ಕೃತಿಗಳಿಗೆ ಬಹುಮಾನ ನೀಡಲು ಆಹ್ವಾನ

ಶಿವಮೊಗ್ಗ: 2018ನೇ ಸಾಲಿನಲ್ಲಿ ಪ್ರಕಟವಾದ 12 ಪ್ರಕಾರಗಳ ಕನ್ನಡ ಪುಸ್ತಕಗಳಿಗೆ ವಿವಿಧ ಸಾಹಿತಿಗಳ ಹೆಸರಿನಲ್ಲಿ ಬಹುಮಾನ ನೀಡಲು ಕರ್ನಾಟಕ ಸಂಘವು ಲೇಖಕರು ಮತ್ತು ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ.

ಆಸಕ್ತರು ತಮ್ಮ ಕೃತಿಗಳ ಮೂರು ಪ್ರತಿಗಳನ್ನು ಫೆ.28ರೊಳಗೆ ಗೌರವ ಕಾರ್ಯದರ್ಶಿ, ಕರ್ನಾಟಕ ಸಂಘ, ಬಿ.ಎಚ್.ರಸ್ತೆ, ಶಿವಮೊಗ್ಗ-577201 ಇಲ್ಲಿಗೆ ಕಳಿಸಬಹುದು.

ಕಾದಂಬರಿ(ಕುವೆಂಪು ಪ್ರಶಸ್ತಿ), ಅನುವಾದಿತ ಕೃತಿ(ಪ್ರೊ. ಎಸ್.ವಿ.ಪರಮೇಶ್ವರ ಭಟ್ಟ), ಮಹಿಳಾ ಸಾಹಿತ್ಯ(ಎಂ.ಕೆ.ಇಂದಿರಾ), ಮುಸ್ಲಿಂ ಬರಹಗಾರರ ಕೃತಿ(ಪಿ.ಲಂಕೇಶ್), ಕವನ ಸಂಕಲನ(ಡಾ. ಜಿ.ಎಸ್.ಶಿವರುದ್ರಪ್ಪ), ಅಂಕಣ ಬರಹಗಾರರು(ಡಾ. ಹಾ.ಮಾ.ನಾಯಕ), ಸಣ್ಣ ಕಥಾ ಸಂಕಲನ(ಡಾ. ಯು.ಆರ್.ಅನಂತಮೂರ್ತಿ), ನಾಟಕ ಕೃತಿ(ಡಾ. ಕೆ.ವಿ.ಸುಬ್ಬಣ್ಣ), ಪ್ರವಾಸ ಸಾಹಿತ್ಯ(ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ), ವಿಜ್ಞಾನ ಸಾಹಿತ್ಯ(ಹಸೂಡಿ ವೆಂಕಟ ಶಾಸ್ತ್ರಿ), ಮಕ್ಕಳ ಸಾಹಿತ್ಯ(ಡಾ. ನಾ.ಡಿಸೋಜ), ವೈದ್ಯ ಸಾಹಿತ್ಯ(ಡಾ. ಎಚ್.ಡಿ.ಚಂದ್ರಪ್ಪಗೌಡ ಪ್ರಶಸ್ತಿ) ನೀಡಲಾಗುತ್ತದೆ.

ಕರ್ನಾಟಕ ಸಂಘದ ಪುಸ್ತಕ ಬಹುಮಾನವನ್ನು ಹಿಂದೆ ಒಂದು ಬಾರಿ ಪಡೆದವರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಮರುಮುದ್ರಣಗೊಂಡ ಕೃತಿ ಮತ್ತು ಹಸ್ತಪ್ರತಿಗಳಿಗೆ ಅವಕಾಶವಿರುವುದಿಲ್ಲ. ಕರ್ನಾಟಕ ಸಂಘದ ಸದಸ್ಯರನ್ನು ಹೊರತುಪಡಿಸಿ ಇತರ ಲೇಖಕರು ತಮ್ಮ ಕೃತಿಗಳನ್ನು ಕಳಿಸಿಕೊಡಬಹುದು. ಪ್ರಶಸ್ತಿಗೆ ಕಳಿಸಿದ ಪುಸ್ತಕಗಳನ್ನು ಕರ್ನಾಟಕ ಸಂಘದ ಗ್ರಂಥಾಲಯಕ್ಕೆ ತೆಗೆದುಕೊಳ್ಳಲಾಗುತ್ತದೆ.

ಅತ್ಯುತ್ತಮವೆಂದು ಆಯ್ಕೆಯಾದ ಕೃತಿಗಳಿಗೆ ತಲಾ 10 ಸಾವಿರ ಸಾವಿರ ರೂ. ನಗದು ಮತ್ತು ಪ್ರಶಸ್ತಿಪತ್ರ ನೀಡಲಾಗುವುದು. ವಿವರಗಳಿಗೆ ಕರ್ನಾಟಕ ಸಂಘಠದ ಕಚೇರಿ (08182-277406)ಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.