ಕೆಲಸ ಕಿತ್ತುಕೊಳ್ಳಲಿವೆ ರೋಬಾಟ್​ಗಳು, 2,50,000 ಉದ್ಯೋಗಿಗಳಿಗೆ ಕುತ್ತು

ಲಂಡನ್: ಸ್ವಯಂಚಾಲಿತ ಮತ್ತು ಕಂಪ್ಯೂಟರೀಕರಣದಿಂದಾಗಿ ಮುಂದಿನ 15 ವರ್ಷಗಳಲ್ಲಿ ಇಂಗ್ಲೆಂಡಿನಲ್ಲಿ ಸುಮಾರು 2,50,000 ಸಾರ್ವಜನಿಕ ರಂಗದ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದು, ಅವರ ಸ್ಥಾನಕ್ಕೆ ರೋಬಾಟ್​ಗಳನ್ನು ನೇಮಿಸಲಾಗುತ್ತದೆ ಎಂದು ವರದಿಯೊಂದು ತಿಳಿಸಿದೆ. ರಿಫಾಮ್ರ್ ಎಂಬ ಚಿಂತಕರ ವೆಬ್​ಸೈಟ್ ಪ್ರಕಾರ, ವೆಚ್ಚ ಕಡಿತ ಮತ್ತು ಹೆಚ್ಚು ಉತ್ಪಾದಕತೆಯ ಉದ್ದೇಶದಿಂದ ಈ ಕ್ರಮಕ್ಕೆ ಸರ್ಕಾರ ಮುಂದಾಗಲಿದೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ರೋಬಾಟ್​ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕೃತಕ ಬುದ್ದಿಮತ್ತೆ ಮತ್ತು ತಂತ್ರಜ್ಞಾನ ಬಳಸುವ ರೋಬಾಟ್​ಗಳು ಸಾರ್ವಜನಿಕ ರಂಗದ ಬಹುತೇಕ ಉದ್ಯೋಗವನ್ನು ಆಕ್ರಮಿಸಲಿವೆ. 2030ರ ವೇಳೆಗೆ ಈ ರೋಬಾಟೀಕರಣದಿಂದ ಪ್ರತಿ ವರ್ಷ ಸರ್ಕಾರಕ್ಕೆ ವಾರ್ಷಿಕ 3 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತ ಉಳಿತಾಯವಾಗಲಿದೆ ಎಂದು ರಿಫಾಮ್ರ್ ಹೇಳಿದೆ. ವೈದ್ಯಕೀಯ ಕ್ಷೇತ್ರದಲ್ಲೂ ರೋಬಾಟ್​ಗಳ ಬಳಕೆಯಾಗಲಿದ್ದು, ಕೆಲವೇ ಕೆಲಸಗಳಿಗೆ ಮಾತ್ರ ಮಾನವರನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.

-ಏಜೆನ್ಸೀಸ್

 

Leave a Reply

Your email address will not be published. Required fields are marked *