20.4 C
Bangalore
Monday, December 9, 2019

ಕೆರೆ ಸಂರಕ್ಷಣೆಯಲ್ಲಿ ನಾರಿ ಪಡೆ

Latest News

ಬೈ ಎಲೆಕ್ಷನ್ ರಿಸಲ್ಟ್​| ಯಲ್ಲಾಪುರದಲ್ಲಿ ಮೂರನೇ ಸುತ್ತು ಮತ ಎಣಿಕೆ ಅಂತ್ಯ

ಕಾರವಾರ: ರಾಜ್ಯದ ಉಪಚುನಾವಣಾ ಸಮರದಲ್ಲಿ ಗಮನಸೆಳೆದಿರುವ ಯಲ್ಲಾಪುರ ಕ್ಷೇತ್ರದ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಮೂರನೇ ಸುತ್ತು ಮುಕ್ತಾಯವಾದಾಗ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ...

ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮುನ್ನಡೆ

ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ 417 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ...

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಮೊದಲ ಸುತ್ತಿನ ಮತಎಣಿಕೆ ಮುಕ್ತಾಯ: ಕೆ.ಆರ್​.ಪೇಟೆಯಲ್ಲಿ ಜೆಡಿಎಸ್​, ಹುಣಸೂರಿನಲ್ಲಿ ಕಾಂಗ್ರೆಸ್​ ಮುನ್ನಡೆ

ಹುಣಸೂರು/ಕೆ.ಆರ್​ಪೇಟೆ: ಕೆ.ಆರ್​.ಪೇಟೆ ಕ್ಷೇತ್ರದ ಉಪಚುನಾವಣೆಯ ಅಂಚೆ ಮತಎಣಿಕೆಯಲ್ಲಿ ಮುಂದಿದ್ದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮೊದಲ ಸುತ್ತಿನ ಮತಎಣಿಕೆಯಲ್ಲಿ ಹಿಂದೆ ಉಳಿದಿದ್ದು, ಜೆಡಿಎಸ್​ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಚಿಕ್ಕಬಳ್ಳಾಪುರದಲ್ಲಿ 31 ಅಂಚೆಮತದಲ್ಲಿ 27 ಸ್ವೀಕೃತ, ಬಿಜೆಪಿ ಅಭ್ಯರ್ಥಿ ಸುಧಾಕರ್​ ಮುನ್ನಡೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಡೆದ ಅಂಚೆ ಮತಎಣಿಕೆಯಲ್ಲಿ ಚಲಾವಣೆಯಾದ ಒಟ್ಟು 31 ಅಂಚೆಮತದಲ್ಲಿ 27 ಸ್ವೀಕೃತವಾಗಿವೆ. ಅಂಚೆ ಮತೆಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್​...

ರೋಣ: ಪಟ್ಟಣದಲ್ಲಿರುವ ಐತಿಹಾಸಿಕ ಕೆರೆಯ ಉಳಿವಿಗಾಗಿ ರೈತ ಸಂಘದ ಮಹಿಳೆಯರು ಟೊಂಕ ಕಟ್ಟಿ ನಿಂತಿದ್ದಾರೆ. ಕೆರೆ ಸಂರಕ್ಷಣಾ ಕಣ್ಗಾವಲು ಸಮಿತಿ ಕಟ್ಟಿಕೊಂಡಿರುವ ಅವರು, ಕೆರೆಯ ಸುತ್ತ ಬೆಳೆದ ಕಸದ ಗಿಡಗಳನ್ನು ಕಿತ್ತು, ತ್ಯಾಜ್ಯ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕೆರೆ ಅಕ್ಕ ಪಕ್ಕ ಶೌಚಕ್ಕೆ ಬರುವವರಿಗೆ ಗುಲಾಬಿ ಹೂ ನೀಡಿ ‘ದಯವಿಟ್ಟು ಇನ್ನೊಮ್ಮೆ ಇಲ್ಲಿ ಶೌಚಕ್ಕೆ ಬರಬೇಡಿ’ ಎಂದು ಕೈ ಮುಗಿದು ಮನವೊಲಿಸುತ್ತಿದ್ದಾರೆ.

8 ಎಕರೆ ವಿಸ್ತಾರವಾದ ಕೆರೆಯು ಬಯಲು ಶೌಚ ತಾಣವಾಗಿದೆ. ಸುತ್ತಲೂ ಭೂಮಿ ಒತ್ತುವರಿಯಾಗಿ ಕೆರೆಯ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಸ್ವಚ್ಛತೆ ಇಲ್ಲದ ಕಾರಣ ಕೆರೆಯ ಪರಿಸರ ಹಾಳಾಗಿದೆ. ಒಂದು ಕಾಲದಲ್ಲಿ ಈ ಕೆರೆಯ ನೀರನ್ನು ಪಟ್ಟಣದ ಜನತೆ ಕುಡಿಯವುದಕ್ಕೆ ಬಳಸುತ್ತಿದ್ದರು. ಆದರೆ, ಈಗ ಜಾನುವಾರು ಕೂಡ ನೀರು ಕುಡಿಯಲು ಹಿಂಜರಿಯುತ್ತಿವೆ. ಅವ್ಯವಸ್ಥೆಯಿಂದ ಕೂಡಿರುವ ಕರೆಯ ಸ್ವಚ್ಛತೆ ತೀರಾ ಅಗತ್ಯವಿತ್ತು. ಹೀಗಾಗಿ, ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ರೈತ ಸಂಘದ ಮಹಿಳಾ ಕಾರ್ಯಕರ್ತೆಯರು ಕೆರೆ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಕೇವಲ ರೈತ ಮಹಿಳಾ ಕಾರ್ಯಕರ್ತೆಯರ ಒಂದು ಗುಂಪು ಶ್ರಮದಾನ ಮಾಡಿದರೆ ಕೆರೆ ಸ್ವಚ್ಛಗೊಳ್ಳುವುದಿಲ್ಲ. ಸಾರ್ವಜನಿಕರೂ ಸಾಥ್ ನೀಡುತ್ತಾರೆ ಎಂಬ ಆತ್ಮವಿಶ್ವಾಸ ಇವರದ್ದಾಗಿದೆ.

