More

  ಕೃಷಿ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

  ಸಿದ್ದಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತವಿರೋಧಿ ನೀತಿ ಖಂಡಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥ ಗೌಡ ಅವರ ನೇತೃತ್ವದಲ್ಲಿ ಪಟ್ಟಣದ ತಿಮ್ಮಪ್ಪ ನಾಯಕ ವೃತ್ತದಲ್ಲಿ ಬುಧವಾರ ವಾಹನ ಸಂಚಾರ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

  ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥ ಗೌಡ, ಅರಣ್ಯ ಭೂಮಿ ಸಾಗುವಳಿ ಹಕ್ಕು, ಭೂ ಸ್ವಾಧೀನ, ಎಪಿಎಂಸಿ, ವಿದ್ಯುತ್, ಕಾರ್ವಿುಕ ಕಾಯ್ದೆ ಹೀಗೆ ಅನೇಕ ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಿ ರೈತರ ಅಸ್ತಿತ್ವ ನಾಶಗೊಳಿಸಲು ಮುಂದಾಗಿದೆ. ದುಡಿಯುವ ವರ್ಗವನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ದೂರಿದರು.

  ಯಾವುದೇ ಕಾಯ್ದೆಗಳ ಬಗ್ಗೆ ಚರ್ಚೆ, ಪರಾಮರ್ಶೆ ನಡೆಸದೇ ಪ್ರಧಾನಮಂತ್ರಿ ಅವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಕಾರ್ಪೇರೇಟ್ ವಲಯದವರಿಗೆ ಅನುಕೂಲ ಮಾಡಿಕೊಟ್ಟು ರೈತರನ್ನು ಕಡೆಗಣಿಸಿದ್ದಾರೆ. ಅಲ್ಲದೆ, ದೆಹಲಿಯಲ್ಲಿ ರೈತರ ಹೋರಾಟ ಹತ್ತಿಕ್ಕಲು ಮುಂದಾಗುತ್ತಿರುವುದು ಖಂಡನೀಯ ಎಂದರು.

  ರೈತ ಸಂಘದ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಮಾತನಾಡಿ, ರೈತರು ಬೆಳೆದ ಬೆಳೆಯನ್ನು ಊಟ ಮಾಡುತ್ತಿರುವವರು ಅನ್ನದಾತರಿಗೇ ಮೋಸ ಮಾಡುತ್ತಿದ್ದಾರೆ. ಡಿ. 7ರಂದು ಬೆಂಗಳೂರಿನಲ್ಲಿ ರೈತರಿಂದ ಬಾರಕೋಲು ಚಳವಳಿ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.ತಾಲೂಕು ರೈತ ಸಂಘದ ಅಧ್ಯಕ್ಷ ವೀರಭದ್ರ ನಾಯ್ಕ ಮನೆಮನೆ, ಕಾರ್ಯಾಧ್ಯಕ್ಷ ಪಿ.ವಿ. ಹೆಗಡೆ ಹೊಸಗದ್ದೆ ಮಾತನಾಡಿದರು. ತಾಲೂಕು ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸುಧಾ ಎಂ. ಹೆಗಡೆ ರ್ಕಸವಲ್, ತಿಮ್ಮಣ್ಣ ನಾಯ್ಕ, ವಿನಾಯಕ ನಾಯ್ಕ, ಐ.ಸಿ.ನಾಯ್ಕ ಹುಲಿಮನೆ, ಎಂ.ಸಿ. ನಾಯ್ಕ, ಕೆರಿಯಾ, ಸವಿತಾ, ರಾಧಾ, ಆಕಾಶ ಕೊಂಡ್ಲಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts