ಕುಮಾರಸ್ವಾಮಿ ರಾಜೀನಾಮೆ‌ಗೆ ಕೋಟೆ ಎಂ. ಶಿವಣ್ಣ ಆಗ್ರಹ

ಮೈಸೂರು: ಕಾಂಗ್ರೆಸ್ ಕಿರುಕುಳ ಅನುಭವಿಸುತ್ತಾ ಗೊಂದಲದಲ್ಲಿ ಆಡಳಿತ ನಡೆಸುತ್ತಿರುವ ಎಚ್.ಡಿ. ಕುಮಾರಸ್ವಾಮಿ ‌ಅವರು‌ ಸ್ವಾಭಿಮಾನಿಯಾಗಿದ್ದರೆ ರಾಜೀನಾಮೆ ನೀಡಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ. ಶಿವಣ್ಣ ಸವಾಲು ಹಾಕಿದರು.

ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಕಿರುಕುಳ ಅನುಭವಿಸುತ್ತಿದ್ದಾರೆ. ಹೆಜ್ಜೆ ಹೆಜ್ಜೆಗೂ ರಾಜಿನಾಮೆ ನೀಡುತ್ತೇನೆ ಎನ್ನುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಕುಮಾರಸ್ವಾಮಿ ಅವರು ಒಳ್ಳೆ ಆಡಳಿತ ನೀಡುವ ನಿರೀಕ್ಷೆ ಇತ್ತು. ಆದರೆ ಮೈತ್ರಿ ಸರ್ಕಾರದ ಸಿಎಂ ಆಗಿ ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.

ಅಧಿಕಾರಕ್ಕೆ ಬಂದಾಗ ನಾನೊಬ್ಬ ಸಾಂದರ್ಭಿಕ ಶಿಶು. ರಾಹುಲ್ ಗಾಂಧಿ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎಂಬ ಬೇಸರದ ನುಡಿಗಳನ್ನಾಡಿದರು. ಆದರೆ ಇವರ ಅಧಿಕಾರದ ದಾಹದಿಂದ ಕರ್ನಾಟಕ ಬಡವಾಗುತ್ತಿದೆ  ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಹಿಂದೆ ಬಿಜೆಪಿ ಜೊತೆ ಸೇರಿ ಆಧಿಕಾರ ನಡೆಸಿದಾಗ ಉತ್ತಮ ಆಡಳಿತ ನೀಡಿದ್ದ ಕುಮಾರಸ್ವಾಮಿ ಅವರು ಕಾಂಗ್ರೆಸ್ ಬಿಟ್ಟು ಬಂದರೆ ಜನ ಅವರನ್ನು ಸ್ವೀಕರಿಸುತ್ತಾರೆ. ಕಾಂಗ್ರೆಸ್ ಜತೆಗೂಡಿದರೆ ಅಭಿವೃದ್ಧಿ ಕಾರ್ಯ ಅಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕುಮಾರಸ್ವಾಮಿ ರಾಜೀನಾಮೆ ನೀಡಿದರೆ ಸರ್ಕಾರ ರಚಿಸಲು ಬಿಜೆಪಿ ಸಿದ್ಧ ಎಂದರು.

ಸಿಟ್ಟಿನ ವರ್ತನೆ ಸರಿಯಲ್ಲ: ಮಹಿಳೆ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಿಟ್ಟಿನ ವರ್ತನೆ ಸರಿಯಲ್ಲ ಎಂದರು. ದೇವರಾಜ ಅರಸು ಅವರಿಗೆ ಹೋಲಿಸಿಕೊಳ್ಳುತ್ತಿದ್ದ ನೀವು ಇಂತಹ ನಡುವಳಿಕೆ ತೋರುವುದು ಎಷ್ಟು ಸರಿ.. ಎಂದು ಪ್ರಶ್ನಿದರು.

 

One Reply to “ಕುಮಾರಸ್ವಾಮಿ ರಾಜೀನಾಮೆ‌ಗೆ ಕೋಟೆ ಎಂ. ಶಿವಣ್ಣ ಆಗ್ರಹ”

Comments are closed.