ಕಿಡಿಗೇಡಿಗಳಿಂದ ಬೈಕ್, ಸೈಕಲ್​ಗೆ ಬೆಂಕಿ

ಮುಂಡಗೋಡ: ಪಟ್ಟಣದ ಗಾಂಧಿನಗರ ಬಡಾವಣೆಯ ಮಳೆಬಸವೇಶ್ವರ ದೇವಸ್ಥಾನದ ಹತ್ತಿರದ ಅರಣ್ಯ ಇಲಾಖೆ ಸಿಬ್ಬಂದಿ ಮನೆಯ ಮುಂದೆ ಇಟ್ಟಿದ್ದ ಬೈಕ್ ಹಾಗೂ ಸೈಕಲ್​ಗೆ ಬುಧವಾರ ರಾತ್ರಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ಇಲ್ಲಿನ ಅರಣ್ಯ ಇಲಾಖೆ ಡಿಪೋದಲ್ಲಿ ವಾಚ್​ವ್ಯಾನ್ ಆಗಿರುವ ರಾಜೇಶ ಸವಣೂರ ಎಂಬುವರಿಗೆ ಸೇರಿದ ಬೈಕ್ ಹಾಗೂ ಸೈಕಲ್ ಸುಟ್ಟಿವೆ. ಬೈಕ್​ನ ಪೆಟ್ರೋಲ್ ಟ್ಯಾಂಕ್ ಹತ್ತಿರ ಇರುವ ಪೈಪ್ ಅನ್ನು ತುಂಡು ಮಾಡಿ ಬೆಂಕಿ ಹಚ್ಚಿರಬಹುದು ಎನ್ನಲಾಗಿದೆ. ವಾಹನದ ಮಾಲೀಕ ಬೆಳಗ್ಗೆ ನೋಡುವಷ್ಟರಲ್ಲಿ ಬೈಕ್ ಮತ್ತು ಸೈಕಲ್ ಸುಟ್ಟಿದ್ದವು. ಈ ಬಗ್ಗೆ ರಾಜೇಶ ಸವಣೂರ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *