತ್ತಿದ್ದಾರೆ.

ಮಂಡ್ಯಕ್ಕೆ ನಿಮ್ಮ ಕೊಡುಗೆ ಏನು ?: ಅಂಬಿ ಅಭಿಮಾನಿ ಕಾರ್ತಿಕ್ ಎಂಬುವರು ಆಡಿಯೋ ಒಂದನ್ನು ಬಿಟ್ಟಿದ್ದು, ಅದು ಕೂಡ ಭಾರಿ ಚರ್ಚೆಗೆ ಬಂದಿದೆ. ಚನ್ನಪಟ್ಟಣದಲ್ಲಿ ನೀವು ಬಂದು ಚುನಾವಣೆಗೆ ನಿಂತಿರಲ್ಲ. ಅಲ್ಲಿಗೆ ನಿಮ್ಮ ಕೊಡುಗೆ ಏನೆಂದು ಸಿಎಂ ಕುಮಾರಸ್ವಾಮಿ ಅವರನ್ನು ಖಾರವಾಗಿ ಪ್ರಶ್ನಿಸಿದ್ದಾರೆ.
ಮಂಡ್ಯಕ್ಕೆ ಸುಮಲತಾ ಕೊಡುಗೆ ಏನೆಂದು ಸಿಎಂ ಪ್ರಶ್ನೆ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ಚನ್ನಪಟ್ಟಣದ ಭಗೀರಥ ಯೋಗೀಶ್ವರ್ ಬಿಜೆಪಿಯಿಂದ ಸ್ಪರ್ಧಿಸಿದ್ದಕ್ಕೆ ಸೋತರು. ಯೋಗೀಶ್ವರ್ ಪಕ್ಷೇತರವಾಗಿ ನಿಂತಿದ್ದರೆ 10 ಡಿ.ಕೆ.ಶಿವಕುಮಾರ್, 10 ಕುಮಾರಸ್ವಾಮಿ, 10 ದೇವೇಗೌಡರು ಬಂದಿದ್ದರೂ ಅವರನ್ನು ಸೋಲಿಸಲು ಆಗುತ್ತಿರಲಿಲ್ಲ. ನೀವೇನು ಅಲ್ಲಿ ಕಾಲುವೆ ತೋಡಿದ್ರಾ, ಸಿಎಂ ಆಗುತ್ತೀರಾ ಎಂಬ ಕಾರಣದಿಂದ ನಾವೆಲ್ಲ ನಿಮ್ಮ ಪರವಾಗಿ ಮತಯಾಚಿಸಿ ಮುಠ್ಠಾಳರಾದೆವು.

ಹಾಸನದಲ್ಲಿ ರಾಜಕೀಯ ಆರಂಭಿಸಿ, ಚನ್ನಪಟ್ಟಣ, ರಾಮನಗರದಲ್ಲಿ ಆವರಿಸಿಕೊಂಡಿದ್ದೀರಿ. ಈಗ ನಿಮ್ಮ ಮಗನನ್ನು ಮಂಡ್ಯಕ್ಕೆ ಕರೆತರಲು ಮುಂದಾಗಿದ್ದೀರಿ. ಮಂಡ್ಯದ ಜನ ಮುಠ್ಠಾಳರಲ್ಲ. ಮಂಡ್ಯಕ್ಕೆ ನಿಮ್ಮ ಕೊಡುಗೆ ಏನು? ನಿಖಿಲ್ ಕುಮಾರಸ್ವಾಮಿ ಕೊಡುಗೆ ಏನು? ತಿಳಿಸಿ. ನಮ್ಮ ನಿಮ್ಮ ಋಣ ಮುಗಿಯಿತು. ಈ ಸರ್ಕಾರ ಯಾವಾಗ ಬೀಳುತ್ತದೆಂದು ಕಾಯುತ್ತಿದ್ದೇವೆ. ಪ್ರತಿದಿನ ದೇವರಿಗೆ ಒಂದು ಕಡ್ಡಿ ಹೆಚ್ಚಾಗಿ ಹಚ್ಚಿ ಸರ್ಕಾರ ಬೀಳಲು ಪ್ರಾರ್ಥಿಸುತ್ತೇವೆ. ಕೆ.ಟಿ.ಶ್ರೀಕಂಠೇಗೌಡರು ಸಚಿವ ಸ್ಥಾನಕ್ಕಾಗಿ ಬಕೆಟ್ ಹಿಡಿಯುತ್ತಿದ್ದಾರೆ. ನಿಮ್ಮ ಪರವಾಗಿ ಮತ ಕೇಳಿದ್ದಕ್ಕೆ ನಾಚಿಕೆ ಆಗುತ್ತಿದೆ. ಸಮಯ ಸಾಧಕರು ನೀವು ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಆಡಿಯೋ ಕೂಡ ವೈರಲ್ ಆಗಿದೆ.

Stay connected

278,741FansLike
587FollowersFollow
624,000SubscribersSubscribe

ವಿಡಿಯೋ ನ್ಯೂಸ್

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...