ಕುಮಾರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ

ಹಾನಗಲ್ಲ: ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳ 89ನೇ ಪುಣ್ಯಸ್ಮರಣೋತ್ಸವದ ಮೂರು ದಿನಗಳ ಕಾರ್ಯಕ್ರಮಕ್ಕೆ ಷಟ್​ಸ್ಥಲ ಧ್ವಜಾರೋಹಣ ನೆರವೇರಿಸಿ ಬಾಳೂರ ಅಡವಿಸ್ವಾಮಿ ಮಠದ ಕುಮಾರ ಸ್ವಾಮಿಗಳು ಶುಕ್ರವಾರ ಬೆಳಗ್ಗೆ ಚಾಲನೆ ನೀಡಿದರು.

ಷಟ್​ಸ್ಥಲ ಧ್ವಜವು ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ವಿಚಾರಧಾರೆಯ ಪ್ರತೀಕವಾಗಿದೆ. ಅದರಂತೆ ಬದುಕಿದ ಕುಮಾರ ಶಿವಯೋಗಿಗಳು, ಮಠಗಳಿಗೆ ಮಠಾಧೀಶರನ್ನು ನೀಡುವ ಶಿವಯೋಗ ಮಂದಿರ ಸ್ಥಾಪಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿ ಸಮಾಜವನ್ನು ಒಗ್ಗೂಡಿಸಿದರು. ಅಂಧ-ಅನಾಥರಿಗೆ ಸಂಗೀತದ ಮೂಲಕ ಬದುಕು ರೂಪಿಸಿದರು. ಶಿವಯೋಗಿಗಳು ತಮ್ಮ ಬದುಕಿನ ಕೊನೆಯವರೆಗೂ ಸಮಾಜದ ಏಳಿಗೆಗಾಗಿ ಶ್ರಮಿಸಿದರು ಎಂದರು.

ಹಾನಗಲ್ಲ ವಿರಕ್ತಮಠದ ಪೀಠಾಧ್ಯಕ್ಷ ಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮಿಗಳು ನೇತೃತ್ವ ವಹಿಸಿದ್ದರು.

ಬಿ.ಎಸ್. ಅಕ್ಕಿವಳ್ಳಿ, ಕಲ್ಯಾಣಕುಮಾರ ಶೆಟ್ಟರ್, ಎ.ಎಸ್. ಬಳ್ಳಾರಿ, ಸಿ.ಎಚ್. ಹಿರೇಮಠ, ಬಸಣ್ಣ ಎಲಿ, ಶಿವಯೋಗಿ ಅರಳೇಲಿಮಠ, ರಾಜಶೇಖರ ಸಿಂಧೂರ, ಶಿವಯೋಗಿ ಸವದತ್ತಿ, ದಾನಪ್ಪ ಸಿಂಧೂರ, ಎಸ್.ಎಂ. ಕೋತಂಬ್ರಿ, ಎಂ.ಎಂ. ಕೊಪ್ಪದ, ಬಸನಗೌಡ ಪಾಟೀಲ, ಮಧುಮತಿ ಪೂಜಾರ, ಬಸವರಾಜ ಆಲದಕಟ್ಟಿ, ಪ್ರಕಾಶ ಸಿಂಧೂರ, ವಿಜಯ ಕುಬಸದ, ಮಹೇಶ ಸವದತ್ತಿ, ಗುರುಸಿದ್ದಪ್ಪ ಕೊಂಡೋಜಿ, ಮಹೇಶ ಕಬ್ಬೂರ, ಡಾ.ಎನ್. ಸದಾಶಿವಪ್ಪ, ಶಂಭುಲಿಂಗ ವಿರಕ್ತಮಠ ಇತರರು ಉಪಸ್ಥಿತರಿದ್ದರು. ಶಿಕ್ಷಕಿ ಎಸ್.ವಿನುತಾ ನಿರೂಪಿಸಿದರು.