ಕೃಷಿಯನ್ನು ಉದ್ಯೋಗವಾಗಿ ಸ್ವೀಕರಿಸಿ

ಸಿದ್ದಾಪುರ: ಕೃಷಿಯನ್ನು ಒಂದು ವೃತ್ತಿ ಎಂದು ಪರಿಗಣಿಸುವವರೆಗೆ ನಿರುದ್ಯೋಗ ಸಮಸ್ಯೆ ನಿವಾರಿಸಲು ಸಾಧ್ಯವಿಲ್ಲ. ಕಲಿತವರಿಗೆಲ್ಲ ಸರ್ಕಾರಿ ಉದ್ಯೋಗ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಯುವ ಸಮೂಹ ಕೃಷಿಯನ್ನು ಉದ್ಯೋಗವಾಗಿ ಸ್ವೀಕರಿಸಬೇಕು ಎಂದು ಜಿಪಂ ಸದಸ್ಯ ಎಂ.ಜಿ. ಹೆಗಡೆ ಗಜ್ಜೆ ಹೇಳಿದರು.

ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಕೃಷಿ, ತೋಟಗಾರಿಕೆ ಹಾಗೂ ಪಶು ಸಂಗೋಪನೆ ಇಲಾಖೆಗಳ ಆಶ್ರಯದಲ್ಲಿ ಆಯೋಜಿಸಿರುವ ಸಮಗ್ರ ಕೃಷಿ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಕೃಷಿಯೇತರ ಚಟುವಟಿಕೆಗೆ ಸಿಗುವ ಗೌರವ ಕೃಷಿ ಮಾಡುವವರಿಗೆ ಸಿಗುವುದಿಲ್ಲ. ಆದ್ದರಿಂದ ಯುವ ಪೀಳಿಗೆ ಕೃಷಿಯತ್ತ ಆಸಕ್ತಿ ತೋರಿಸುತ್ತಿಲ್ಲ ಎಂದರು.

ಜಿಪಂ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ, ಕೃಷಿ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿದರು. ತಾಪಂ ಅಧ್ಯಕ್ಷ ಸುಧಿರ್ ಬಿ. ಗೌಡರ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಸುಮಂಗಲಾ ನಾಯ್ಕ, ತಾಪಂ ಸದಸ್ಯ ವಿವೇಕ ಭಟ್ಟ, ತಹಸೀಲ್ದಾರ್ ಗೀತಾ ಸಿ.ಜಿ., ತೋಟಗಾರಿಕೆ ಇಲಾಖೆ ಅಧಿಕಾರಿ ಮಹಾಬಲೇಶ್ವರ ಬಿ.ಎಸ್., ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಂದಕುಮಾರ ಪೈ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೇವರಾಜ ಆರ್ ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಪ್ರಶಾಂತ ನಿರ್ವಹಿಸಿದರು. ಬಳಿಕ ಸಮಗ್ರ ಕೃಷಿ ಅಭಿಯಾನ ತಾಲೂಕಿನ ಕಾನಗೋಡ, ಕೋಲಸಿರ್ಸಿ ಹಾಗೂ ಬಿದ್ರಕಾನ ಗ್ರಾಪಂ ಆವರಣದಲ್ಲಿ ನಡೆಯಿತು.

ಅಭಿಯಾನ ಇಂದು
ಜೂ. 20ರಂದು ಬೆಳಗ್ಗೆ 10ರಿಂದ ಶಿರಳಗಿ ಗ್ರಾಪಂ ಆವರಣ, ಮಧ್ಯಾಹ್ನ 12ರಿಂದ ಕವಂಚೂರು ಗ್ರಾಪಂ, 2.30ರಿಂದ ಮನ್ಮನೆ ಗ್ರಾಪಂ, 4ರಿಂದ ಕೊರ್ಲಕೈ ಗ್ರಾಪಂ ಆವರಣದಲ್ಲಿ ಸಮಗ್ರ ಕೃಷಿ ಅಭಿಯಾನ ನಡೆಯಲಿದೆ.

Leave a Reply

Your email address will not be published. Required fields are marked *