ಕೃಷಿ ಹೊಂಡಕ್ಕೆ ಬಿದ್ದು ಮಹಿಳೆ ಸಾವು

ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಮಾನಸಿಕ ಅಸ್ವಸ್ಥೆಯೋರ್ವಳು ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಹಿರೇಕೋಡಿ ಗ್ರಾಮದ ನಿವಾಸಿ ಶಾಹಿರಾ ಅಬ್ದುಲ್‌ಅಜೀಜ್ ಪಟೇಲ್ (50) ಮೃತ ಮಹಿಳೆ.

ಮಾನಸಿಕ ಅಸ್ವಸ್ಥಳಾಗಿದ್ದ ಮಹಿಳೆ ಶುಕ್ರವಾರ ಮನೆಯಿಂದ ಹೋದವಳು, ಶನಿವಾರ ಬೆಳಗ್ಗೆ ಗ್ರಾಮದ ಅನಿಲ ಸೈಬನ್ನವರ ಎಂಬುವವರ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಾಲು ಜಾರಿ ಅಥವಾ ಜೋಲಿ ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದು, ಸಾವಿನ ಕುರಿತು ಸಂಶಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *