ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರವು ವಿಶ್ವ ತಾಯಿಂದಿರ ದಿನಾಚರಣೆ ಅಂಗವಾಗಿ ಇದೇ ಮೇ.15ರಂದು ಬೆಳಗ್ಗೆ 8.30ರಿಂದ ಸಂಜೆ 4.30ರವರೆಗೆ ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗಾಗಿ 23ನೇ ವಾರ್ಷಿಕ ಉಚಿತ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ. ಔರಂಗಾಬಾದನ ಸಾರ್ದಾ ಡಯಾಬಿಟಿಸ್ ಕೇಂದ್ರ ಹಾಗೂ ಸೆಲ್ಪ್ಕೇರ್‌ನ ಡಾ.ಅರ್ಚನಾ ಸರ‍್ದಾ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ.ಅಂತರಾಷ್ಟ್ರೀಯ ಡಯಾಬಿಟಿಸ್ ಫೆಡರೇಶನ ಅವರ ಮಾರ್ಗಸೂಚಿಗಳ ಪ್ರಕಾರ ರಕ್ತ, ಮಸ್ಕಲರ ಸ್ಕೆಲ್‌ಟಲ್ ತಪಾಸಣೆ, ಆಟ, ಚಿತ್ರಕಲೆ, ಪೇಂಟಿಂಗ್ ಸ್ಫರ್ಧೆ ಹಾಗೂ ಅನೇಕ ಪ್ರೇರಣಾದಾಯಕವಾದ ಕಾರ್ಯಚಟುವಟಿಕೆಗಳಿಂದ ಸ್ವತಃ ಮಧುಮೇಹ ಮಕ್ಕಳ ಕಾಳಜಿ ತೆಗೆದುಕೊಳ್ಳುವ ಕುರಿತು ಮಾಹಿತಿ ನೀಡಲಾಗುತ್ತಿದೆ. ಶಿಬಿರದಲ್ಲ್ಲಿಅತ್ಯುತ್ತಮ ಪ್ರದರ್ಶನ ನೀಡಿದ ಬಾಲಕಿ ಮತ್ತು ಬಾಲಕನಿಗೆ ಹಾಗೂ ಓರ್ವ ತಾಯಿಗೆ ಪದಕ ನೀಡಿ ಗೌರವಿಸಲಾಗುತ್ತದೆ. ಮಧುಮೇಹ ಕೇಂದ್ರವು ಕಳೆದ 22 ವರ್ಷಗಳಿಂದ ಉಚಿತ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಕ್ಕಳಿಗೆ ಮಧುಮೇಹದ ಕುರಿತು ಶಿಕ್ಷಣ, ಆರೋಗ್ಯಯುತ ಜೀವನ ನಡೆಸಲು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕಾಯಕವನ್ನು ನಮ್ಮ ಕೆಎಲ್‌ಇ ಆಸ್ಪತ್ರೆ ಮಾಡುತ್ತಿದೆ.
ಮಧುಮೇಹ ಟೈಪ್ -1 ರಿಂದ ಬಳಲುತ್ತಿರುವ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಇನ್ಸುಲಿನ್, ಗ್ಲುಕೊಮೀಟರ, ವಿವಿಧ ವೈದ್ಯಕೀಯ ಸಲಕರಣೆ, ಶೈಕ್ಷಣಿಕ ಸ್ಕಾಲರಶಿಪ್ ಸೇರಿದಂತೆ ಮಧುಮೇಹಕ್ಕೆ ಸಂಬಂಧಿಸಿದ ಇನ್ನಿತರ ಸಾಧನಗಳನ್ನು ನೀಡಲಾಗುತ್ತದೆ. ಹಿರಿಯ ಮಧುಮೇಹ ತಜ್ಞ ವೈದ್ಯ ಡಾ.ಎಂ.ವಿ ಜಾಲಿ ಅವರ ಮುಂದಾಳತ್ವದಲ್ಲಿ ನಡೆಯುವ ಶಿಬಿರವನ್ನು ಡಾ. ಸುಜಾತಾ ಜಾಲಿ ಅವರು ನೆರವೇರಿಸಲಿದ್ದಾರೆ.