ಕಣ್ಗಾವಲು ಸಮಿತಿ ರಚನೆ

ಮಹಿಳಾ ರೈತ ಸಂಘದ ಒಂದು ನೂರು ಕಾರ್ಯಕರ್ತೆಯರಿರುವ 10 ತಂಡ ರಚಿಸಲಾಗಿದೆ. ಒಂದು ತಂಡದಲ್ಲಿ 10 ಮಹಿಳೆಯರಿದ್ದು, ಪ್ರತಿ ದಿನ ಒಂದು ತಂಡದಂತೆ ಬೆಳಗಿನ ಜಾವ 6 ರಿಂದ 8ರವೆರೆಗೆ ಕರೆಯ ಸುತ್ತ ಯಾರೂ ಬಯಲು ಶೌಚಕ್ಕೆ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಕಸ ತೆಗೆಯುವ, ಪೊದೆ ಸ್ವಚ್ಛ ಮಾಡುವ, ಸಸಿ ಬೆಳೆಸುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಬ್ಯಾನರ್ ಅಳವಡಿಸುವುದು, ಭಿತ್ತಿಚಿತ್ರ, ಕರಪತ್ರ ಹಂಚುವ ಕೆಲಸವನ್ನು ಈ ಕಣ್ಗಾವಲು ತಂಡ ಮಾಡುತ್ತಿದೆ. ಈ ತಂಡದಲ್ಲಿ ಲೀಲಾ ಚಿತ್ರಗಾರ, ವಿಜಯಲಕ್ಷಿ್ಮೕ ಹಿರೇಲಿಂಗನಗೌಡ್ರ, ಸುವರ್ಣಾ ಭಾಗೂರಮಠ, ಗೀತಾ ನಂದಿಕೋಲ, ಮಲ್ಲಮ್ಮ ಜಗ್ಗಲ, ಮಲ್ಲಮ್ಮ ಗದಗಿನ, ಶಿವವ್ವಾ ಕಡಿವಾಲ, ರುದ್ರಮ್ಮಾ ಸೊಬರದ, ರೇಣವ್ವಾ ಕಡಿವಾಲ, ಶಿವವ್ವಾ ಉಪ್ಪಿನ, ಸುಷ್ಮಾ ಕುಂಬಾರ ಇತರರು ಇದ್ದಾರೆ.

ಜಲಚರಗಳ ರಕ್ಷಣೆ

ಕೆರೆಯಲ್ಲಿನ ಗಿಡ, ಪೊದೆಗಳು ಹಾಗೂ ತ್ಯಾಜ್ಯವನ್ನು ಶುಕ್ರವಾರ ಸ್ವಚ್ಛ ಮಾಡಿದ್ದೇವೆ. ಜಲಚರಗಳಿಗಾಗಿ ಕೆರೆ ಸಂರಕ್ಷಿಸುವುದು ನಮ್ಮ ಮೂಲ ಉದ್ದೇಶ. ಊರಿನ ನೈರ್ಮಲ್ಯ ಕಾಪಾಡುವುದು, ಕೆರೆಯನ್ನು ವಿಹಾರ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳು, ಪುರಸಭೆ ಚುನಾಯಿತ ಪ್ರತಿನಿಧಿಗಳು, ವೈದ್ಯರು, ವಕೀಲರು, ಶಿಕ್ಷಕರು, ನೌಕರರ ಸಂಘದ ಪದಾಧಿಕಾರಿಗಳು ನಮ್ಮೊಂದಿಗೆ ಕೈಜೋಡಿಸುವಂತೆ ಮನವಿ ಮಾಡಲು ರೈತ ಸಂಘದ ಮಹಿಳಾ ಕಾರ್ಯಕರ್ತೆಯರು ಅವರ ಮನೆ ಮನೆಗೆ ತೆರಳಲಿದ್ದಾರೆ ಎನ್ನುತ್ತಾರೆ ರಾಜ್ಯ ರೈತ ಸಂಘದ ಮಹಿಳಾ ಘಟಕದ ಉಪಾಧ್ಯಕ್ಷೆ ಲೀಲಾ ಚಿತ್ರಗಾರ.

ರೈತ ಸಂಘದ ಮಹಿಳೆಯರು ಕೆರೆ ಸ್ವಚ್ಛತೆ ಕಾರ್ಯ ಕೈಗೊಂಡಿರುವುದು ಸ್ವಾಗತಾರ್ಹ. ಅವರ ಈ ಕಾರ್ಯಕ್ಕೆ ನಮ್ಮ ಪುರಸಭೆಯಿಂದ ಎಲ್ಲ ರೀತಿಯಿಂದ ಸಹಕಾರ ನೀಡಲಾಗುವುದು.
| ನೂರುಲ್ಲಾಖಾನ್ ರೋಣ ಪುರಸಭೆ ಮುಖ್ಯಾಧಿಕಾರಿ

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...