ಕಾಶ್ಮೀರದಲ್ಲಿ ರೈಲು ಸ್ಫೋಟಕ್ಕೆ ಉಗ್ರರ ಸ್ಕೆಚ್, ಬಿಎಸ್​ಎಫ್

ಜಮ್ಮು: ಮಂಗಳವಾರ ಸಾಂಬಾ ಜಿಲ್ಲೆಯಲ್ಲಿ ಬಿಎಸ್ಎಫ್ ಯೋಧರಿಂದ ಹತ್ಯೆಗೀಡಾದ ಮೂವರು ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ರೈಲು ಸ್ಫೋಟ ನಡೆಸಲು ಸಕಲ ಸಿದ್ಧತೆ ನಡೆಸಿಕೊಂಡು ಬಂದಿದ್ದರು. ಅದಕ್ಕಾಗಿ ಐಇಡಿ ಸ್ಪೋಟಕ ಮತ್ತು ದ್ರವ ಸ್ಪೋಟಕಗಳನ್ನು ತಂದಿದ್ದರು ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿ ನುಸುಳಿ ದೇಶದೊಳಗೆ ಪ್ರವೇಶಿಸಿದ್ದ ಉಗ್ರರು ಅತಿ ದೊಡ್ಡ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದರು. ಅವರು ರೈಲು ಹಳಿ ಮತ್ತು ಚಲಿಸುತ್ತಿರುವ ರೈಲನ್ನು ಸ್ಪೋಟಿಸಲು ಸಿದ್ದರಾಗಿದ್ದರು. ಈ ಉದ್ದೇಶಕ್ಕಾಗಿ ಅವರು ತಂದಿದ್ದ ಚೈನ್ ಐಇಡಿ ಮತ್ತು ದ್ರವ ಸ್ಪೋಟಕಗಳನ್ನು ಬಿಎಸ್ಎಫ್ ವಶ ಪಡಿಸಿಕೊಂಡಿದೆ. ಉಗ್ರರ ಬಳಿಯಿಂದ ವಶಪಡಿಸಿಕೊಂಡಿರುವ ಚೈನ್ ಐಇಡಿಯನ್ನು ರೈಲ್ವೆ ಹಳಿ ಸ್ಪೋಟಿಸಲು ಬಳಸಲಾಗುತ್ತದೆ. ಜತೆಗೆ ದ್ರವ ರೂಪದ ಸ್ಪೋಟಕಗಳಿದ್ದು, ಇದರಿಂದ ಹಳಿಯನ್ನು ಸ್ಪೋಟಿಸಬಹುದು ಮತ್ತು ಬೆಂಕಿ ಹೊತ್ತಿಕೊಳ್ಳುವಂತೆ ಮಾಡಬಹುದು ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಸ್ಎಫ್ ಯೋಧರು ಉಗ್ರರಿಂದ 5 ದ್ರವ ಐಇಡಿ, 3 ಐಇಡಿ ಬೆಲ್ಟ್, 5 ಚೈನ್ ಐಇಡಿ ಸೇರಿದಂತೆ ಅಪಾರ ಪ್ರಮಾಣ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.

– ಪಿಟಿಐ

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *