ಕುಷ್ಠ ರೋಗ ಪತ್ತೆಗೆ ಕಾರ್ಯಕ್ರಮ ಆಯೋಜಿಸಿ

1 Min Read
ಕುಷ್ಠ ರೋಗ ಪತ್ತೆಗೆ ಕಾರ್ಯಕ್ರಮ ಆಯೋಜಿಸಿ


ಯಾದಗಿರಿ: ಕುಷ್ಠರೋಗ ಪತ್ತೆಗಾಗಿ ಜಿಲ್ಲಾದ್ಯಂತ ಕಾರ್ಯಕ್ರಮ ಹಮ್ಮಿಕೊಂಡು, ಜನರಲ್ಲಿ ರೋಗದ ಕುರಿತು ಅರಿವು ಮೂಡಿಸುವ ದಿಸೆಯಲ್ಲಿ ಎಲ್ಲ ಅಧಿಕಾರಿಗಳು ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಪಂ ಸಿಇಒ ಗರೀಮಾ ಪನ್ವಾರ್ ಸೂಚಿಸಿದರು.

ಗುರುವಾರ ಇಲ್ಲಿನ ಜಿಪಂ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ರೋಗ ಪತ್ತೆಗಾಗಿ ಕಾರ್ಯಕ್ರಮ ಏರ್ಪಡಿಸಿ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುಬೇಕು. ಜಿಲ್ಲೆಯಲ್ಲಿ ಒಟ್ಟು 232605 ಮನೆಗಳಿದ್ದು, 847 ತಂಡಗಳನ್ನು ರಚಿಸಿಸಲಾಗಿದೆ. ಪ್ರತಿಯೊಂದು ತಂಡದಲ್ಲಿ ಒಬ್ಬ ಆಶಾ ಕಾರ್ಯಕತರ್ೆ ಮತ್ತು ಸ್ವಯಂ ಸೇವಕರು ಇರುತ್ತಾರೆ. ಪ್ರತಿ 5 ತಂಡಕ್ಕೆ ಒಬ್ಬರು ಮೇಲ್ವಿಚಾರಕರಂತೆ ಸೇರಿ ಒಟ್ಟು 169 ಜನ ಇರುತ್ತಾರೆ ಎಂದು ವಿವರಿಸಿದರು.

ಸಾರ್ವಜನಿಕರಲ್ಲಿ ಕುಷ್ಠರೋಗದ ಲಕ್ಷಣಗಳು ಹಾಗೂ ಇದಕ್ಕೆ ಲಭಿಸಿರುವ ಚಿಕಿತ್ಸೆ, ಪರಿಹಾರ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಶಾಲಾ ಮತ್ತು ಹಾಸ್ಟೆಲ್ ವಿಧ್ಯಾಥರ್ಿಗಳಿಗೆ ಚರ್ಮದ ಆರೋಗ್ಯ ತಪಾಸಣೆ ಮಾಡಲು ಕ್ರಮ ವಹಿಸಬೇಕು. ಕಾರ್ಯಕ್ರಮ ಅನುಷ್ಠಾನವಾಗಬೇಕಾದರೆ ಹೆಚ್ಚು ಪ್ರಚಾರ ಕಾರ್ಯಕ್ರಮಗಳಿಗೆ ಗಮನ ನೀಡಬೇಕು. ಕರಪತ್ರ, ಭಿತ್ತಿಪತ್ರ ಮುದ್ರಿಸಿ ವ್ಯಾಧಿಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ಡಿ.27 ರಿಂದ ಜ.11ವರಗೆ ಜಿಲ್ಲಾದ್ಯಂತ ಆಂದೋಲನೆ ನಡೆಯಲಿದೆ ಎಂದು ತಿಳಿಸಿದರು.

See also  ಸೌಲಭ್ಯಗಳ ಸದುಪಯೋಗವಾಗಲಿ
Share This Article