ಕುಂಜಿಲ ಗ್ರಾಮದಲ್ಲಿ ಜ.೨೬ ರಂದು ಉಚಿತ ಸಾಮೂಹಿಕ ವಿವಾಹ

ಮಡಿಕೇರಿ: ಕುಂಜಿಲ ಪಯ್‌ನರಿ ರಿಲೀಫ್ ಫಂಡ್ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಜ.೨೬ ರಂದು ಕುಂಜಿಲ ಗ್ರಾಮದಲ್ಲಿರುವ ರೌಳತುಲ್ ಉಲೂಂ ಮದ್ರಸದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಜ್ಹಾಕ್ ತಿಳಿಸಿದ್ದಾರೆ
ಅನಾಥ ಮತ್ತು ಬಡ ಹೆಣ್ಣು ಮಕ್ಕಳ ವಿವಾಹವನ್ನು ಸಂಸ್ಥೆ ಕಳೆದ ೧೦ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ, ಈ ಬಾರಿ ಎರಡು ಜೋಡಿಗಳಿಗೆ ಉಚಿತವಾಗಿ ವಿವಾಹ ಮಾಡಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮದ್ಯಾಹ್ನ ೨ ಗಂಟೆಗೆ ಪಯ್‌ನರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಅದವೇಲ್ ಮುಹಮ್ಮದ್ ಹಾಜಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕುಂಜಿಲಂ ತಂಙಳ್ ಅಸಯ್ಯಿದ್ ಮುಹ್ಸಿನ್ ಸೈದಲವಿ ಕೋಯಾ ಅಲ್‌ಬುಖಾರಿ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಭಾಷಣಗಾರರಾಗಿ ಶಾಖಿರ್ ಬಾಖವಿ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ಎರುಮಾಡ್ ತಂಙಳ್ ಅಸ್ಸಯ್ಯಿದ್ ಇಲ್ಯಾಸ್ ಸಖಾಫಿ ಅಲ್ ಹೈದೂರೂಸಿ, ರೌಳುತುಲ್ ಉಲಾಂ ಮದ್ರಸದ ಉಪಾಧ್ಯಕ್ಷ ಮುಹಮ್ಮದ್ ಖಾತಿಂ ಸಖಾಫಿ ಅಲ್ ಹೈದೂರಸಿ, ಮುಹಮ್ಮದ್ ಮುಸ್ಲಿಯಾರ್, ಅಬ್ದುಲ್ ಫೈಝಿ, ಅಬ್ದುಲ್ ಸಖಾಫಿ, ಅಲ್‌ಹಾಜ್ ಅಬೂ ಸೈದ್, ಕುಂಡಂಡ ಎ ಅಬೂಬುಕ್ಕರ್, ಕುಂಜಿಲ ರಿಲೀಫ್ ಫಂಡ್ ಅಧ್ಯಕ್ಷ ಅಬ್ದುರ‌್ರಝಾಖ್, ಸಲಹಾ ಸಮಿತಿಯ ಅಧ್ಯಕ್ಷ ಅಹ್ಮದ್ ಹಾಜಿ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಹ್ಯಾರಿಸ್, ಕೋಶಾಧಿಕಾರಿ ಫೈಜಲ್ ಜೌಹರಿ, ಜಮಾಅತ್ ಪ್ರತಿನಿಧಿ ಅಬ್ದುಲ್ ನಾಸೀರ್, ಸಹಕಾರ್ಯದರ್ಶಿ ಸಿರಾಜುದ್ದೀನ್ ಇದ್ದರು.