ಕುತಂತ್ರಿಗಳ ಮೇಲೆ ಕಣ್ಣಿಡಿ

ಕಲಬುರಗಿ: ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಏನೇ ಕಾರಣಗಳಿರಲಿ, ಈ ವಿಷಯದಲ್ಲಿ ಒಬ್ಬರ ಬಗ್ಗೆ ಇನ್ನೊಬ್ಬರು ಚಾಡಿ ಹೇಳುವುದು ಬೇಡ. ಯಾರೇನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಚರ್ಚಿಸುವುದರಿಂದ ಪ್ರಯೋಜನವಿಲ್ಲ. ಅದೆಲ್ಲ ಬಿಟ್ಟು ಪಕ್ಷ ಬಲಪಡಿಸಲು ಏನು ಮಾಡಬೇಕು? ಬರಲಿರುವ ಎಲೆಕ್ಷನ್ ಹೇಗೆ ಎದುರಿಸಬೇಕು ಎಂಬುದನ್ನು ಯೋಚಿಸಿ. ಕಿತಾಪತಿ ಮಾಡುವ ಕುತಂತ್ರಿಗಳ ಮೇಲೂ ಒಂದು ಕಣ್ಣಿಡಿ. ಹೀಗೆ ಹೇಳಿದವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾಜರ್ುನ ಖರ್ಗೆ
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಕೃತಜ್ಞತಾ ಸಭೆಯಲ್ಲಿ ಕಲಬುರಗಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ನಾನು ಸೋತಿದ್ದಕ್ಕೆ ಯಾರನ್ನೂ ದೂಷಿಸುವುದಿಲ್ಲ. ನನ್ನಲ್ಲಿ ಯಾವ ಲೋಪಗಳಿದ್ದವು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ. ಆದರೆ ನೀವ್ಯಾರೂ ಧೃತಿಗೆಡಬೇಡಿ ಎಂದು ಹೇಳಿ ಹುರಿದುಂಬಿಸಿದರು.
ಪಕ್ಷದ ಬೆನ್ನೆಲುಬಾಗಿರುವ ಕಾರ್ಯಕರ್ತರು ಧೈರ್ಯದಿಂದ ಮುನ್ನುಗ್ಗಿ. ಎಂಥ ಸಂದರ್ಭದಲ್ಲೂ ನಾನು ನಿಮ್ಮೊಂದಿಗೆ ಇರುತ್ತೇನೆ. ಈ ಸೋಲು ನನ್ನೊಬ್ಬನ ಸೋಲಲ್ಲ. ನಾವೆಲ್ಲರೂ ಪಾಲಿಸಿಕೊಂಡು ಬಂದಿರುವ ತತ್ವ ಸಿದ್ಧಾಂತದ ಸೋಲು. ಮೊದಲ ಸಲ ಸೋತಿದ್ದೇನೆ, ನೋವಾಗಿದೆ. ಆದರೂ ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸ ಮಾಡುವ ಮೂಲಕ ಗಟ್ಟಿಯಾಗೋಣ ಎಂದರು.
ನಾವು ಒಂದ್ಸಲ ಸೋತಿದ್ದೇವೆ. ಆದರೆ ಈ ಹಿಂದೆ ಬಿಜೆಪಿ, ಸಿಪಿಐ-ಸಿಪಿಎಂದವರು ಎಷ್ಟೋ ಸಲ ಸೋತಿದ್ದರೂ ಪಕ್ಷವನ್ನು ಬಿಟ್ಟಿಲ್ಲ. ಹಾಗೆ ನಾವೆಲ್ಲರೂ ಸೇರಿ ಕೆಲಸ ಮುಂದುವರಿಸೋಣ. ಪ್ರಧಾನಿ ಮೋದಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದವರು. ನಾನು 5,23,552 ಮತ ಪಡೆದಿದ್ದೇನೆ ಅಂದರೆ ಇಷ್ಟೊಂದು ಜನರು ನಮ್ಮೊಂದಿಗೆ ಇದ್ದಾರೆ ಎಂದರ್ಥ. ನಾನು ನಿರೀಕ್ಷಿಸಿದಂತೆ ಗುರುಮಠಕಲ್ನಲ್ಲಿ ಮತಗಳು ಸಿಗಲಿಲ್ಲ. ಆದರೆ ಕೊರತೆಯಾಗಿರುವ 95 ಸಾವಿರ ಮತಗಳು ಎಲ್ಲಿ ತಪ್ಪಿದವು ಎಂಬ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳೋಣ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕ್ಷೇತ್ರದ ಅಧ್ಯಕ್ಷ ನೀಲಕಂಠರಾವ ಮೂಲಗೆ, ಉತ್ತರ ಕ್ಷೇತ್ರದ ಅಧ್ಯಕ್ಷ ಸೈಯದ್ ಅಹ್ಮದ್, ಮುಖಂಡರಾದ ಬಸವರಾಜ ಭೀಮಳ್ಳಿ, ನಾರಾಯಣರಾವ ಕಾಳೆ, ಕೃಷ್ಣಾಜಿ ಕುಲಕರ್ಣಿ, ದೇವೇಂದ್ರಪ್ಪ ಮರತೂರ, ಚಂದ್ರಶೇಖರ ಸುಲ್ತಾನಪುರ, ಶರಣಬಸಪ್ಪ ಗೋಧಿ, ವಾಣಿಶ್ರೀ ಸಗರಕರ್, ಮಾಜಿ ಮೇಯರ್ ಶರಣಕುಮಾರ ಮೋದಿ, ಯುವ ಮುಖಂಡರಾದ ಸಂಜೀವಕುಮಾರ ಐರೆಡ್ಡಿ, ಫರಾಜುಲ್ ಇಸ್ಲಾಂ, ರಾಜಕುಮಾರ ಕಪನೂರ, ಶಾಂತಪ್ಪ ಕೂಡಲಗಿ, ಶಿವಕುಮಾರ ಬಾಳಿ, ಅಯ್ಯನಗೌಡ ಪಾಟೀಲ್, ಮಜರ್ ಹುಸೇನಿ, ಶಿವಾನಂದ ತೊರವಿ, ರವಿ ರಾಠೋಡ, ಸಂತೋಷ ಪಾಟೀಲ್ ಇತರರಿದ್ದರು. ಕಲಬುರಗಿ, ಖರ್ಗೆ, ಆತ್ಮಾವಲೋಕನ, kalaburagi, Kharge, feedback,


ಸೋಲಿಗೆ ಕಾರಣ ಆತ್ಮಾವಲೋಕನ ಅಗತ್ಯ
ಮಾಜಿ ಸಚಿವರಾದ ಕೆ.ಬಿ.ಶಾಣಪ್ಪ, ಡಾ.ಶರಣಪ್ರಕಾಶ ಪಾಟೀಲ್, ಶಾಸಕಿ ಕನೀಜ್ ಫಾತಿಮಾ ಇಸ್ಲಾಂ, ಮಾಜಿ ಉಪ ಸಭಾಪತಿ ಡೇವಿಡ್ ಸಿಮೆಯೋನ್, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಕೆಪಿಸಿಸಿ ಪ್ರಧಾನ ಕಾರ್ಯದಶರ್ಿ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಖಗರ್ೆ ಸೋಲಿಗೆ ಕಾರಣವೇನು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇಎಸ್ಐ ಆಸ್ಪತ್ರೆ, ಸಿಯುಕೆ ನಿಮರ್ಾಣ, ಸಂವಿಧಾನದ 371(ಜೆ) ಜಾರಿ, ರೈಲ್ವೆ ವಿಭಾಗ ಮಂಜೂರು ಹೀಗೆ ನಾನಾ ಪ್ರಗತಿಪರ ಕೆಲಸ ಮಾಡಿದರೂ ಏಕೆ ಸೋತರು ಎಂಬುದನ್ನು ಒಮ್ಮೆ ಎಲ್ಲರೂ ಯೋಚಿಸಿ ಎಂದರು.

Leave a Reply

Your email address will not be published. Required fields are marked *