ಕುಡಿಯುವ ನೀರಿಗಾಗಿ ಜನರ ಪರದಾಟ

ಗಿರೀಶ ಪಾಟೀಲ ಜೊಯಿಡಾ: ತಾಲೂಕಿನ ಕುಂಬಾರವಾಡಾ (ಕಾತೇಲಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸಾಯಿ ಮಾರ್ತR, ಗಾವಂಡೆ ವಾಡಾ, ಕಣೆಮಣೆ, ಕಳಸಾಯಿ ಗಾವಡೆವಾಡಾ ಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದ್ದು, ಸಮಸ್ಯೆ ಬಗೆಹರಿಸುವಲ್ಲಿ ಗ್ರಾಪಂ ವಿಫಲವಾಗಿದೆ.

ಕಳಸಾಯಿ ಮಾರ್ತRಯಲ್ಲಿ ಅಂದಾಜು 30 ಮನೆಗಳಿದ್ದು, 150 ಜನಸಂಖ್ಯೆ ಇದೆ. ಈ ಪ್ರದೇಶಕ್ಕೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದ್ದು, ಸಮೀಪದ ಝುರಿ ನೀರಿಗೆ ಪೈಪ್ ಲೈನ್ ಅಳವಡಿಸಲಾಗಿದೆ. ಆದರೆ, ಅದು ಮಳೆಗಾಲದ ಒಂದು ತಿಂಗಳ ನಂತರ ಬಂದ್ ಆಗುತ್ತದೆ.

ಶಾಶ್ವತ ನೀರಿನ ಪರಿಹಾರಕ್ಕಾಗಿ ಜಿಪಂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪಿಆರ್​ಡಿ ಯೋಜನೆಯಡಿ 8 ಲಕ್ಷ ರೂ. ಅನುದಾನದಲ್ಲಿ 2012-13ರಲ್ಲಿ ಬಾವಿ ನಿರ್ವಿುಸಿ ಅದಕ್ಕೆ ಪಂಪ್ ಅಳವಡಿಸಲಾಗಿದೆ. ಆದರೆ, ಬಾವಿ ನಿರ್ವಿುಸಿ ಉದ್ಘಾಟನೆಗೆ ಮಾತ್ರ ಗುತ್ತಿಗೆದಾರರು ನೀರು ತುಂಬಿಸಿದ್ದರು. ಅದನ್ನು ಬಿಟ್ಟರೆ ಕಳೆದ ಮೂರು ವರ್ಷದಿಂದ ಬಾವಿ ಯಾವತ್ತೂ ತುಂಬಿಲ್ಲ ಎಂದು ನಿವಾಸಿಗಳು ಹೇಳುತ್ತಾರೆ. ಅಲ್ಲದೆ, ನಿರ್ವಿುಸಿದ ಬಾವಿಯ ಆಳ ಕಡಿಮೆ ಇರುವ ಕಾರಣ ನೀರಿನ ಸಂಗ್ರಹವೂ ಕಡಿಮೆ. ಅಡಿಯಷ್ಟು ನೀರಿದೆ. 30 ಮನೆಗಳಿಗೆ ಒಂದೇ ಬಾವಿ ಇರುವ ಕಾರಣ ಜನರು ಸರದಿಯ ಮೇರೆಗೆ ನೀರು ಸಂಗ್ರಹಿಸುತ್ತಾರೆ.

