
ಹಾಸನ: ಮೂಡಿಗೆರೆಯ ನೇಚರ್ ಕ್ಲಬ್, ಹಾಸನದ ಗೆಳೆಯರ ಬಳಗದ ವತಿಯಿಂದ ಗೋಮತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಕೀಟ ವಿಸ್ಮಯ 2020, ಕೀಟಗಳ ಪ್ರದರ್ಶನವನ್ನು ಸೋಮವಾರ ಜಿಲ್ಲಾಧಿಕಾರಿ ಆರ್. ಗಿರೀಶ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಜೀವ ಸಂಕುಲದ ಪ್ರಮುಖ ಕೊಂಡಿಯಾಗಿರುವ ಕೀಟಗಳ ಬಗ್ಗೆ ನಮ್ಮಲ್ಲಿ ತಪ್ಪು ಕಲ್ಪನೆ ಇದೆ. ಕೀಟಗಳಿಲ್ಲದಿದ್ದರೆ ಸಸ್ಯಗಳ ಪರಾಗಸ್ಪರ್ಶ ಕಾರ್ಯವೇ ನಡೆಯುವುದಿಲ್ಲ. ಈ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಮೂಡಿಗೆರೆ ತೋಟಗಾರಿಕೆ ಕಾಲೇಜು ಡೀನ್ ಹನುಮಂತಪ್ಪ, ಡಿಎಫ್ಒ ಸಿವರಾಂ ಬಾಬು, ಡಿಡಿಪಿಐ ಪ್ರಕಾಶ್, ಡಿಎಚ್ಒ ಡಾ.ಸತೀಶ್, ಸಮಾಜ ಸೇವಕ ದಿನೇಶ್, ಕಾರ್ಯಕ್ರಮದ ಸಂಚಾಲಕ ಧನಂಜಯ ಜೀವಾಳ ಮಾತನಾಡಿದರು.
ನೂರಾರು ಕೀಟ ಪ್ರಭೇದಗಳ ಮಾದರಿಗಳು, ಅಂತಾರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿರುವ ಪರಿಸರ ಸಂಬಂಧಿಸಿದ ಪುಸ್ತಕಗಳು ಹಾಗೂ ಕೀಟಗಳ ಅಂಚೆ ಚೀಟಿಗಳನ್ನು ಪ್ರದರ್ಶಿಸಲಾಗುತ್ತಿದೆ.