ಕುಕ್ಕೆ ದೇವಳ ಆನೆ ಚೇತರಿಕೆ

ಸುಬ್ರಹ್ಮಣ್ಯ: ಅಸೌಖ್ಯದಿಂದ ಬಳಲುತ್ತಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಯಶಸ್ವಿ ನಿರಂತರ ಶ್ರುಶ್ರೂಷೆ ಬಳಿಕ ಚೇತರಿಸಿ ಕೊಂಡಿದೆ.

ಗುರುವಾರ 4 ಕಿ.ಮೀ. ವಾಕಿಂಗ್ ಬಳಿಕ ಮಾವುತರಾದ ಶ್ರೀನಿವಾಸ್, ಗುರುಪ್ರಸಾದ್, ಶಿವಕುಮಾರ್ ಆನೆಯನ್ನು ಸವಾರಿ ಮಂಟಪ ಬಳಿಯ ದರ್ಪಣತೀರ್ಥ ನದಿಯಲ್ಲಿ ಸ್ನಾನ ಮಾಡಿಸಿದ್ದು, ಬಳಿಕ ಆನೆ ಲವಲವಿಕೆಯಿಂದ ಓಡಾಡುತ್ತಿದೆ.

ಪಶು ವೈದ್ಯಾಧಿಕಾರಿ ಡಾ.ವೆಂಕಟಾಚಲಪತಿ, ದುಬಾರೆಯ ತಜ್ಞ ಡಾ.ಸೆಟ್ಟಿಯಪ್ಪ ಮತ್ತು ಮೈಸೂರಿನ ಡಾ.ಶ್ರೀನಿವಾಸ್ ಆನೆಗೆ ಚಿಕಿತ್ಸೆ ನೀಡಿದ್ದರು. ಆನೆಯ ಆರೈಕೆಗೆ ದೇವಸ್ಥಾನ ಆಡಳಿತ ಮಂಡಳಿ ಸಂಪೂರ್ಣ ವ್ಯವಸ್ಥೆ ಮಾಡಿತ್ತು. ಭಕ್ತರು ಸ್ವಯಂಪ್ರೇರಿತರಾಗಿ ಆರೈಕೆ ಮಾಡಿ, ಅಗತ್ಯ ವಸ್ತುಗಳನ್ನು ನೀಡಿದ್ದರು.

ತಾಂಬೂಲ ಪ್ರಶ್ನೆ: ಆನೆ ಶೀಘ್ರ ಗುಣಮುಖವಾಗಲು ದೇವಳದಲ್ಲಿ ರಾಜೇಂದ್ರ ಭಟ್ ನೆಟ್ಟಾರು ಮೂಲಕ ತಾಂಬೂಲ ಪ್ರಶ್ನೆ ಚಿಂತನೆ ಇರಿಸಲಾಯಿತು. ಚೇತರಿಕೆಗೆ ಮತ್ತು ಚಿಕಿತ್ಸೆ ಫಲಿಸಲು ದೀರ್ಘಾಯಷ್ಯಕ್ಕೆ ಭಗವಂತನ ಅನುಗ್ರಹಕ್ಕಾಗಿ ಪ್ರಾರ್ಥಿಸಿ ಮಹಾಪೂಜೆ ನಡೆಸಬೇಕು. ಗ್ರಾಮ ದೇವರಾದ ಅಗ್ರಹಾರ ಸೋಮನಾಥೇಶ್ವರ ದೇವಸ್ಥಾನದಲ್ಲಿ ಅಭಿಷೇಕ, ಆನೆ ಶೆಡ್‌ನಲ್ಲಿ ವಾಸ್ತುಹೋಮ, ಸುದರ್ಶನ ಹೋಮ ನಡೆಸಲು ದೈವಜ್ಞರು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *