ಕೆಂಪೇಗೌಡ ಬಡಾವಣೆಗೆ ಮೂಲಸೌಕರ್ಯ ಭಾಗ್ಯ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಂದಿನ ವಾರ ಟೆಂಡರ್ ಪ್ರಕ್ರಿಯೆ ಆರಂಭಿಸಲು ಬಿಡಿಎ ಮಂಡಳಿ ನಿರ್ಧರಿಸಿದೆ. ಶುಕ್ರವಾರ ಬಿಡಿಎ ಅಧ್ಯಕ್ಷ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಡಾವಣೆ 2ನೇ ಹಂತದ ಸೈಟ್ ಹಂಚಿಕೆಗೆ ಅಧಿಸೂಚನೆ ಹೊರಡಿಸುವ ಮೊದಲೇ ಮೂಲಸೌಕರ್ಯ ಕಲ್ಪಿಸಲಾಗುವುದು. ಅಂಗವಿಕಲ ವರ್ಗದಡಿ ಹಂಚಿಕೆಯಾಗುವ ಸೈಟ್​ಗಳಿಗೆ ಶೇ.5 ಅಥವಾ 1 ಲಕ್ಷ ರೂ. ರಿಯಾಯಿತಿ ನೀಡಲು ನಿಯಮಗಳಿಗೆ ತಿದ್ದುಪಡಿ ತರಲು ಒಪ್ಪಿಗೆ ನೀಡಲಾಗಿದೆ. ಬೆಳ್ಳಂದೂರು, ವರ್ತರು ಕೆರೆ ಸ್ವಚ್ಛತೆಗೆ 8 ಕೋಟಿ ರೂ. ಅವಶ್ಯವಾಗಿದೆ. ಸಹಾಯಧನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಗಿದೆ.

 

Leave a Reply

Your email address will not be published. Required fields are marked *