ಕೆರೆ ಉಳಿವಿಗೆ ಒತ್ತುವರಿ ತೆರವು

ಆನೇಕಲ್: ತಾಲೂಕಿನ ಬಹುತೇಕ ಕೆರೆ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿರುವ ಬಗ್ಗೆ ದೂರುಗಳಿದ್ದು, ಕೆರೆ ಜಾಗವನ್ನು ಎಷ್ಟೇ ಪ್ರಭಾವಿಗಳು ಒತ್ತುವರಿ ಮಾಡಿದ್ದರು ಕಾರ್ಯಾಚರಣೆ ನಡೆಸಿ ತೆರವು ಮಾಡುವ ಮೂಲಕ ಕೆರೆ ಉಳಿಸಲಾಗುವುದು ಎಂದು ಬೆಂಗಳೂರು ದಕ್ಷಿಣ ವಿಭಾಗದ ಉಪವಿಭಾಗಾಧಿಕಾರಿ ಪಾತರಾಜು ತಿಳಿಸಿದರು.

ಅತಿಕ್ರಮಣವಾಗಿದ್ದ ಹಾರಗದ್ದೆ ಕೆರೆ ಜಾಗ ಶನಿವಾರ ತೆರವುಗೊಳಿಸಿ ಮಾತನಾಡಿದರು, ತಾಲೂಕಿನ ಜಿಗಣಿ ಹೋಬಳಿ ವ್ಯಾಪ್ತಿಯ ಹಾರಗದ್ದೆಯ ಸರ್ವೆ ನಂಬರ್ 121 ರಲ್ಲಿರುವ ಕೆರೆ 75.35 ಎಕರೆ ವಿಸ್ತೀರ್ಣ ಹೊಂದಿದೆ. ಆದರೆ ಈ ಭಾಗದ ಕೆಲವರು ಸರ್ಕಾರಿ ಕೆರೆ ಜಾಗ ಕಬಳಿಸಿ ಸುಮಾರು 2.20 ಎಕರೆಯಲ್ಲಿ ವಾಣಿಜ್ಯ ಮಳಿಗೆ ಮತ್ತು ಮನೆ ನಿರ್ವಿುಸಿಕೊಂಡಿದ್ದಾರೆ. ಇದನ್ನು ಗುರುತಿಸಿ ತಹಸೀಲ್ದಾರ್ ಮುಂಚಿತವಾಗಿ ನೋಟಿಸ್ ನೀಡಿ ತೆರವು ಮಾಡುವಂತೆ ಸೂಚನೆ ನೀಡಿದ್ದರು. ಆದರೆ ತೆರವು ಮಾಡದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡಲಾಗಿದೆ ಎಂದರು.

ತಹಸೀಲ್ದಾರ್ ಸಿ.ಮಹಾದೇವಯ್ಯ ಮಾತನಾಡಿ, ತಾಲೂಕಿನ ಕೆರೆಗಳ ಜಾಗವನ್ನು ಯಾರೇ ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೆ ತೆರವು ಮಾಡಿ ಕಾನೂನು ಕ್ರಮ ಜರಗಿಸಲಾಗುವುದು. ಕೆರೆ ಉಳಿಸುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.

ಜಾರಿದಳ ಎಸಿ ಹೋಟೆಲ್ ಶಿವಪ ಹಾಗೂ ಎಸ್​ಟಿಎಸ್​ಎಫ್ ಡಿವೈಎಸ್ಪಿ ಮುರಳೀಧರ್, ಪ್ರಭಾರ ಉಪತಹಸೀಲ್ದಾರ್ ದಿವಾಕರ್, ರಾಜಸ್ವ ನಿರೀಕ್ಷಕಿ ಚೈತ್ರಾ ಹಾಜರಿದ್ದರು. ಕಟ್ಟಡ ಹಾಗೂ ಮಿಷನರಿ ಸ್ಥಳಾಂತರಕ್ಕೆ ಗ್ರಾನೈಟ್ ಕಂಪನಿ ಮಾಡಿದ ಹಿನ್ನೆಲೆಯಲ್ಲಿ ಮೂರು ದಿನದ ಕಾಲಾವಕಾಶ ನೀಡಲಾಯಿತು.

Leave a Reply

Your email address will not be published. Required fields are marked *