ಕೆಲವೇ ವರ್ಷಗಳಲ್ಲಿ ಏಡ್ಸ್ ನಿಯಂತ್ರಣ

1 Min Read
ಕೆಲವೇ ವರ್ಷಗಳಲ್ಲಿ ಏಡ್ಸ್ ನಿಯಂತ್ರಣ
ವಿಶ್ವ ಏಡ್ಸ್ ದಿನದ ಅಂಗವಾಗಿ ಅಥಣಿಯಲ್ಲಿ ಜನಜಾಗೃತಿ ಪಾದಯಾತ್ರೆ ಜರುಗಿತು. ಸುರೇಶ ಮುಂಜೆ, ಡಾ. ಬಸಗೌಡ ಕಾಗೆ, ಅರುಣ ಯಲಗುದ್ರಿ, ಸಂತೋಷ ಬೊಮ್ಮಣವರ ಇತರರಿದ್ದರು.

ಅಥಣಿ, ಬೆಳಗಾವಿ: ದೇಶದಲ್ಲಿ 2030ರ ಹೊತ್ತಿಗೆ ಏಡ್ಸ್ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ ಎಂದು ಆರೋಗ್ಯಾಧಿಕಾರಿ ಡಾ. ಬಸಗೌಡ ಕಾಗೆ ಹೇಳಿದರು.

ವಿಶ್ವ ಏಡ್ಸ್ ದಿನದ ಅಂಗವಾಗಿ ಆರೋಗ್ಯ ಇಲಾಖೆ, ರೋಟರಿ ಕ್ಲಬ್ ಮತ್ತು ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜನಜಾಗೃತಿ ಯಾತ್ರೆಯಲ್ಲಿ ಅವರು ಮಾತನಾಡಿದರು.
ಏಡ್ಸ್ ಬಗ್ಗೆ ಜನರು ಹೆಚ್ಚು ಜಾಗೃತರಾಗಿದ್ದಾರೆ. ಯುವಕ, ಯುವತಿಯರು ಸಹ ಇದರ ಮಾಹಿತಿ ಪಡೆದು ಆರೋಗ್ಯವನ್ನು ಕಾಪಾಡಿ ಕೊಳ್ಳ ಬೇಕು ಎಂದರು.

ತಹಸೀಲ್ದಾರ್ ಸುರೇಶ ಮುಂಜೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಏಡ್ಸ್ ಬಗ್ಗೆ ಜಾನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಸರ್ಕಾರಿ ಆಸ್ಪತ್ರೆಯಿಂದ ಪ್ರಾರಂಭವಾದ ಜನಜಾಗೃತಿ ಯಾತ್ರೆ ಶಿವಯೋಗಿ ವೃತ್ತದ ಮೂಲಕ ಅಂಬೇಡ್ಕರ್ ವೃತ್ತ, ಮುಖ್ಯರಸ್ತೆಗಳಲ್ಲಿ ಸಂಚರಿಸಿತು.

ರೋಟರಿ ಕ್ಲಬ್ ಹಿರಿಯ ಸದಸ್ಯ ಅರುಣ ಯಲಗುದ್ರಿ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ ಬೊಮ್ಮಣವರ, ಭರತ ಸೋಮಯ್ಯ, ದೀಪಕ ಪಾಟೀಲ, ಮೇಘರಾಜ ಪರಮಾರ, ಶ್ರೀಕಾಂತ ಅಥಣಿ, ಅರುಣ ಸೌದಾಗರ, ಡಾ. ಚಿದಾನಂದ ಮೇತ್ರಿ, ಡಾ. ಬಸವರಾಜ ಈರಳಿ, ಸುರೇಶ ಪಾಟೀಲ, ಸಚಿನ ದೇಸಾಯಿ, ಎಸ್.ಜಿ.ಸಲಗರೆ, ಎಸ್.ಎಂ.ವಾಲಿಕಾರ ಇತರರಿದ್ದರು.

See also  ಕಿತ್ತೂರು ಉತ್ಸವಕ್ಕೆ ಅದ್ದೂರಿ ಚಾಲನೆ
Share This Article