ಚಿಕ್ಕೋಡಿ: ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಹನುಮಾನ ದೇವರ (ಓಕುಳಿ)ಜಾತ್ರೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಕುದುರೆ ಗಾಡಿ ಶರ್ಯತ್ತು ಓಟ ಪ್ರೇಕ್ಷಕರ ಗಮನ ಸೆಳೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಕುಂಬಾರ ಮತ್ತು ಗ್ರಾಪಂ ಸದಸ್ಯರು ಕುದುರೆ ಗಾಡಿ ಶರ್ಯತ್ತಿಗೆ ಚಾಲನೆ ನೀಡಿದರು. ಶರ್ಯತ್ತಿನಲ್ಲಿ ರಾಜು ಉಮರಾಣಿ ಗಾಡಿ ಪ್ರಥಮ, ಶಂಕರ ಕೋಳಿ ಗಾಡಿ ದ್ವಿತೀಯ, ರವಿ ಸನದಿ ತೃತೀಯ ಹಾಗೂ ಹೊಸ ಕುದುರೆ ಗಾಡಿ ಶರ್ಯತ್ತಿನಲ್ಲಿ ಅಜಿತ ಶಿರಹಟ್ಟಿ ಪ್ರಥಮ, ಅನಿಲ ಮೋರೆ ದ್ವಿತೀಯ ಸ್ಥಾನ ಪಡೆದವು. ವಿಜೇತ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು. ಜತೆಗೆ ಸೈಕಲ್ ಶರ್ಯತ್ತು ನಡೆಯಿತು. ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ, ಉಪಾಧ್ಯಕ್ಷೆ ರೋಹಿನಿ ಕವಣಿ, ಶಂಕರ ಗುರಜಾಯಿ, ಮಹಾಂತೇಶ ಚವ್ಹಾಣ, ಮಲ್ಲಿಕಾರ್ಜುನ ಬೀಡ, ದೇವರಾಜ ಪಾಶ್ಚಾಪೂರೆ, ಮಲ್ಲಿಕಾರ್ಜುನ ಅರಭಾಂವಿ, ಶಿವರಾಜ ಮುಗಳಿ, ಚಂದ್ರಕಾಂತ ನಿಂಗಪ್ಪಗೋಳ,ನಟರಾಜ ಹಿರೇಮಠ, ಮಹಾಂತೇಶ ಯಶವಂತ, ಸಂಭಾಜಿ ಚವ್ಹಾಣ, ಬಸವರಾಜ ಪಾಶ್ಚಾಪೂರೆ, ನಂದಕುಮಾರ ಖಟಾವಿ, ಅಯುಬಖಾನ ಇತರರಿದ್ದರು.