ಕುಂಜಾಡಿ ತರವಾಡು ನೇಮೋತ್ಸವ , ರಾಜ್ಯ ಸಚಿವರುಗಳ ಭೇಟಿ-ಜನತೆಗೆ ಹಬ್ಬದ ವಾತವರಣ ಸೃಷ್ಟಿ

ದ.ಕ ಜಿಲ್ಲೆಯ ಕಡಬ ತಾಲೂಕು ಪಾಲ್ತಾಡಿ ಗ್ರಾಮದ ಕುಂಜಾಡಿ ತರವಾಡು ಮನೆಯಲ್ಲಿ ನಡೆಯುತ್ತಿರುವ ಧರ್ಮ ನೇಮೋತ್ಸವ ಅಂಗವಾಗಿ ಗುರುವಾರ ಬೆಳಿಗ್ಗೆ ವಿವಿಧ ಭಜನಾ ತಂಡಗಳಿಂದ ಭಜನೆ ಸೇವೆ, ಉಳ್ಳಾಕುಲು, ಗ್ರಾಮ ದೈವ, ಧರ್ಮ ದೈವ, ಪಿಲಿಚಾಮುಂಡಿ, ರಕ್ತೇಶ್ವರಿ, ಮತ್ತು ಪರಿವಾರ ದೈವಗಳ ಭಂಡಾರ ತರುವ ಕಾರ್ಯ ನಡೆಯಿತು.

ಸುಮಾರು ೫೦೦ ವರ್ಷಗಳ ಇತಿಹಾಸವಿರುವ ತರವಾಡು ಮನೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಗ್ರಾಮದ ಜನತೆಗೆ ಹಬ್ಬದ ವಾತವರಣ ಸೃಷ್ಟಿಸಿದೆ. ಇಡೀ ಗ್ರಾಮವೇ ಕಾರ್ಯಕ್ರಮದ ಸಲುವಾಗಿ ಶೃಂಗಾರಗೊಂಡಿದೆ. ಕಳೆದ ಹಲವು ದಿನಗಳಿಂದ ಕಾರ್ಯಕರ್ತರು ನಿರಂತರ ಶ್ರಮ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕಳೆದರಡು ದಿನಗಳಿಂದ ವಿವಿಧ ಸ್ಥರದ ರಾಜಕೀಯ , ಸಾಮಾಜಿಕ , ಧಾರ್ಮಿಕ ಮುಖಂಡರು ಭೇಟಿ ನೀಡಿದ್ದಾರೆ. ಗುರುವಾರದ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ , ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ಕೆ ಎಸ್ ಈಶ್ವರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ, ಮೊದಲಾದವರು ಭಾಗವಹಿಸಿದ್ದರು.

ಕುಂಜಾಡಿ ತರವಾಡು ನೇಮೋತ್ಸವ , ರಾಜ್ಯ ಸಚಿವರುಗಳ ಭೇಟಿ-ಜನತೆಗೆ ಹಬ್ಬದ ವಾತವರಣ ಸೃಷ್ಟಿ
ಕುಂಜಾಡಿ ತರವಾಡು ನೇಮೋತ್ಸವ , ರಾಜ್ಯ ಸಚಿವರುಗಳ ಭೇಟಿ-ಜನತೆಗೆ ಹಬ್ಬದ ವಾತವರಣ ಸೃಷ್ಟಿ
Share This Article

ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits

fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…

ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign

Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ಪೇನ್​ ಕಿಲ್ಲರ್ ಮಾತ್ರೆ​ vs ಜೆಲ್​… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel

Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…