ಕೆಂಭಾವಿ: ಹಿAಡಿ ಕಣ್ಣಾಗ ಚೆಲ್ಲಾಡಿ ನಂತಾನ, ಅಂದ್ರ ಏನಾಯ್ತು ನಾಡಿಗಿ ಒಂದು ಸರು ಮಳಿ, ಸಿಗುವವನಿಗೆ ಸಾಕಾಗುವಷ್ಟು ಸಿಕ್ಕಿತು. ಸಿಗಲಾರದವನಿಗಿ ಏನೂ ಇಲ್ಲ. ಕರ್ಮ ಹೆಚ್ಚಾಗಿ ಇದಿಮಾಯಿ ಸುತ್ತ ಹರಿಯುತ್ತಿದೆ. ಅವರವರ ಕರ್ಮ ಅವರ ಬೆನ್ನು ಹತ್ತಿದೆ. ಧರ್ಮಕ್ಕ ಧರ್ಮದ ಜೋಳಿಗಿ ಬಿತ್ತು ಕರ್ಮಕ್ಕ ಕರ್ಮದ ಜೋಳಿಗಿ ಬಿತ್ತು ಎಂಬುದು ಮಲ್ಲಯ್ಯನ ಬಂಡಿ ಉತ್ಸವ ನಿಮಿತ್ತ ಸೀಬಾರ ಮಲ್ಲಯ್ಯನ ದೇವಸ್ಥಾನದಲ್ಲಿ ಭಾನುವಾರ ಬಸವರಾಜ ಪೂಜಾರಿ ಕಾರಣಿಕರ ನುಡಿದರು.
ಪ್ರತಿ ವರ್ಷ ನಡೆಯುವ ಈ ಕಾರಣಿಕ ನುಡಿಗೆ ಪಟ್ಟಣ ಸೇರಿ ಜಿಲ್ಲೆಯ ಹಲವು ಗ್ರಾಮಗಳಿಂದ ಭಕ್ತರು ಆಗಮಿಸಿ ಕಾರಣಿಕ ನುಡಿಗಳನ್ನು ಕೇಳುವುದು ವಾಡಿಕೆ. ಮುಖ್ಯವಾಗಿ ರೈತರಿಗೆ ಸಂಬAಧಿಸಿದ ಮಳೆ ಬೆಳೆ, ಬೆಳೆದ ಬೆಳೆಗಳ ಲಾಭ ನಷ್ಟ, ಸೇರಿದಂತೆ ವ್ಯಾಪಾರ, ರಾಜಕೀಯ, ಇಂದಿನ ವಿದ್ಯಮಾನ, ಯುವ ಪೀಳಿಗೆ ಕುರಿತು ಕಾರಣಿಕ ನುಡಿಗಳನ್ನು ನುಡಿಯುವುದು ಸಂಪ್ರದಾಯ.
ಇದಕ್ಕೂ ಮೊದಲು ದೇವಸ್ಥಾನದಲ್ಲಿ ಗಂಗಾ ಸ್ಥಳ, ಅಭಿಷೇಕ ಸೇರಿದಂತೆ ಹಲವು ಪೂಜೆಗಳು ನಡೆದವು. ಪಿಎಸ್‌ಐ ಅಮೋಜ ಕಾಂಬಳೆ, ಪುರಸಭೆ ಸದಸ್ಯ ಶರಣಪ್ಪ ಯಾಳಗಿ, ಬಾಪುಗೌಡ ಪೊಲೀಸ್ ಪಾಟೀಲ್, ದೇವೇಂದ್ರಪ್ಪ ಯಾಳಗಿ, ತಿಪ್ಪಣ್ಣ ಯಾಳಗಿ, ಶ್ರೀಶೈಲ ಆಲ್ದಾಳ, ಬಾಬು ದೇವರಮನಿ, ರೇವಣಸಿದ್ದಪ್ಪ ಯಾಳಗಿ ಇತರರಿದ್ದರು.