ಕಿಮ್ಸ್​ಗೆ ಕಾಡುತ್ತಿದೆ ಅನಾರೋಗ್ಯ!

ಹುಬ್ಬಳ್ಳಿ: ಉತ್ತರ ಕರ್ನಾಟಕದ ಬಡವರ ಸಂಜೀವಿನಿ ಇಲ್ಲಿನ ಕಿಮ್್ಸ (ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ) ಆಸ್ಪತ್ರೆ ಈಗ ಗಬ್ಬೆದ್ದು ನಾರುತ್ತಿದೆ !  ಸುಮಾರು 700 ಗುತ್ತಿಗೆ ಸಿಬ್ಬಂದಿ ಕನಿಷ್ಠ ವೇತನ, ಇಎಸ್​ಐ ಸೇವೆ ಹಾಗೂ ಪಿಎಫ್ ಕೊಡುತ್ತಿಲ್ಲ ಎಂದು ಆರೋಪಿಸಿ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ನಿರ್ವಹಣೆ ಕೊರತೆಯಿಂದ ಕಿಮ್್ಸ ಅನಾರೋಗ್ಯಕ್ಕೀಡಾಗಿದೆ.

ಸುಮಾರು 5 ಏಜೆನ್ಸಿಗಳು ಕಿಮ್ಸ್​ಗೆ ಗುತ್ತಿಗೆ ಸಿಬ್ಬಂದಿಯನ್ನು ಪೂರೈಕೆ ಮಾಡುತ್ತಿವೆ. ಗುತ್ತಿಗೆ ಆಧಾರಿತ ಸಿಬ್ಬಂದಿ ಇದ್ದಾರೆ. ಇವರೇ ಕಿಮ್ಸ್​ಗೆ ಜೀವಾಳ. ಕಿಮ್ಸ್​ಗೆ ದಾಖಲಾಗುವ ರೋಗಿಯ ಹೆಸರು ನೋಂದಾಯಿಸುವ, ಸ್ಟ್ರೆಚರ್ ಮೇಲೆ ಕರೆ ತರುವ, ಬೇರೆಡೆ ಕಳುಹಿಸುವ, ಸ್ವಚ್ಛತೆ, ನೀರು ಪೂರೈಕೆ ಇವೆಲ್ಲವೂ ಸ್ಥಗಿತಗೊಂಡಿದೆ. ಇದರಿಂದ ಇಡೀ ಕಿಮ್್ಸ ಆಸ್ಪತ್ರೆ ಗಬ್ಬು ನಾರುತ್ತಿದೆ. ಲಿಫ್ಟ್​ಗಳಲ್ಲಿ ರೋಗಿಯನ್ನು ಸಾಗಿಸುವ ಕೆಲಸ ನಡೆಯುತ್ತಿಲ್ಲ. ಇದರಿಂದ ರೋಗಿಗಳಿಗೆ ಏನಾದರೂ ಸಮಸ್ಯೆಯಾದರೆ ಹೇಗೆಂದು ಹಿರಿಯ ವೈದ್ಯರು ‘ಪತ್ರಿಕೆ’ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಸಫಾಯಿ ಕರ್ವಚಾರಿ ಆಯೋಗದ ರಾಜ್ಯ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಸದಸ್ಯರು ಭೇಟಿ ನೀಡಿ ಶೀಘ್ರ ಕನಿಷ್ಠ ವೇತನ ಪಾವತಿಸಿ ಎಂದು ಎಚ್ಚರಿಕೆ ನೀಡಿದ್ದರು. ಕಿಮ್್ಸ ನಿರ್ದೇಶಕ ಡಾ. ಡಿ.ಡಿ. ಬಂಟ್ ಏಪ್ರೀಲ್ ಮೊದಲ ವಾರದಿಂದ ನೌಕರರಿಗೆ ಕಾರ್ವಿುಕ ಕಾಯ್ದೆ ಪ್ರಕಾರ ಕನಿಷ್ಠ ವೇತನ ಪಾವತಿಸುವುದಾಗಿ ತಿಳಿಸಿದ್ದರು. ಆದರೆ, ಅನುಷ್ಠಾನ ವಿಳಂಬವಾಗಿದೆ. ಇದು ಗುತ್ತಿಗೆ ಕಾರ್ವಿುಕರನ್ನು ಮತ್ತಷ್ಟು ಕೆರಳಿಸಿದೆ. ಕನಿಷ್ಠ ವೇತನ ಸೇರಿ ಇತರೆ ಸೌಲಭ್ಯ ಪೂರೈಕೆ ಆಗುವವರೆಗೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಗುತ್ತಿಗೆ ಸಿಬ್ಬಂದಿ ಪಟ್ಟು ಹಿಡಿದರುವುದು ಆಡಳಿತ ಮಂಡಳಿಗೆ ತಲೆನೋವು ತರಿಸಿದೆ.

