ಕನಕಗಿರಿ: ತಾಲೂಕಿನ ಬಂಕಾಪುರ ಗ್ರಾಮಸ್ಥರು ರಸ್ತೆಯಲ್ಲಿ ನಿಂತಿರುವ ಮಳೆ ನೀರಿನಿಂದ ರೋಸಿಹೋಗಿದ್ದು, ಗುಂಡಿಗಳಲ್ಲಿನ ಕೊಳಚೆ ನೀರಿನಿಂದ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮಕ್ಕೆ ಹೊಂದಿಕೊಂಡು ಹಲವು ಕಂಕರ್ ಕ್ರಷರ್ ಮಷಿನ್‌ಗಳಿದ್ದು, ದಿನನಿತ್ಯ ಹತ್ತಾರು ಟಿಪ್ಪರ್‌ಗಳು ಹಗಲು-ರಾತ್ರಿಯನ್ನದೇ ಸಂಚರಿಸುತ್ತವೆ. ವಾಹನಗಳ ಸಂಚಾರದಿಂದ ಧೂಳು ಹೊರಹೊಮ್ಮುತ್ತಿದೆ.

ಇದೀಗ ಮಳೆಯಿಂದ ವಾಹನಗಳ ಭಾರಕ್ಕೆ ಗುಂಡಿಗಳು ಬಿದ್ದಿದ್ದು, ಮಳೆ ನೀರು ರಸ್ತೆಯಲ್ಲಿಯೇ ನಿಂತಿದ್ದು, ಭಾರಿ ಗಾತ್ರದ ವಾಹನಗಳು ಬಂದಾಗ ಮನೆ, ಬೈಕ್ ಸವಾರರು ಮತ್ತು ಪಾದಚಾರಿಗಳಿಗೆ ಸಿಡಿಯುತ್ತಿದೆ.