ಕೆಜಿಎಫ್​ನಲ್ಲಿ ತಾಯಿ-ಮಗನ ಸೆಂಟಿಮೆಂಟ್

ಬೆಂಗಳೂರು: ನಟ ಯಶ್ ಅಭಿನಯದ ‘ಕೆಜಿಎಫ್’ಚಿತ್ರ ಬಿಡುಗಡೆಗೆ ಸಕಲ ರೀತಿಯಲ್ಲಿ ಸಜ್ಜುಗೊಳ್ಳುತ್ತಿದೆ. ಆದರೆ, ಇದುವರೆಗೂ ಸಿನಿಮಾದಲ್ಲಿ ಯಾವ ಬಗೆಯ ವಿಷಯವನ್ನು ಹೈಲೈಟ್ ಮಾಡಲಾಗಿದೆ ಎಂಬುದನ್ನು ಚಿತ್ರತಂಡ ಸ್ಪಷ್ಟವಾಗಿ ಹೇಳಿರಲಿಲ್ಲ. ಇದೀಗ ನಿರ್ದೇಶಕ ಪ್ರಶಾಂತ್ ನೀಲ್, ‘ಕೆಜಿಎಫ್’ನಲ್ಲಿನ ಹೊಸ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಭರ್ಜರಿ ಆಕ್ಷನ್ ಇರಲಿದೆ ಎಂಬುದು ಈಗಾಗಲೇ ಟೀಸರ್ ಹಾಗೂ ಮೇಕಿಂಗ್ ನೋಡಿದವರಿಗೆ ತಿಳಿದಿತ್ತು. ಆದರೆ, ಇದರಲ್ಲಿ ಅಮ್ಮ-ಮಗನ ಸೆಂಟಿಮೆಂಟ್ ಕೂಡ ಇದೆ ಎಂಬುದನ್ನು ಪ್ರಶಾಂತ್ ಹೇಳಿಕೊಂಡಿದ್ದಾರೆ. ‘ಈ ಸಿನಿಮಾದಲ್ಲಿ ತಾಯಿ ಸೆಂಟಿಮೆಂಟ್ ಇದೆ.

ಯಶ್​ಗೆ ತಾಯಿಯಾಗಿ ಹೊಸ ಕಲಾವಿದರೊಬ್ಬರು ನಟಿಸಿದ್ದಾರೆ. ಅವರನ್ನು ಟ್ರೇಲರ್​ನಲ್ಲಿ ತೋರಿಸಲಿದ್ದೇವೆ. ಅಲ್ಲದೆ, ಈ ಸಿನಿಮಾದಲ್ಲಿ ಸಾಕಷ್ಟು ಹೊಸ ಕಲಾವಿದರು ಇದ್ದಾರೆ. ಜತೆಗೆ ಸಾವಿರಾರು ಜೂನಿಯರ್ ಆರ್ಟಿಸ್ಟ್​ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಪ್ರಶಾಂತ್. ವಿಜಯ್ ಕಿರಗಂದೂರು ನಿರ್ವಣದಲ್ಲಿ ಮೂಡಿಬಂದಿರುವ ಈ ಸಿನಿಮಾ ಐದು ಭಾಷೆಗಳಲ್ಲಿ ತೆರೆಕಾಣಲಿದ್ದು, ಜಗತ್ತಿನಾದ್ಯಂತ 2000ಕ್ಕೂ ಅಧಿಕ ಪರದೆಗಳ ಮೇಲೆ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆಯಂತೆ. ಪೋಷಕ ಪಾತ್ರಗಳಲ್ಲಿ ಅಚ್ಯುತ್​ಕುಮಾರ್, ವಸಿಷ್ಟ ಸಿಂಹ, ಬಿ. ಸುರೇಶ, ಅಶ್ವತ್ಥ್ ನೀನಾಸಂ ಮುಂತಾದವರು ನಟಿಸಿದ್ದಾರೆ. ಯಶ್​ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಬಣ್ಣ ಹಚ್ಚಿದ್ದಾರೆ .

Leave a Reply

Your email address will not be published. Required fields are marked *