ಕುರಿಗಾಯಿ ಮಹಿಳೆ ಮೇಲೆ ಅತ್ಯಾಚಾರ

ರೋಣ: ಕುರಿಗಳನ್ನು ಮೇಯಿಸಲು ಹೋದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಹಲ್ಲೆ ಮಾಡಿದ ವ್ಯಕ್ತಿಯೊಬ್ಬ ಪರಾರಿಯಾದ ಘಟನೆ ತಾಲೂಕಿನ ಸವಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ರತ್ನವ್ವ ಮಲ್ಲಯ್ಯಾ ಕುರವತ್ತಿಮಠ (45) ಅತ್ಯಾಚಾರಕ್ಕೊಳಗಾದವರು. ಸವಡಿ ಗ್ರಾಮದ ಧೋತಿ ಹಳ್ಳದ ಹತ್ತಿರ ಕುರಿಗಳನ್ನು ಮೇಯಿಸುತ್ತಿರುವಾಗ ಅದೇ ಗ್ರಾಮದ ಬಸವರಾಜ ಅಜ್ಜಪ್ಪ ಪರಡ್ಡಿ ಅತ್ಯಾಚಾರ ನಡೆಸಿ ಹಲ್ಲೆ ಮಾಡಿದ್ದಾನೆ. ಈ ಕುರಿತು ರೋಣ ಪೊಲೀಸ್ ಠಾಣೆ ಪಿಎಸ್​ಐ ಎಲ್.ಕೆ. ಜೂಲಕಟ್ಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Leave a Reply

Your email address will not be published. Required fields are marked *