ಹಾಸನ: ನಗರದ ರಿಂಗ್ ರಸ್ತೆ ಬಳಿ ಇರುವ ಕಾಸ್ಮೋಪಾಲಿಟನ್ ಆಂಡ್ ಕಲ್ಚರಲ್ ಅಸೋಸಿಯೇಷನ್‌ಗೆ ಭಾನುವಾರ ನಡೆದ ಚುನಾವಣೆಯಲ್ಲಿ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು ಅಧ್ಯಕ್ಷರಾಗಿ ಕೆ.ಪಿ. ಪ್ರಕಾಶ್ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಚುನಾವಣೆ ನಡೆಸುವ ವಿಚಾರವಾಗಿ ಕಾಸ್ಮೋಪಾಲಿಟನ್ ಆಂಡ್ ಕಲ್ಚರಲ್ ಅಸೋಸಿಯೇಷನ್‌ನಲ್ಲಿ ವಿವಾದವೇ ನಡೆದು ನ್ಯಾಯಾಲಯದ ಮೆಟ್ಟಿಲು ಏರಿದ್ದು, ನಂತರದಲ್ಲಿ ಚುನಾವಣೆ ನಡೆಸಲು ಸೂಚನೆ ಬಂದ ಹಿನ್ನಲೆಯಲ್ಲಿ 3 ವರ್ಷದ ಅವಧಿಗೆ ಚುನಾವಣೆ ನಡೆಸಲಾಗಿದೆ. 12 ಜನ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು. ಬಿದರಿಕೆರೆ ಜಯರಾಮ್ ಬಣದಲ್ಲಿ ಅಸೊಸಿಯೇಷನ್ ಅಧ್ಯಕ್ಷರಾಗಿ ಕೆ.ಪಿ. ಪ್ರಕಾಶ್, ಉಪಾಧ್ಯಕ್ಷರಾಗಿ ಬಿ. ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಟಿ. ಜಯರಾಮ್, ಜಂಟಿ ಕಾರ್ಯದರ್ಶಿಯಾಗಿ ಎಂ.ಆರ್. ಶಾಂತೇಗೌಡ, ಖಜಾಂಚಿಯಾಗಿ ಎಚ್.ಕೆ. ಯಧುಗಿರಿಗೌಡ ಇವರನ್ನು ಆಯ್ಕೆ ಮಾಡಲಾಯಿತು. ಇನ್ನು ಉಳಿದಂತೆ ನಿರ್ದೇಶಕರಾಗಿ ಮಹೇಂದ್ರ ಕುಮಾರ್, ಬಿದರಿಕೆರೆ ಜಯರಾಮ್, ಮಂಜುನಾಥ್, ಗೋವಿಂದರಾಜು ಆಯ್ಕೆಗೊಂಡರು. ಇವರಲ್ಲಿ ಮತ್ತೊಂದು ಕಡೆ ಪುಟ್ಟರಾಜೇಗೌಡ ಬಣದಲ್ಲಿ ಜಿ.ಡಿ. ನಾರಾಯಣ್ ಗೌಡ, ಪುಟ್ಟೇಗೌಡ ಈ ಮೂವರು ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ.
ಕಾಸ್ಮೋಪಾಲಿಟನ್ ಆಂಡ್ ಕಲ್ಚರಲ್ ಅಸೋಸಿಯೇಷನ್‌ಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಕೆ.ಪಿ. ಪ್ರಕಾಶ್ ಮಾಧ್ಯಮದೊಂದಿಗೆ ಮಾತನಾಡಿ, ಕಾಸ್ಮೋಪಾಲಿಟನ್ ಆಂಡ್ ಕಲ್ಚರಲ್ ಅಸೋಸಿಯೇಷನ್‌ಗೆ ನಡೆದ ಚುನಾವಣೆಯಲ್ಲಿ 12 ಜನ ನಿರ್ದೇಶಕರ ಪೈಕಿ 9 ಜನರು ನಮ್ಮ ಬಣದಲ್ಲಿ ಆಯ್ಕೆಗೊಂಡಿದ್ದಾರೆ. ನಿರ್ದೇಶಕರು ಎಲ್ಲಾ ಒಂದೇ ಯೂನಿಟ್‌ನಲ್ಲಿ ಹೋಗಬೇಕು. ಅವರಿಗೆ ಏನೆನು ಸೌಲಭ್ಯವಿದೆ ಎಲ್ಲವನ್ನು ಮುಂದುವರೆಸಲಾಗುವುದು ಎಂದರು.
ನಮ್ಮ ಅಧಿಕಾರಾವಧಿಯಲ್ಲಿ ಈ ಕ್ಲಬ್‌ಗೆ ಒಳ್ಳೆಯ ಹೆಸರು ಬರುವ ನಿಟ್ಟಿನಲ್ಲಿ ಎಲ್ಲರ ಸಹಕಾರದಲ್ಲಿ ಕೊಂಡೊಯ್ಯಲಾಗುವುದು. ಈ ಹಿಂದೆ ಕ್ಲಬ್ ವಿಚಾರವಾಗಿ ಭ್ರಷ್ಟಾಚಾರ ನಡೆಸಲಾಗಿದೆ ಎಂಬುದರ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಕೋರ್ಟ್ ತೀರ್ಪಿಗೆ ತಲೆ ಬಾಗುತ್ತೇವೆ. ಮುಂದಿನ ದಿನಗಳಲ್ಲಿ ಕ್ಲಬ್ ಪಕ್ಕದಲ್ಲೇ ಒಂದು ಕಟ್ಟಡ ನಿರ್ಮಾಣ ಮಾಡಿ ಹೊಸ ರೂಂಗಳನ್ನು ಕಟ್ಟಲಾಗುವುದು. ಕಾರ್ ಪಾರ್ಕಿಂಗ್ ಮಾಡಲಾಗುವುದು ಎಂದು ತಮ್ಮ ಉದ್ದೇಶಗಳನ್ನು ಇದೇ ವೇಳೆ ಹೇಳಿದರು.