Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಕೆಬಿಎಲ್ ಡೆಪಾಸಿಟ್ ಓನ್ಲಿ ಕಾರ್ಡ್ ಬಿಡುಗಡೆ

Friday, 15.06.2018, 3:02 AM       No Comments

ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಡಿಜಿಟಲ್ ಉಪಕ್ರಮದ ಭಾಗವಾಗಿ ‘ಕೆಬಿಎಲ್-ಡೆಪಾಸಿಟ್ ಓನ್ಲಿ ಕಾರ್ಡ್’ ಬಿಡುಗಡೆಗೊಳಿಸಿದೆ. ಇದರ ಮೂಲಕ ಬ್ಯಾಂಕ್​ನ ಇ-ಲಾಬಿಗಳಲ್ಲಿ ಕಿರಿಕಿರಿಯಿಲ್ಲದೆ ಹಣ ಠೇವಣಿ ಪಾವತಿ ಮಾಡಬಹುದು.

ಬ್ಯಾಂಕ್​ನ ಚಾಲ್ತಿ ಖಾತೆ/ ಓವರ್​ಡ್ರಾಫ್ಟ್ ಗ್ರಾಹಕರಿಗೆ ವಿಶೇಷವಾಗಿ ಈ ಕಾರ್ಡ್ ಪರಿಚಯಿಸಲಾಗಿದೆ. ಈ ಕಾರ್ಡ್​ನಿಂದ ಅಧಿಕ ಮಿತಿಯ ನಗದು ಠೇವಣಿಯನ್ನು ಬ್ಯಾಂಕ್​ನ ಬಂಚ್ ನೋಟ್ ಆಕ್ಸೆಪ್ಟರ್/ ಕ್ಯಾಷ್ ರಿಸೈಕ್ಲರ್ ಕಿಯಾಸ್ಕ್​ಗಳಲ್ಲಿ ಮಾಡಬಹುದು. ಎಲ್ಲ ಬ್ಯಾಂಕ್ ಶಾಖೆಗಳಲ್ಲೂ ತ್ವರಿತವಾಗಿ ಕಾರ್ಡ್ ನೀಡಲಾಗುವುದು. ಇದು ಕೇವಲ ನಗದು ಠೇವಣಿಗೆ ಮಾತ್ರ. ನಗದು ಪಡೆಯಲು ಅಥವಾ ಇತರ ವಹಿವಾಟಿಗೆ ಬಳಸಲಾಗದು. ಇದರ ಪ್ರತಿದಿನದ ನಗದು ಠೇವಣಿ ಮಿತಿ 10 ಲಕ್ಷ ರೂ. ಆಗಿರುತ್ತದೆ. ಒಂದು ಖಾತೆಗೆ ಹಲವು ಕಾರ್ಡ್​ಗಳನ್ನು ನೀಡಲಾಗುವುದು ಅಥವಾ ಹಲವು ಖಾತೆಗಳಿಗೆ ಒಂದೇ ಕಾರ್ಡ್ ಲಿಂಕ್ ಮಾಡಬಹುದು.

ಎಲ್ಲ ಗ್ರಾಹಕರು ‘ಠೇವಣಿ ಮಾತ್ರ’ ಕಾರ್ಡ್​ಗಳನ್ನು ದೇಶದ ವಿವಿಧೆಡೆ ಇರುವ ಬ್ಯಾಂಕಿನ 175ಕ್ಕೂ ಹೆಚ್ಚು ಬಂಚ್ ನೋಟ್ ಆಕ್ಸೆಪ್ಟರ್/ಕ್ಯಾಷ್ ರಿಸೈಕ್ಲರ್ ಕೇಂದ್ರಗಳಲ್ಲಿ ಬಳಸಬಹುದು. ಕಾಪೋರೇಟ್ ಗ್ರಾಹಕರು, ವ್ಯಾಪಾರಿಗಳಿಗೆ ಇದು ಹೆಚ್ಚಿನ ಉಪ ಯೋಗವಾಗಲಿದೆ. ಸದ್ಯೋಭವಿಷ್ಯದಲ್ಲಿ ಈ ಕಾರ್ಡ್ ಬಳಸಿ ಇತರ ಬ್ಯಾಂಕ್​ಗಳ ಬಿಎನ್​ಎ/ ಕ್ಯಾಷ್ ರಿಸೈಕ್ಲರ್ ಕೇಂದ್ರಗಳಲ್ಲೂ ಹಣ ಠೇವಣಿ ಮಾಡುವಂತೆ ಅನುಕೂಲ ಕಲ್ಪಿಸಲಾಗುವುದು ಎಂದು ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

Back To Top