ಮಾಂಜರಿ: ಮುಂಬರುವ ದಿನಮಾನಗಳಲ್ಲಿ ಕೆಎಲ್ಇ ಸಂಸ್ಥೆಯಿಂದ ರಾಜ್ಯದ ಮೂಲೆಮೂಲೆಯಲ್ಲಿ 50 ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯ ಡಾ. ಪ್ರಭಾಕರ ಕೋರೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಕೆಎಲ್ಇ ಸಂಸ್ಥೆ ಹಾಗೂ ಹುಬ್ಬಳ್ಳಿಯ ದೇಶಪಾಂಡೆ ಸೋಶಿಯಲ್ ಫೌಂಡೇಷನ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ 2023 ಮತ್ತು 24ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀೆಯಲ್ಲಿ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ಮುನ್ನುಗ್ಗಬೇಕಾದರೆ ಇಂಗ್ಲಿಷ್ ಭಾಷಾ ಕೌಶಲ ಮತ್ತು ಆತ್ಮಧೈರ್ಯ ಬೇಕು. ಆದರೆ ಅದಕ್ಕಿಂತ ಮೊದಲು ಮಾತೃಭಾಷೆಯಲ್ಲಿ ಕಲಿಯಬೇಕು ಎಂದರು.
ಗ್ರಾಮೀಣ ವಿದ್ಯಾರ್ಥಿಗಳು ಗುಣಮಟ್ಟದ ಶಿಣಕ್ಕಾಗಿ ಹಗಲು&ರಾತ್ರಿ ಶ್ರಮಿಸುತ್ತಿದ್ದು. ಅವರಿಗೆ ಮಾರ್ಗದರ್ಶನ ನೀಡಲು ಕೆಎಲ್ಇ ಮತ್ತು ಹುಬ್ಬಳ್ಳಿಯ ದೇಶಪಾಂಡೆ ಸೋಶಿಯಲ್ ಫೌಂಡೇಷನ್ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸದುಪಯೋಗ ಪಡೆಯಬೇಕು ಎಂದರು.
ಹುಬ್ಬಳ್ಳಿಯ ದೇಶಪಾಂಡೆ ಸೋಶಿಯಲ್ ಫೌಂಡೇಷನ್ ಸಿಇಒ ಪಿ.ಎನ್. ನಾಯಕ, ವಿಜಯ ಪುರೋಹಿತ, ಡಿಡಿಪಿಐ ಮೋಹನಕುಮಾರ ಹಂಚಾಟೆ, ಪ್ರಾಚಾಯೆರ್ ಜ್ಯೋತಿ ತಮ್ಮಗೌಡ ಮಾತನಾಡಿದರು.
ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯ ಮಲ್ಲಿಕಾರ್ಜುನ ಕೋರೆ, ಗ್ರಾಪಂ ಅಧ್ಯ ಅಜಿತ್ ಉಮಾರಾಣಿ, ಸದಸ್ಯರಾದ ಸುರೇಶ ಪಾಟೀಲ, ವಿವೇಕ ಕಮತೆ, ತುಕರಾಮ ಪಾಟೀಲ, ಡಾ. ಆರ್.ಡಿ.ಗಿಜರೆ, ಬಸವರಾಜ ಕೋರೆ, ಅಣ್ಣಾಸಾಹೇಬ ಜಕಾತಿ, ಕುಮಾರ ಕೋರೆ, ವಿವೇಕ ನಷ್ಟ, ಎಂ.ಎನ್. ಮೋಜುಕರ, ಬಿ.ಎಸ್. ಅಂಬಿ, ವಿದ್ಯಾರ್ಥಿಗಳು, ಪಾಲಕರು ಇದ್ದರು. ದೇಶಪಾಂಡೆ ಸೋಶಿಯಲ್ ಫೌಂಡೇಷನ್ ಅಧಿಕಾರಿ ಎಂ.ಎಚ್. ಹರೀಶ ಸ್ವಾಗತಿಸಿದರು. ಅತಾ ಚಿಂಚನೆ ವಂದಿಸಿದರು.