Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ಕುಂಬಾರನಿಗೆ ವರ್ಷ ನೊಣಕ್ಕೆ ನಿಮಿಷ!

Friday, 10.08.2018, 3:02 AM       No Comments

ಸ್ತುವಾಗಲೀ ಪ್ರಾಣಿ-ಪಕ್ಷಿ-ಕೀಟಗಳೇ ಆಗಲಿ, ಗಾತ್ರ ಸಣ್ಣದಿತ್ತೆಂದ ಮಾತ್ರಕ್ಕೆ ಅವನ್ನು ಕೀಳಂದಾಜು ಮಾಡಬಾರದಂತೆ. ನೊಣವೊಂದು ಮಾಡಬಹುದಾದ ದಾಂಧಲೆಯನ್ನೆಲ್ಲ ‘ಈಗ’ ಎಂಬ ಚಲನಚಿತ್ರದಲ್ಲಿ ನೋಡಿದ್ದೇವೆ. ಈಗ ಹೇಳಹೊರಟಿರುವ ಘಟನೆಗೆ ಕಾರಣವಾಗಿರುವುದೂ ನೊಣವೇ. ಜರ್ಮನಿಯ ನಿಡ್ಡಾ ನಗರದಲ್ಲಿ ‘ಡಾಮಿನೊ’ ಎಂಬ ಕೈಬೆರಳ ಉಗುರಿನ ಗಾತ್ರದ ಬಿಲ್ಲೆಗಳನ್ನು ಸಾಲಾಗಿ ಜೋಡಿಸಿ ವಿಶ್ವ ದಾಖಲೆ ಸೃಷ್ಟಿಸಲು ಸಿದ್ಧತೆ ನಡೆದಿತ್ತು. ಉಸಿರು ತಾಕಿದರೂ, ಹೀಗೆ ಜೋಡಿಸಲ್ಪಟ್ಟವು ಒಂದರ ಮೇಲೊಂದು ಬಿದ್ದು ಒಂದಿಡೀ ಶ್ರಮ ವ್ಯರ್ಥವಾಗುತ್ತಿತ್ತು. ಹೀಗಾಗಿ, ಹಿಂದೆ ಸ್ಥಾಪನೆಯಾಗಿದ್ದ ವಿಶ್ವದಾಖಲೆಯನ್ನು ಮುರಿಯಬೇಕೆಂಬ ಉಮೇದಿನ ಜತೆಗೆ ಅವರಲ್ಲಿ ಆತಂಕವೂ ಹೆಚ್ಚಾಗಿತ್ತು. ಎಲ್ಲರ ಏಕಾಗ್ರತೆಯೂ ಬಿಲ್ಲೆಗಳನ್ನು ನಿಲ್ಲಿಸುವುದರ ಮೇಲೇ ಇತ್ತು. ಅದೆಲ್ಲಿತ್ತೋ ನೊಣವೊಂದು ಹಾರಿಬಂದು ಬಿಲ್ಲೆಯೊಂದನ್ನು ಅಲುಗಿಸಿ ಬೀಳಿಸಿತು. ನೋಡನೋಡುತ್ತಿದ್ದಂತೆ ಅದು ‘ಸರಣಿ ಪ್ರತಿಕ್ರಿಯೆ’ಯಾಗಿ 5 ಲಕ್ಷಕ್ಕೂ ಹೆಚ್ಚು ಬಿಲ್ಲೆಗಳು ನೆಲಕಚ್ಚಿದವು. ಪರಿಣಾಮ ಹೊಸ ವಿಶ್ವದಾಖಲೆ ಸ್ಥಾಪಿಸುವ ಉಮೇದಿನಲ್ಲಿದ್ದ ಸ್ಪರ್ಧಿಗಳೂ, ಸ್ಪರ್ಧೆಯ ಸಂಘಟಕರೂ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಉಂಟಾಯಿತು.

 

Leave a Reply

Your email address will not be published. Required fields are marked *

Back To Top