More

  ಕುಡಿಯುವ ನೀರಿನ ವ್ಯವಸ್ಥೆ ಆಗ್ರಹಿಸಿ ಮನವಿ

  ದೇವರಹಿಪ್ಪರಗಿ: ಪಟ್ಟಣದ ಯಲಗೂರ ಲೇಔಟ್ ವ್ಯಾಪ್ತಿಯಲ್ಲಿ ಬೊರ್‌ವೆಲ್ ಕೊರೆಯಿವ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಸಾರ್ವಜನಿಕರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

  ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ನೂತನ ಹಣಮಂತ ಯಲಗೂರ ಲೇಔಟ್ ವ್ಯಾಪ್ತಿಯಲ್ಲಿ ಅಂದಾಜು 25 ಮನೆಗಳು ನಿರ್ಮಾಣವಾಗಿದ್ದು, ಇಲ್ಲಿ ನೀರಿನ ಸರಬರಾಜು ಇರುವುದಿಲ್ಲ. ಸಾರ್ವಜನಿಕರಿಗೆ ನೀರಿನ ಕೊರತೆ ಕಾಡುತ್ತಿದೆ. ಪಟ್ಟಣ ಪಂಚಾಯಿತಿಯಿಂದ ಬೊರ್‌ವೆಲ್ ಕೊರೆಯಿಸಿ ಕುಡಿಯುವ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.

  ಶಂಕರಗೌಡ ಪಾಟೀಲ (ಯರನಾಳ), ಮುನ್ನಾ ಮಳಖೇಡ, ಅಪ್ಪಾಕರ ಚಿಕ್ಕಸಿಂದಗಿ, ನಬಿರಸೂಲ್ ಮಣೂರ, ರಾಜೇಸಾಬ್ ಚಿಕ್ಕಸಿಂದಗಿ, ಇಬ್ರಾಹಿಂ ತಾಂಬೋಳಿ, ಕಾಶೀನಾಥ ಕಡ್ಲೇವಾಡ, ಯಾಕೂಬ್ ನದ್ಾ, ದಾದಾ ತಾಂಬೋಳಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts