ಚಿತ್ರದುರ್ಗ: ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಆಳವಡಿಕೆಯೊಂದಿಗೆ, ಆಧಾರ್ ನೋಂದಾಯಿಸುವುದನ್ನು ವಿರೋಧಿಸಿ ರೈತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ದರು.
ಪ್ರತಿ ಪಂಪ್‌ಸೆಟ್‌ಗೆ ಮೀಟರ್ ಅಳವಡಿಸಿ,ಆಧಾರ್ ನೋಂದಣಿ ಮಾಡಿಸುವಂತೆ ರಾಜ್ಯ ಸರ್ಕಾರ ಕ್ಕೆ ನಿರ್ದೇಶನ ನೀಡಿರುವ ಕ ರ್ನಾಟಕ ವಿದ್ಯುತ್‌ಚ್ಛಕ್ತಿ ಬೆಲೆ ನಿಯಂತ್ರಣ ಆಯೋಗ(ಕೆಇಆರ್‌ಸಿ)ದ ನಡೆಯನ್ನು ಖಂಡಿಸಿದ ಪ್ರತಿಭಟನಾಕಾರರು,ಈ ಕೆಲಸವನ್ನು ಕೂಡಲೇ ಕೈಬಿಡದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕೆಇಆರ್‌ಸಿ ಗ್ರಾಹಕರ ಹಿತ ರಕ್ಷಣೆ ಮಾಡ ಬೇಕಾಗಿದೆ ಹೊರತು ನೀತಿ,ನಿಯಮಗಳನ್ನು ಸರ್ಕಾರಕ್ಕೆ ನಿರ್ದೇಶಿಸುವುದು ಸರಿಯಲ್ಲ. ರೈತ ರು ದೇಶದ ಆಹಾರ ಭದ್ರತೆ ಕಾಪಾಡುತ್ತಿದ್ದಾರೆ. ಈಚಿನ ದಿನಗಳಲ್ಲಿ ಮಲೆನಾಡು ಹಾಗೂ ಬಯಲುಸೀಮೆಯಲ್ಲೂ ಅಡಕೆ ಬೆಳೆ ಕೂಡ ಮುಖ್ಯವಾಗುತ್ತಿದೆ.
ಅದಕ್ಕೆ ಅನುಗುಣವಾಗಿ ರಾಜ್ಯಸರ್ಕಾರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿದ್ದು, ಆಯೋಗದ ನಿರ್ದೇಶನ ರೈತರ ಕತ್ತು ಹಿಚುಕಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯರೈತ ಸಂಘದ ಪ್ರಧಾನ ಕಾರ‌್ಯದರ್ಶಿ ಟಿ. ನುಲೇನೂರು ಶಂಕರಪ್ಪ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು,ಧನಂಜಯ,ಎಂ.ಬಿ.ತಿಪ್ಪೇಸ್ವಾಮಿ,ರವಿ ಕೋಗುಂಡೆ, ಡಿ.ಮಲ್ಲಿಕಾರ್ಜನ್,ಕೆ.ಎಂ.ಕಾಂತರಾಜು,ಶಿವ ಕುಮಾರ್,ಚಿಕ್ಕಪ್ಪನಹಳ್ಳಿರುದ್ರಸ್ವಾಮಿ,ಹೊರಕೇರಪ್ಪ,ಕೆ.ಪಿ.ಭೂತಯ್ಯ, ಚೇತನ್,ರಹಿಂಸಾಬ್,ಗೌಸ್‌ಪೀರ್,ಸುಧಾ,ಶಿವಲಿಂಗಮ್ಮ,ಮಹಾಂತೇಶ್,ಎಸ್.ತಿಪ್ಪೇಸ್ವಾಮಿ,ರೇವಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.