ಡಿಕೆಶಿ ಗಮನಕ್ಕಿದ್ದರೂ ಕಿಮ್ಸ್​ಗೆ ಬರಲಿಲ್ಲ

ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ ಅವರು ಬೆಳಗಾವಿ ಪ್ರವಾಸ ಹಿನ್ನೆಲೆಯಲ್ಲಿ ನಗರದ ಡೆನಿಸನ್ಸ್ ಹೋಟೆಲ್​ನಲ್ಲಿ ತಂಗಿದ್ದರು. ಶುಕ್ರವಾರ ರಾತ್ರಿ ಗುತ್ತಿಗೆ ಸಿಬ್ಬಂದಿ ಡಿಕೆಶಿಯನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಿದ್ದರು. ಸಚಿವರು ಸಮಸ್ಯೆ ಪರಿಹರಿಸುವ ಭರವಸೆ ನೀಡಿದರೇ ಹೊರತು ಕಿಮ್್ಸ ಕಡೆ ಇಣುಕಿ ನೋಡಲಿಲ್ಲ. ಮೂರು ದಿನದಿಂದ ಕಿಮ್್ಸ ಅವ್ಯವಸ್ಥೆಯಲ್ಲಿದ್ದರೂ ಸಚಿವರು ಬಾರದೇ ಇರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ನ್ಯಾಯಾಲಯದಿಂದ ತಡೆಯಾಜ್ಞೆ

ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಡುತ್ತಿದ್ದ ಇನ್​ಫೊಟೆಕ್ ಹೆಸರಿನ ಏಜೆನ್ಸಿಯೊಂದು ಹೊಸ ಟೆಂಡರ್ ನಡೆಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ. ಇದು ಗುತ್ತಿಗೆ ನೌಕರರನ್ನು ಮತ್ತಷ್ಟು ಕೆರಳಿಸಿ ಪ್ರತಿಭಟನೆ ತೀವ್ರಗೊಳಿಸಲು ಕಾರಣವಾಗಿದೆ. ಹೀಗೆ ತಡೆಯಾಜ್ಞೆ ತರಲು ಪ್ರಚೋದನೆಯೂ ನಡೆದಿದೆ ಎಂದು ಆರೋಪಿಸುತ್ತಾರೆ ಗುತ್ತಿಗೆ ಸಿಬ್ಬಂದಿ.

ಜನಪ್ರತಿನಿಧಿಗಳ ಸಂಬಂಧಿಕರ ದರ್ಬಾರ್!

ಹು-ಧಾ ಮಹಾನಗರ ಪಾಲಿಕೆ ಮಾಜಿ ಮೇಯರ್​ಗಳು, ಗಣ್ಯರು ಸರ್ಕಾರಿ ಸಂಸ್ಥೆಗಳಿಗೆ ಸೌಲಭ್ಯ ಕಲ್ಪಿಸಲು ಏಜೆನ್ಸಿ ಪಡೆಯುತ್ತಿದ್ದಾರೆ.  ಅದರಲ್ಲೂ ಗುತ್ತಿಗೆ ಸಿಬ್ಬಂದಿ ಪೂರೈಕೆ ಮಾಡುವಲ್ಲಿ ಎತ್ತಿದ ‘ಕೈ’. ಹೀಗೆ ಏಜೆನ್ಸಿ ಪಡೆದವರ ಆರ್ಭಟ ಎಷ್ಟಿರುತ್ತದೆ ಎಂದರೆ ಯಾರಾದರೂ ಇವರನ್ನು ಎದುರು ಹಾಕಿಕೊಂಡೆರ ಕತೆ ಮುಗೀತು. ಇದಕ್ಕೆ ತಾಜಾ ಉದಾಹರಣೆ ಉಷಾ ಎನ್ನುವ ಗುತ್ತಿಗೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದು. ಹೀಗೆ ಮಾಡುವ ಮೂಲಕ ‘ಎಲ್ಲರ’ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಅವರು ಹೇಳಿದಂತೆ ಆಡಳಿತ ಮಂಡಳಿಯೂ ಕೇಳುವಂತೆ ಮಾಡುತ್ತಾರೆ.

ಗುತ್ತಿಗೆ ಸಿಬ್ಬಂದಿಗೆ ಕಾರ್ವಿುಕ ಕಾಯ್ದೆ ಅನ್ವಯ ಕನಿಷ್ಠ ವೇತನ ಕೊಡಲು ಸಿದ್ಧರಿದ್ದೇವೆ. ಆದರೆ, ಏಜೆನ್ಸಿಯೊಂದು ನ್ಯಾಯಾಲಯದಿಂದ ಹೊಸ ಟೆಂಡರ್ ಕರೆಯದಂತೆ ತಡೆಯಾಜ್ಞೆ ತಂದಿದೆ. ಶೀಘ್ರ ಸಮಸ್ಯೆ ಪರಿಹರಿಸಲಾಗುವುದು.
-ಡಾ.ಡಿ.ಡಿ. ಬಂಟ್, ಕಿಮ್್ಸ ನಿರ್ದೇಶಕ.

ನಮಗೆ ಕನಿಷ್ಠ ವೇತನ ನೀಡಿದ್ದರೆ ಕಿಮ್ಸ್​ನಲ್ಲಿ ಅಸ್ವಚ್ಛತೆ ಸಮಸ್ಯೆ ಬರುತ್ತಿರಲಿಲ್ಲ. ಕಾರ್ವಿುಕ ಕಾಯ್ದೆ ಪ್ರಕಾರ ಸೌಲಭ್ಯ ಕೊಡಿ ಎಂದು ಕೇಳಿದರೆ ಗದರಿಸಲಾಗುತ್ತಿದೆ. ಒಂದು ಸಂಘ ಮಾಡಿಕೊಂಡು ಮತ್ತಷ್ಟು ಹೋರಾಟ ನಡೆಸಲಾಗುವುದು.
-ಶ್ರೀನಿವಾಸ, ಕಿಮ್್ಸ ಗುತ್ತಿಗೆ ಸಿಬ್ಬಂದಿ