ಕುರಿ ಕಳವಿಗಾಗಿ ಕುರಿಗಾಹಿ ಕೊಲೆ

1 Min Read
ಕುರಿ ಕಳವಿಗಾಗಿ ಕುರಿಗಾಹಿ ಕೊಲೆ

ಮುಳಬಾಗಿಲು: ನಗರದ ಅಂಜನಾದ್ರಿ ಬೆಟ್ಟದ ತಪ್ಪಲಿನ ಜಮೀನಿನಲ್ಲಿ ಕುರಿಶೆಡ್ ಹಾಕಿಕೊಂಡಿದ್ದ ವ್ಯಕ್ತಿಯನ್ನು ಕೊಲೆ ಮಾಡಿ ಕುರಿಗಳನ್ನು ಅಪಹರಿಸಲು ಗುರುವಾರ ದುಷ್ಕರ್ಮಿಗಳು ವಿಲಯತ್ನ ನಡೆಸಿದ್ದಾರೆ.

ಪಳ್ಳಿಗರಪಾಳ್ಯದ ದೊಡ್ಡಮುನಿಸ್ವಾಮಿ (60) ಕೊಲೆಯಾದ ವ್ಯಕ್ತಿ. ಕುರಿಶೆಡ್‌ಗೆ ಗುರುವಾರ ರಾತ್ರಿ 8 ಗಂಟೆ ಸಮಯದಲ್ಲಿ ಆಟೋದಲ್ಲಿ ಬಂದ ಕಳ್ಳರು ದೊಡ್ಡಮುನಿಸ್ವಾಮಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ನಾಲ್ಕು ಕುರಿಗಳನ್ನು ಕದ್ದೊಯ್ಯಲು ಯತ್ನಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ದೊಡ್ಡಮುನಿಸ್ವಾಮಿ ಮಗ ಚಂದ್ರಪ್ಪ ಕಳ್ಳರನ್ನು ಕಂಡು ಕೂಗಿಕೊಂಡಿದ್ದಾರೆ. ಕೂಡಲೇ ಕಳ್ಳರು ಆಟೋ ಬಿಟ್ಟು ಪರಾರಿಯಾಗಿದ್ದಾರೆ. ಚಂದ್ರಪ್ಪ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆಟೋ ಮುಳಬಾಗಿಲಿನ ವ್ಯಕ್ತಿಗಳಿಗೆ ಸೇರಿದ್ದೆಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಕೋಲಾರದಿಂದ ಬೆರಳಚ್ಚು ತಜ್ಞರು, ಶ್ವಾನದಳ ತಜ್ಞರು ಆಗಮಿಸಿ ಸಾಕ್ಷಿ ಸಂಗ್ರಹಿಸಿದ್ದಾರೆ. ಶವವನ್ನು ಮುಳಬಾಗಿಲು ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿ ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

See also  ನಾಲ್ವರು ಸುಲಿಗೆಕೋರರ ಸೆರೆ
Share This Article