ಕೆರೆ ಅಭಿವೃದ್ಧಿಯಾದ್ರೆ ನೀರಿನ ದಾಹ ದೂರ

ಚನ್ನರಾಯಪಟ್ಟಣ: ಕೆರೆಗಳನ್ನು ಅಭಿವೃದ್ಧಿ ಮಾಡಿದರೆ ಗ್ರಾಮಗಳಲ್ಲಿನ ನೀರಿನ ಕೊರತೆ ನೀಗಿಸಬಹುದು ಎಂದು ಜಿಲ್ಲಾಧಿಕಾರಿ ಕರೀಗೌಡ ತಿಳಿಸಿದರು.

ಹೋಬಳಿಯ ಬೂದಿಗೆರೆ ಕೆರೆ ಅಭಿವೃದ್ಧಿ ಪಡಿಸಲು ಸೋಮವಾರ ಕೆರೆಕಟ್ಟೆಯ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಡಿದರು.

ಗ್ರಾಮಾಂತರ ಪ್ರದೇಶದಲ್ಲಿ ಕೆರೆಗಳ ಅಭಿವೃದ್ಧಿ ಪಡಿಸಬೇಕಾದರೆ ದಾನಿಗಳ ಸಹಕಾರ ಅಗತ್ಯ. ಹೀಗಾಗಿ ದಾನಿಗಳ ಸಹಕಾರದಲ್ಲಿ ಕೆರೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಭೆ ಕರೆಯಾಲಾಗಿದೆ. ಗ್ರಾಮಗಳಲ್ಲಿ ರೈತರು ಕೈಜೋಡಿಸಿದರೆ ಕೆರೆ ಅಭಿವೃದ್ಧಿಗೆ ಉತ್ತಮ ಸಹಕಾರ ಸಿಕ್ಕಂತಾಗುತ್ತದೆ ತಿಳಿಸಿದರು.

ಪಾರಂಪರಿಕ ಜಲಮೂಲಗಳಾದ ಕೆರೆ, ಬಾವಿ, ನದಿಗಳ ರಕ್ಷಣೆ, ಜಲರಕ್ಷಣೆ, ಜಲ ಮರುಪೂರಣ ಹಾಗೂ ಅರಣ್ಯೀಕರಣ ಮಾಡುವುದು ಜಲಶಕ್ತಿ ಅಭಿಯಾನದ ಪ್ರಮುಖ ಉದ್ದೇಶ. ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅಂತರ್ಜಲ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು.

ಜಿಪಂ ಸದಸ್ಯ ಜಿ.ಲಕ್ಷ್ಮೀನಾರಾಯಣ್ ಮಾತನಾಡಿ, ಗ್ರಾಮದ ಹಿರಿಯರು ಹಾಗೂ ಜನಪ್ರತಿನಿಧಿಗಳು ಕೆರೆ ಅಭಿವೃದ್ಧಿಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಸಮಾಜದಲ್ಲಿ ಒಳಿತಿಗಾಗಿ ನಾವು ಮಾಡುವ ಸೇವೆಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ನಮ್ಮ ಸುತ್ತಮುತ್ತಲಿನ ಕೆರೆಗಳ ಅಭಿವೃಧಿ್ಧೆ ಹೆಚ್ಚು ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಸರ್ಕಾರದ ನೆರವಿಲ್ಲದೆ ಕೆರೆ ಅಭಿವೃದ್ಧಿ: 3 ತಿಂಗಳಲ್ಲಿ ಕೆರೆ ಅಭಿವೃದ್ಧಿ ಪಡಿಸಲು ತೀರ್ವನಿಸಿರುವ ಜಿಲ್ಲಾಧಿಕಾರಿ ಬೆಳಗ್ಗೆ 6 ಗಂಟೆಗೆ ಭೇಟಿ ನೀಡಿ ಜನಪ್ರತಿನಿಧಿಗಳು ಹಾಗೂ ಗ್ರಾಮದ ಮುಖಂಡರ ಜತೆ ದೇಣಿಗೆ ಸಂಗ್ರಹದ ಬಗ್ಗೆ ಚರ್ಚೆ ನಡೆಸಿ ಸರ್ಕಾರದ ನೆರವಿಲ್ಲದೆ ಕೆರೆ ಅಭಿವೃದ್ಧಿ ಮಾಡುವ ಬಗ್ಗೆ ತೀರ್ವನಿಸಿದರು.

ತಾಪಂ ಮಾಜಿ ಅಧ್ಯಕ್ಷ್ಷೆ ಭಾರತಿ ಲಕ್ಷ್ಮಣ್​ಗೌಡ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಂಜುನಾಥ್, ಗಂಗವಾರ ಚೌಡಪ್ಪನಹಳ್ಳಿ ಗ್ರಾಪಂ ಅಧ್ಯಕ್ಷೆ ಮೇನಕಾ ಕೃಷ್ಣಮೂರ್ತಿ, ಮಾಜಿ ಅಧ್ಯಕ್ಷ ಸಿ.ಎಸ್.ರಾಜಣ್ಣ, ಬೂದಿಗೆರೆ ಗ್ರಾಪಂ ಸದಸ್ಯರಾದ ನಟರಾಜ್, ಮುರಳಿ, ರಾಮಮೂರ್ತಿ, ಶಾರದಮ್ಮ ಸೀನಪ್ಪ, ಗಂಗವಾರ-ಚೌಡಪ್ಪನಹಳ್ಳಿ ಗ್ರಾಪಂ ಸದಸ್ಯ ಎಂ.ರಾಜಣ್ಣ, ವಿಎಸ್​ಎಸ್​ಎನ್ ಅಧ್ಯಕ್ಷ ಶಂಕರಪ್ಪ, ಉಪಾಧ್ಯಕ್ಷ ಹನುಮಂತಪ್ಪ, ನಿರ್ದೇಶಕ ಚಂದ್ರಪ್ಪ, ಚೌಡಪ್ಪನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಶಂಕರ್, ದಾನಿಗಳಾದ ಹರೇಬನ್ನಿಮಂಗಲ ನಾರಾಯಣಸ್ವಾಮಿ, ಮಂಡಿಬೆಲೆ ಕೇಶವ್, ಮತ್ತಿತರರು ಇದ್ದರು.

ಡಿಸಿ ಕಾರ್ಯಕ್ಕೆ ಮೆಚ್ಚುಗೆ: ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಜನರ ಸಹಕಾರ ಸದಾ ದೊರೆಯಲಿದೆ. ಅದಕ್ಕೆ ಸಾಕ್ಷಿಯಾಗಿ ಜಿಲ್ಲಾಧಿಕಾರಿ ಕರೀಗೌಡ ಅವರು ಜಿಲ್ಲೆಯಲ್ಲಿ ನಡೆಸುತ್ತಿರುವ ಅಭಿಯಾನ ಮೆಚ್ಚುವಂಥದ್ದು. ಕೆರೆಗಳನ್ನು ಉಳಿಸಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ಸರ್ಕಾರದ ಮೇಲಷ್ಟೇ ಅಲ್ಲ, ಸಾರ್ವಜನಿಕರ ಮೇಲೂ ಇದೆ ಎಂಬುದನ್ನು ಇದು ಅರ್ಥ ಮಾಡಿಸುತ್ತಿದೆ ಎಂದು ಬೂದಿಗೆರೆ ಗ್ರಾಪಂ ಅಧ್ಯಕ್ಷ ಕೆ. ಶ್ರೀನಿವಾಸ್​ಗೌಡ ತಿಳಿಸಿದರು.

Leave a Reply

Your email address will not be published. Required fields are marked *