ಜನರಿಗೆ ತಲುಪದ ಅನುದಾನ: ಸರ್ಕಾರವು ಕೋಟ್ಯಂತರ ರೂಪಾಯಿಯ ಅನುದಾನವನ್ನು ಕುಡಿಯುವ ನೀರಿನ ನಿರ್ವಹಣೆಗಾಗಿ ನೀಡುತ್ತಿದ್ದರೂ ಜೊಯಿಡಾ ತಾಲೂಕಿನ ಕೆಲ ಹಳ್ಳಿಗಳಿಗೆ ತಲುಪುತ್ತಿಲ್ಲ. ಪ್ರತಿ ವರ್ಷ ತಾತ್ಕಾಲಿಕ ಯೋಜನೆಗಳಿಗಾಗಿಯೇ ಈ ಅನುದಾನ ವ್ಯರ್ಥವಾಗುತ್ತಿದೆ. ಶಾಶ್ವತ ಯೋಜನೆ ರೂಪಿಸಿದರೆ ಸಾಕಷ್ಟು ಅನುದಾನ ಉಳಿಸಬಹುದು ಎಂಬುದು ಜನರ ವಾದ.

ಗಾವಂಡೆವಾಡಾದಲ್ಲೂ ಅದೇ ಸ್ಥಿತಿ: ಗಾವಂಡೆವಾಡಾದಲ್ಲಿ 10 ಮನೆಗಳಿದ್ದು, 40ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಇಲ್ಲಿರುವ ಒಂದು ಬಾವಿ ಬತ್ತಿ ಹೋಗಿದ್ದು, ಇನ್ನೊಂದು ಬಾವಿ ಕಳೆದೊಂದು ವರ್ಷದಿಂದ ನಿರ್ಮಾಣ ಹಂತದಲ್ಲಿದೆ. ಸದ್ಯ ಕಾಮಗಾರಿ ಸ್ಥಗಿತಗೊಂಡಿದೆ. ಹೀಗಾಗಿ, ಇಲ್ಲಿನ ನಿವಾಸಿಗಳು ದೂರದ ಚಿಕ್ಕ ಹೊಂಡದಿಂದ ನೀರು ತರುತ್ತಿದ್ದಾರೆ. ಆದರೆ, ಇಲ್ಲಿಯೂ ಶುದ್ಧ ನೀರು ಸಿಗದಿರುವುದು ವಿಪರ್ಯಾಸ. ಜಾನುವಾರು, ಕಾಡು ಪ್ರಾಣಿಗಳು ಇಲ್ಲೇ ನೀರು ಕುಡಿಯಲು ಬರುವ ಕಾರಣ ಅವುಗಳ ಮಲಮೂತ್ರಗಳಿಂದ ನೀರು ಕುಲುಷಿತವಾಗಿದೆ. ಅಲ್ಲದೆ, ಇತ್ತೀಚೆಗೆ ಹಾವಿನ ಮೃತ ದೇಹ ಈ ಹೊಂಡದಲ್ಲಿ ತೇಲಾಡುತ್ತಿತ್ತು.

ಜನಪ್ರತಿನಿಧಿಗಳು ಚುನಾವಣೆ ಬಂದಾಗ ಮಾತ್ರ ಓಟಿಗಾಗಿ ಶಾಶ್ವತ ನೀರು ಒದಗಿಸುವ ಭರವಸೆ ನೀಡುತ್ತಾರೆ. ಆದರೆ, ಸದ್ಯದ ಕಷ್ಟವನ್ನು ಕೇಳುವವರು ಯಾರೂ ಇಲ್ಲ. ಗ್ರಾಪಂಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. | ಸುಜಾತಾ ಗಾವಂಡೆಕರ ಗಾವಂಡೆವಾಡಾ ಮಹಿಳೆ

ಈಗಾಗಲೇ ಗ್ರಾಪಂನಿಂದ ತೇಲೋಲಿ, ಮೈನೊಳ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸ ಲಾಗುತ್ತಿದೆ. ಕಳಸಾಯಿ ಮಾರ್ತR ಮತ್ತು ಗಾವಂಡೆವಾಡಾ ಗಳಿಗೂ ಗುರುವಾರದಿಂದ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ. | ಸಂತೋಷ ಅಣ್ವೇಕರ ಪಿಡಿಒ ಕುಂಬಾರವಾಡಾ

Leave a Reply

Your email address will not be published. Required fields are marked *