ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಳ್ಳಿ

ನಂದಗುಡಿ: ಸರ್ಕಾರ ರೈತರ ಬದುಕು ಹಸನು ಮಾಡಲೆಂದು ಹಲವು ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು, ರೈತರು ಕೈಗೊಳ್ಳುವ ಉಪ ಕಸುಬುಗಳಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ತೋಟಗಾರಿಕೆ ನೋಡಲ್ ಅಧಿಕಾರಿ ಆರ್. ರಾಮಮೂರ್ತಿ ಹೇಳಿದರು.

ಹೋಬಳಿಯ ಕೊಂಡ್ರಹಳ್ಳಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಉಚಿತ ಜೇನುಪೆಟ್ಟಿಗೆ ವಿತರಿಸಿ ಮಾತನಾಡಿದರು. ಜೇನು ಸಾಕಣೆಯಿಂದ ರೈತರು ಹೆಚ್ಚಿನ ಲಾಭ ಗಳಿಸಲು ಸಾಧ್ಯ. ಅಲ್ಲದೆ ಜೇನು ಹುಳುಗಳಿರುವ ಪರಿಸರದಲ್ಲಿ ಪರಾಗ ಸ್ಪರ್ಶವಾಗುವುದರಿಂದ ಸಾವಯವ ಬೆಳೆ ಗುಣಮಟ್ಟ ಚೆನ್ನಾಗಿರುತ್ತದೆ ಎಂದರು.

ರೈತರಿಗೆ ಜೇನು ಸಾಕಣೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು.

ಗ್ರಾಪಂ ಸದಸ್ಯೆ ಲಕ್ಷ್ಮೀದೇವಿ ವಿ. ನಾರಾಯಣಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷೆ ಮಂಜುಳಾ ರವೀಂದ್ರ, ಎಸ್​ಸಿ ಘಟಕ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಮುನಿಕೃಷ್ಣಪ್ಪ, ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ವೆಂಕಟೇಶಪ್ಪ, ಮುಖಂಡ ಬಚ್ಚಣ್ಣ, ತೋಟಗಾರಿಕೆ ಇಲಾಖೆ ಅಧಿಕಾರಿ ಬಾಲಕೃಷ್ಣ ಹಾಗೂ ಗ್ರಾಮಸ್ಥರು ಇದ್ದರು.