ಕಿನ್ನಾಳಗೆ ಸಿಇಒ ರಾಹುಲ್ ರತ್ನಂ ಪಾಂಡೆಯ ಭೇಟಿ

blank

ಕೊಪ್ಪಳ: ಕೂಸಿನ ಮನೆಗಳು ಮಕ್ಕಳ ಆಕರ್ಷಣೀಯ ಕೇಂದ್ರಗಳಾಗರಲಿ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಹೇಳಿದರು.
ತಾಲೂಕಿನ ಕಿನ್ನಾಳ ಗ್ರಾಪಂನ ಕೂಸಿನ ಮನೆಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.


ಈಗಾಗಲೇ ಕಟ್ಟಡಕ್ಕೆ ರಂಗು ರಂಗಿನಿಂದ ಮಕ್ಕಳ ಚಿತ್ರಗಳನ್ನು ಬಿಡಿಸಿರುವದು, ಅಡುಗೆ ಕೊಠಡಿ, ಶೌಚಗೃಹ ವೀಕ್ಷಿಸಿದರು. ಸೋಲಾರ್ ಅಳವಿಡಿಸಿ. ಇದರಿಂದ ವಿದ್ಯುತ್ ಸಮಸ್ಯೆ ನಿವಾರಿಸಬಹುದು. ಮಕ್ಕಳಿಗೆ ನೂತನ ಆಟಿಕೆ ಸಾಮಾನುಗಳನ್ನು ಒದಗಿಸಿ. ಇದರಿಂದ ಕೇಂದ್ರಗಳು ಮಾದರಿಯಾಗಲಿವೆ.ಕಿನ್ನಾಳ ಕಲೆ ದೇಶಕ್ಕೆ ಮಾದರಿ. ಆ ದಿಸೆಯಲ್ಲಿ ವಿನೂತನ ಕಾಮಗಾರಿ, ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಮೂಲಕ ಜಿಲ್ಲೆಗೆ ಮಾದರಿ ಗ್ರಾಪಂ ಆಗಿ ಅಭಿವೃದ್ಧಿಪಡಿಸುವಂತೆ ಸೂಚಿಸಿದರು.


ನಂತರ ವಿಕಲಚೇತನರ ಸ್ನೇಹಿ ಗ್ರಂಥಾಲಯಕ್ಕೆ ಭೇಟಿ ನೀಡಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿರುವ ಬಗ್ಗೆ ಖಚಿತಪಡಿಸಿಕೊಂಡರು. ನರೇಗಾದಡಿ 10 ಲಕ್ಷ ರೂ.ನಲ್ಲಿ ನಿರ್ಮಿಸುತ್ತಿರುವ ಉದ್ಯಾನ ವೀಕ್ಷಿಸಿದರು. ಪಿಒಎಸ್ ಮಷೀನ್ ಮೂಲಕ ಕರ ವಸೂಲಿ ಮಾಡುವಂತೆ ನಿರ್ದೇಶಿಸಿದರು. ಜಿಪಂ ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ತಾಪಂ ಇಒ ದುಂಡಪ್ಪ ತುರಾದಿ. ಪಿಡಿಒ ವೀರನಗೌಡ, ಕಾರ್ಯದರ್ಶಿ ನೀಲಮ್ಮ ಗ್ರಾಪಂ ಸಿಬ್ಬಂದಿ ಚಂದ್ರಶೇಖರ, ವಿರೇಶ್, ಮಂಜುನಾಥ, ಕಾರ್ತಿಕ್ ಇದ್ದರು.

Share This Article

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಬೇಸಿಗೆಯಲ್ಲಿ ಬಿರುಕು ಬಿಟ್ಟ ಪಾದಗಳು ಸುಂದರವಾಗಲು ಇಲ್ಲಿದೆ ಅಲ್ಟಿಮೇಟ್ ಟಿಪ್ಸ್! cracked heels

cracked heels: ಬೇಸಿಗೆಯಲ್ಲಿ ಪಾದಗಳಲ್ಲಿ ಬಿರುಕುಗಳು ಸಾಮಾನ್ಯ ಸಮಸ್ಯೆಯಾಗುತ್ತವೆ. ಸರಿಯಾದ ಆರೈಕೆಯ ಕೊರತೆಯು ಒಣ ಚರ್ಮ…

ಈ ಗಿಡಗಳನ್ನು ನಿಮ್ಮ ಮನೆಯ ಬಳಿ ಬೆಳೆಸಿದರೆ ಸಾಕು ಸೊಳ್ಳೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ! Mosquitoe

Mosquitoes : ಮಕ್ಕಳು ಮತ್ತು ವಯಸ್ಕರು ಸಾಮಾನ್ಯವಾಗಿ ಮನೆಯಲ್ಲಿ ಎದುರಿಸುವ ದೊಡ್ಡ ಕಿರಿಕಿರಿಗಳಲ್ಲಿ ಸೊಳ್ಳೆಗಳು ಕೂಡ…