ಕಿರಣ ಹಾನಗಲ್​ಗೆ ಸ್ವರ ಶ್ರದ್ಧಾಂಜಲಿ

ಗದಗ:ಯುವ ಕಲಾವಿದ ಕಿರಣ ಹಾನಗಲ್ ಅವರು ಚಿಕ್ಕ ವಯಸ್ಸಿನಲ್ಲಿಯೇ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ್ದರು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಡಿತ ರಾಜಗುರು ಗುರುಸ್ವಾಮಿ ಕಲಕೇರಿ ಹೇಳಿದರು.

ನಗರದ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಕಲಾಭವನದಲ್ಲಿ ಗುರು ಪಂಚಾಕ್ಷರಿ ಸೇವಾ ಸಮಿತಿ ವತಿಯಿಂದ ಇತ್ತೀಚೆಗೆ ಜರುಗಿದ ಯುವ ಕಲಾವಿದ ಕಿರಣ ಹಾನಗಲ್ ಅವರ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷ ಉಸ್ತಾದ್ ಫಯಾಜ್​ಖಾನ್ ಹಾಗೂ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯ ಪಂಡಿತ ಸಿದ್ಧೇಶ್ವರಶಾಸ್ತ್ರಿ ತೆಲ್ಲೂರ ಅವರು ಕಲಾವಿದ ಕಿರಣ ಹಾನಗಲ್ ಅವರೊಂದಿಗಿನ ಒಡನಾಟದ ಕುರಿತು ಮಾತನಾಡಿದರು. ಗುರು ಪಂಚಾಕ್ಷರಿ ಸೇವಾ ಸಮಿತಿ ಉಪಾಧ್ಯಕ್ಷ ಮಹೇಶ್ವರ ಸ್ವಾಮೀಜಿ ಹೊಸಹಳ್ಳಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲಾವಿದ ಉಸ್ತಾದ್ ಫಯಾಜ್​ಖಾನ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ನಿಸಾರ್ ಅಹಮ್ಮದ್ ತಬಲಾ, ಸಿದ್ಧಲಿಂಗೇಶ ಕಣವಿ ಹಾಮೋನಿಯಂ ಸಾಥ್ ನೀಡಿದರು. ಕುಂದಾಪುರದ ಸತೀಶ ಭಟ್, ಶಿವಬಸಯ್ಯ ಗಡ್ಡದಮಠ, ಅರ್ಜುನ ವಠಾರ, ಶರಣು ವಠಾರ, ಸಿದ್ಧಲಿಂಗೇಶ ಕಣವಿ, ರಮೇಶ ಕೊಲಕುಂದ, ರವಿ ಡಘ, ಸಂತೋಷ ನಂದರಗಿ, ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಾರಾಯಣ ಹಿರೆಕೊಳಚಿ ವಾಯಲಿನ್ ನುಡಿಸಿದರು. ಗಣೇಶ ಗೋರ್ಟಾ, ಪ್ರಭಾಕರ ಮನ್ನಮ್ಮನವರ ತಬಲಾ ಸಾಥ್ ನೀಡಿದರು. ಸಿದ್ಧಲಿಂಗಶಾಸ್ತ್ರಿ ಗಡ್ಡದಮಠ ನಿರೂಪಿಸಿದರು. ಗಣೇಶ ಗೋರ್ಟಾ ವಂದಿಸಿದರು.