ಕಿರು ಸೇತುವೆ ನಿರ್ವಿುಸಲು ಶೀಘ್ರ ಕ್ರಮ

ಕಾರ್ಗಲ್: ಮಲೆನಾಡಿನಲ್ಲಿ ಅಪಾಯಕಾರಿ ಕಾಲುಸಂಕಗಳಿದ್ದು, ಗ್ರಾಮಸ್ಥರು, ಶಾಲಾ ಮಕ್ಕಳು ಮಳೆಗಾಲದ ಸಂದರ್ಭದಲ್ಲಿ ಸಂಕಷ್ಟ ಎದುರಿಸುವಂತಾಗಿದೆ. ಈ ವರ್ಷದಲ್ಲಿಯೇ ಕಿರು ಸೇತುವೆಗಳ ನಿರ್ವಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು. ಅರಳಗೋಡು ಪಂಚಾಯಿತಿ ವ್ಯಾಪ್ತಿಯ ಇಂದ್ರೋಡಿಮನೆ ಗ್ರಾಮದಲ್ಲಿ ಮಂಗಳವಾರ ದಂಡಾವತಿ ಜಲಾಶಯ ಯೋಜನೆಯಡಿ 25 ಲಕ್ಷ ರೂ. ವೆಚ್ಚದ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಈ ಭಾಗದ ಕೆಲ ಗ್ರಾಮಗಳಲ್ಲಿ ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿವೆ. ಇದನ್ನು ಸರಿಪಡಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು. ಇಂದ್ರೋಡಿಮನೆ ಹಾಗೂ ಕುಡುಗುಂಜಿ ಗ್ರಾಮದ ನಡುವಿನ ಸಂಪರ್ಕ ಸೇತುವೆ ಶಿಥಿಲಗೊಂಡಿದ್ದು ಮಳೆಗಾಲದಲ್ಲಿ ಇನ್ನಷ್ಟು ಶಿಥಿಲಗೊಳ್ಳುವ ಅಪಾಯವಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ. ಸಂಬಂಧಪಟ್ಟ ಅಧಿಕಾರಿಗಳ ಜತೆ ರ್ಚಚಿಸಿ ಸೇತುವೆ ನಿರ್ವಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಜಿಪಂ ಸದಸ್ಯ ರಾಜಶೇಖರ ಗಾಳಿಪುರ, ಗ್ರಾಪಂ ಉಪಾಧ್ಯಕ್ಷೆ ಶಿವಮ್ಮ ಮೇಘರಾಜ್, ಸದಸ್ಯೆ ಬೇಬಿ, ಮಾಜಿ ಸದಸ್ಯ ರಮಾನಂದ ಶರ್ಮಾ ಮೇಲೂರುಮನೆ, ಪ್ರಮುಖರಾದ ಪ್ರಸನ್ನ ಕೆರೆಕೈ, ಹು.ಭಾ.ಅಶೋಕ್, ಲಕ್ಷ್ಮೀನಾರಾಯಣ್ ನಂದೋಡಿ, ಟಿ.ಸುರೇಶ್, ಸುರೇಶ್ ಇಂದ್ರೋಡಿಮನೆ, ಆನಂದ ಜನ್ನೆಹಕ್ಲು, ದೇವರಾಜ್ ಜೈನ್, ನಾಗೇಂದ್ರ ಮಹಾಲೆ ಇತರರಿದ್ದರು.

Leave a Reply

Your email address will not be published. Required fields are marked *